
ಹಾಸನ : ಇತ್ತೀಚೆಗೆ ಪಹಲ್ಗಾಮ್ ನಲ್ಲಿ ನಡೆದಂತಹ ಹಿಂದುಗಳ ಮೇಲಿನ ಭೀಕರ ಹತ್ಯಾಕಾಂಡ ಹಾಗೂ ಈ ಹಿಂದೆ ಕಾಶ್ಮೀರದ ಹಿಂದುಗಳ ಮೇಲೆ ನಡೆದ ನರಮೇದವನ್ನು ಕಣ್ಣ ಮುಂದೆ ತಂದೊಡ್ಡಿದ್ದು ಅದಕ್ಕೆ ಕಾರಣ, ನಮ್ಮ ದೇಶದಲ್ಲಿ ಅಶಾಂತಿಯನ್ನು ಮೂಡಿಸಿ ನಮ್ಮ ಭಾರತ ದೇಶವನ್ನು ಇಸ್ಲಾಂ ರಾಷ್ಟ್ರವನ್ನಾಗಿ ಮಾಡುವ ಪಕ್ಕದ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಕುತಂತ್ರಕ್ಕೆ ಅಮಾಯಕ ಹಿಂದುಗಳು ಬಲಿಯಾಗುತ್ತಿದ್ದು ಇದಕ್ಕೆ ಕಾರಣ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ನಮ್ಮ ದೇಶಕ್ಕೆ ಬಂದಿರುವ ಅಕ್ರಮ ವಲಸಿಗರೇ ಮೂಲ ಕಾರಣವಾಗಿದ್ದು ಮೊದಲು ಅವರು ಅಕ್ರಮವಾಗಿ ದೇಶದೊಳಗೆ ನುಸುಳಿ ನಮ್ಮ ಹಾಸನ ಜಿಲ್ಲೆಯ ಸಕಲೇಶಪುರ ಹಾಗೂ ಬೇಲೂರು ತಾಲ್ಲೂಕಿನ ಕಾಫಿ ತೋಟಗಳಲ್ಲಿ ಕೆಲಸ ಮಾಡಿಕೊಂಡು ಈಗ ತೋಟದ ಮಾಲೀಕರನ್ನೆ ಎದುರಿಸುವ ಮಟ್ಟಿಗೆ ಬೆಳೆದು ನಿಂತಿದ್ದಾರೆ
ಅದಕ್ಕೆ ಮೂಲ ಕಾರಣ ಇಲ್ಲಿರುವ ಕೆಲವು ಕಿಡಿಗೇಡಿಗಳು ಅವರಿಗೆ ಎಲ್ಲಾ ರೀತಿಯ ದಾಖಲಾತಿಗಳನ್ನು ವ್ಯವಸ್ಥೆ ಮಾಡಿ ಅವರಿಗೆ ವಾಸ್ತವ್ಯ ಹಾಗೂ ಆರ್ಥಿಕ ಸಹಾಯವನ್ನು ಮಾಡಿಕೊಡುತ್ತಿರುವುದು, ಆದ ಕಾರಣ ಕಾಶ್ಮೀರದಲ್ಲಿ ನಡೆದ ಘಟನೆ ದೇಶದ ಎಲ್ಲಾ ಕಡೆಯೂ ನಡೆಯುವ ಎಲ್ಲಾ ಸೂಚನೆಯೂ ಕಾಣುತ್ತಿದೆ ಹಾಗಾಗಿ ಅದನ್ನು ತಡೆಗಟ್ಟುವ ಜವಾಬ್ದಾರಿಯು ನಮ್ಮೆಲ್ಲರ ಮತ್ತು ಮುಖ್ಯವಾಗಿ ಜಿಲ್ಲಾಡಳಿತದ್ದಾಗಿದ್ದು ತಾವು ಕೂಡಲೇ ನಮ್ಮ ಜಿಲ್ಲೆಯಲ್ಲಿರುವ ನುಸುಳು ಕೋರರನ್ನು ಮತ್ತು ಸಂಶಯ ಕಾರರನ್ನು ಕಂಡು ಹಿಡಿದು ಅವರ ಮೇಲೆ ಕಠಿಣ ಕ್ರಮ ಜರುಗಿಸಿ ಅವರನ್ನು ದೇಶದಿಂದ ಗಡಿಪಾರು ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಪ್ರಭು ಗೌಡ, ಅವಿನಾಶ್ ಜಿ.ಎಸ್, ಶ್ಯಾಮ್ ಸುಂದರ್, ರಿಲಯನ್ಸ್ ಲೋಕೇಶ್, ಮಾರುತಿ, ಗಣೇಶ್, ಕಾಂತರಾಜು ಇತರರು ಇದ್ದರು.



