ಸಕಲೇಶಪುರ : ಡಾ. ಬಿ ಆರ್ ಅಂಬೇಡ್ಕರ್ ಅವರ 134 ನೇ ಜನ್ಮ ದಿನಾಚರಣೆ ಅಂಗವಾಗಿ ಪಟ್ಟಣದ ಹೇಮಾವತಿ ಪ್ರತಿಮೆ ಇಂದ ತಾಲೂಕು ಕಚೇರಿ ಆವರಣದಲ್ಲಿರುವ ಡಾ. ಬಿ ಆರ್ ಅಂಬೇಡ್ಕರ್ ಪುತ್ಥಳಿಯ ವರೆಗೂ ಪಟ್ಟಣದ ಮುಖ್ಯ ರಸ್ತೆಯಲ್ಲಿ ಬೌದ್ಧ ಸಮಾಜದ ವತಿಯಿಂದ ಶಾಂತಿಯುತ ಮೆರವಣಿಗೆ ನಡೆಸಲಾಯಿತು. ಹಾಗೂ ಬೌದ್ಧ ಪ್ರತಿಮೆ ಮುಂದೆ ಪ್ರೇಯರ್ ಸಲ್ಲಿಸಿ ಬೌದ್ಧ ವಿಧಿ ವಿಧಾನ ಪ್ರಕಾರ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಅರ್ಥಪೂರ್ಣವಾಗಿ ಜನ್ಮದಿನಾಚರಣೆಯನ್ನು ಆಚರಿಸಲಾಯಿತು.

ಈ ಸಂದರ್ಭದಲ್ಲಿ ಆಲೂರು, ಕಟ್ಟಾಯ, ಸಕಲೇಶಪುರ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿಮೆಂಟ್ ಮಂಜು, ಹಾಗು ಮಾಜಿ ಶಾಸಕರಾದ ಎಚ್ ಕೆ ಕುಮಾರಸ್ವಾಮಿ, ಬೌದ್ಧ ಧರ್ಮಚಾರಿಗಳಾದ ನಾಗಸೇನ್ ಬೈಕೆರೆ, ಬೌದ ಉಪಾಸಕರಾದ ರಮೇಶ್ ದೊಡ್ಡನಗರ, ಬೌದ್ದ ಉಪಸಕರಾದ ವೀರಭದ್ರಪ್ಪ ಹಾಸನ, ಬೌದ್ಧ ಉಪಸಕರಾದ ವೇಣು ಎಂ ಆರ್, ಸಕಲೇಶಪುರ,ಸಾಂತರಾಜ್ ಜಾನಕೆರೆ ಸೇರಿದಂತೆ ಉಪಾಸಕ, ಉಪಾಸಕೀಯರು ಹಾಜರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *