ಸಕಲೇಶಪುರ :-ಜೇನು ಪೋಷಕರ ಸಹಕಾರ ಸಂಘ ನಿ. ಸಕಲೇಶಪುರ ಇದರ 2025-2030ನೇ ಸಾಲಿನ ಸಹಕಾರಿ ವರ್ಷಗಳಿಗೆ ಸಂಘದ ಅಧ್ಯಕ್ಷರಾಗಿ ಜೈ ಮಾರುತಿ ದೇವರಾಜ್ ಹಾಗೂ ಉಪಾಧ್ಯಕ್ಷರಾಗಿ ಮೂಡಿಗೆರೆ ತಾಲ್ಲೂಕು, ಹಂತೂರಿನ ಹೆಚ್. ಎಸ್. ಕೃಷ್ಣಗೌಡ ಅವರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ದಿನಾಂಕ : 23-03-2025 ರಂದು ನಿರ್ದೇಶಕರ ಚುನಾವಣೆ ನಡೆದಿದ್ದು, ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದೆ ನಾಮಪತ್ರ ಸಲ್ಲಿಕೆ ಆಗಿದ್ದರಿಂದ ಚುನಾವಣಾಧಿಕಾರಿ ಆದ ಎನ್. ಮಂಜುನಾಥ, ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿ, ಮಾರಾಟ ಅಧಿಕಾರಿ ಅವರು ಮೇಲ್ಕಂಡವರನ್ನು ಚುನಾಯಿತರಾಗಿರುತ್ತಾರೆಂದು ಘೋಷಿಸಿದರು

ನೂತನವಾಗಿ ಆಯ್ಕೆಯಾದ ಅಧ್ಯಕ್ಷರು ಮತ್ತು ಉಪಾಧ್ಯಕ್ಷರುಗಳಿಗೆ ಮಾಜಿ ಶಾಸಕರಾದ ಹೆಚ್. ಎಂ. ವಿಶ್ವನಾಥ ಶುಭ ಹಾರೈಸಿ ಮಾತನಾಡಿದ ಇವರು ಎಂಟು ದಶಕಗಳಿಂದ ಜೇನು ಪೋಷಕರ ಸಹಕಾರ ಸಂಘವು ಶ್ರೀಯುತ ಎಸ್.ಬಿ. ಅಣ್ಣೆಗೌಡರು ಮಾಡಿದ್ದ ಅಭಿವೃದ್ಧಿ ಕೆಲಸಗಳಿಂದ ಈಗಲೂ ಸಹಾ ಲಾಭದಾಯಕವಾಗಿ ಮುನ್ನಡೆಯಲು ಕಾರಣವಾಗಿದೆ ನಿಮ್ಮ ಆಡಳಿತ ಮಂಡಳಿಯವರು ಇದೇ ರೀತಿ ಲಾಭದಾಯಕವಾಗಿ ಮುಂದುವರೆಸಿಕೊಂಡು ಹೋಗಬೇಕೆಂದು ತಿಳಿಸಿದರು.

ನೂತನವಾಗಿ ಸಂಘದ ನಿರ್ದೇಶಕರುಗಳಾಗಿ ಹೆಚ್.ಸಿ.ಸುರೇಂದ್ರ, ಹೆಚ್. ಆರ್. ಪ್ರಮೋದ್ ಕುಮಾರ್, ಎಂ. ಎಲ್. ಬಸವರಾಜ್, ಎಸ್.ಬಿ. ಕೃಷ್ಣಗೌಡ, ಎನ್.ಕೆ. ವಿಕ್ರಂ, ಕೆ.ಪಿ. ಶಶಿಶೇಖರ್, ಎಂ. ಆರ್. ಉದಯ್ ಕುಮಾರ್, ಯು.ಎಂ. ಜಯರಾಮ್, ಹೆಚ್. ಸಿ. ಹೇಮಂತ್, ಸುಂದರಮ್ಮ, ಜಿ.ಎಸ್. ಈರಯ್ಯ, ಲತಾ ಬಸವರಾಜು, ವಿ. ಆರ್. ನಾಗೇಶ್, ವಸಂತ, ಹಾಗೂ ಡಿ.ಎಸ್. ಬಾಬು, ಇವರುಗಳು ನಿರ್ದೇಶಕರು ಆಗಿ ಆಯ್ಕೆಯಾಗಿರುತ್ತಾರೆ.

ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾದ ಎಸ್. ಸತೀಶ್ ರವರು ಹಾಜರಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed