ಹಾಸನ: ಲೋಡ್ ತುಂಬಿದ ಲಾರಿಯೊಂದು ಏಕಮುಖ ಸಂಚಾರದ ವಿರುದ್ಧ ಚಲಿಸಿ ಎದುರು ಬರುತ್ತಿದ್ದ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರಾದ ಪೊಲೀಸ್ ಕಾನ್ಸ್‌ಟೇಬಲ್ ಸಾವನಪ್ಪಿದ ಘಟನೆ ಭಾನುವಾರ ಬೆಳಿಗ್ಗೆ ನಗರದ ಹೊರ ವಲಯ ಕೆಂಚಟ್ಟಹಳ್ಳಿ ಬಳಿ ನಡೆದಿದೆ.

ಬೆಳಿಗ್ಗೆ 9.30ರ ಸಮಯದಲ್ಲಿ 11ನೇ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆ ಪೊಲೀಸ್ ಕಾನಸ್ಟೆಬಲ್ ಪ್ರಕಾಶ್ ( 39) ವರ್ಷ ನಗರದಿಂದ ತಮ್ಮ ಸರ್ಕಾರಿ ವಾಹನ ದ್ವಿಚಕ್ರ ವಾಹನದಲ್ಲಿ ಬೆಳಿಗ್ಗೆ ತೆರಳುವಾಗ ಬೆಂಗಳೂರು ರಸ್ತೆ ಕೆಂಚಟಹಳ್ಳಿ ಬಳಿ ಎಕಮುಖವಾಗಿ ಸಂಚಾರ ವಿರುದ್ಧವಾಗಿ ಬಂದ ಲಾರಿ ಬೈಕ್ ಗೆ ಡಿಕ್ಕಿಯಾಗಿ ಸ್ಥಳದಲ್ಲಿ ಪೊಲೀಸ್ ಕಾನ್ಸಟೆಬಲ್ ಪ್ರಕಾಶ್ ಮೃತರಾಗಿದ್ದಾರೆ.

ಚಿಕ್ಕಮಗಳೂರು ಮೂಲದ ಮೃತ ಪೊಲೀಸ್ ಗಾಡೇನಹಳ್ಳಿಯಲ್ಲಿರುವ ಪೊಲೀಸ್ ವಸತಿ ಗೃಹದಲ್ಲಿ ಕುಟುಂಬ ವಾಸವಾಗಿದ್ದರು. ಭಾನುವಾರ ವಾಗಿದ್ದರಿಂದ ಚಿಕನ್ ತೆಗೆದುಕೊಂಡು ಸಿಟಿಯಿಂದ ವಾಪಸ್ ಕ್ವಾಟ್ರಸ್ ಗೆ ವಾಪಸ್ ಬರುವಾಗ ಈ ದುರ್ಘಟನೆ ನಡೆದಿದೆ.

ಅಪಘಾತ ಸ್ಥಳದಲ್ಲಿ ಚಿಕನ್ ರಸ್ತೆ ಉದ್ದಲಕ್ಕೂ ಚಿಲ್ಲಾಪಿಲ್ಲಿ ಆಗಿತ್ತು. ಮೃತ ಪೊಲೀಸ್ ಪೇದೆ ಪ್ರಕಾಶ್ ಅವರನ್ನು ಹಾಸನ ಜಿಲ್ಲಾಸ್ಪತ್ರೆ ಶವಗಾರದಲ್ಲಿ ಇರಿಸಲಾಗಿದೆ.

ಈ ಸಂಬಂಧ ಹಾಸನ ಸಂಚಾರಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಆಗಮಿಸಿ ಸ್ಥಳ ಪರಿಶೀಲಿಸಿ ಲೋಡ್ ತುಂಬಿದ ಲಾರಿ ಮತ್ತು ಚಾಲಕನನ್ನು ಬಂದಿಸಿ ವಿಚಾರಣೆಗೆ ಒಳಪಡಿಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *