ಸಕಲೇಶಪುರ : ತಾಲೂಕಿನ ಆನೆಮಹಲ್ ಗ್ರಾಮ ಪಂಚಾಯತಿಯಲ್ಲಿ ಖಾಲಿ ಇದ್ದ ಸಾಮಾನ್ಯ ಮಹಿಳೆ ಅಧ್ಯಕ್ಷ ಸ್ಥಾನಕ್ಕೆ ಪರಿಶಿಷ್ಟ ಜಾತಿ ಸುಮಾ ದೇವರಾಜ್ ಸತ್ತಿಗಲ್ 5 ಮತಗಳ ಅಂತರದಿಂದ ಜಯಗಳಿಸಿದ್ದಾರೆ.

ಇವರ ಪ್ರತಿಸ್ಪರ್ಧಿಯಾಗಿ ಚಂದ್ರಮತಿ 4 ಮತ ಗಳಿಸಿದ್ದಾರೆ. ಒಟ್ಟು 10 ಮತಗಳಿದ್ದು,1 ಮತ ಅಸಿಂದುಕೊಂಡಿದ್ದು, ಉಳಿದ 5 ಸುಮಾ ದೇವರಾಜ್ ಗಳಿಸುವ ಮೂಲಕ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿರುತ್ತಾರೆ.

ಈ ಸಂದರ್ಭದಲ್ಲಿ ತಹಸಿಲ್ದಾರ್ ಅರವಿಂದ್, ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ವೇಣುಗೋಪಾಲ್ ಬಿ ಎಚ್ ನೇತೃತ್ವದಲ್ಲಿ ಯಶಸ್ವಿಯಾಗಿ ನೆರವೇರಿದ್ದು, ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಡಿ ಸಿ ಸಣ್ಣಸ್ವಾಮಿ, ಸಕಲೇಶಪುರ ,ಆಲೂರು, ಕಟ್ಟಯ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಮುಖಂಡರಾದ ಧರ್ಮ ಹಿನ್ನಲಿ, ಯುವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಬ್ಬೀರ್, ಉಪಾಧ್ಯಕ್ಷರದ ಜುಬೇರ್, ಗ್ರಾಮ ಪಂಚಾಯತಿ ಉಪಾಧ್ಯಕ್ಷರಾದ ವಿರುಪಾಕ್ಷ , ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ, ಹಾಲಿಸದಸ್ಯರಾದ ಅಸೈನರ್, ಗ್ರಾಮ ಪಂಚಾಯತಿ ಸದಸ್ಯರು, ಮಾಜಿ ಸದಸ್ಯರಾದ ನಿಂಗರಾಜು ಸತ್ತಿಗಲ್, ದೇವರಾಜ್, ಆನಂದ್, ಲಕ್ಷ್ಮಣ ನಿಂಗರಾಜ್ ಕುನಿಗನಹಳ್ಳಿ ವೆಂಕಟೇಶ್ ಹೆನ್ನಲಿ, ರವಿ ಕಲ್ಗಣೆ ಸೇರಿದಂತೆ ಇತರ ಮುಖಂಡರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *