
ಮತದಾನ ದಿನದಂದು ಅಗತ್ಯ ಸೇವೆಯಲ್ಲಿರುವವರಿಗೆ ಅಂಚೆ ಮತಪತ್ರಗಳ ಮೂಲಕ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಕರ್ನಾಟಕ ಚುಣಾವಣೆ ಹತ್ತಿರ ಬರುತ್ತಿದ್ದಂತೆ ಕೆಲವು ಮತದಾರರಲ್ಲಿ ಗೊಂದಲಗಳು ಕಾಡುತ್ತಿದೆ. ಅದೇನೆಂದರೆ ಚುಣಾವಣೆಗೆ ಅಂಚೆ ಮತದಾನ ಮಾಡಲು ಸಾಮಾನ್ಯ ಜನರಿಗೂ ಅವಕಾಶ ಕಲ್ಪಿಸಲಾಗಿದೆಯೇ? ತಾವೂ ಕೂಡ
ಅಂಚೆ ಮತದಾನಕ್ಕೆ ಅರ್ಹರೇ ಎಂದು ವಾದ ವಿವಾದಗಳ ಚರ್ಚೆ ನಡಿಯುತ್ತಿದೆ
ಆದರೆ ಚುಣಾವಣಾ ಆಯೋಗದ ಪ್ರಕಾರ ನಿರ್ದಿಷ್ಟ ಇಲಾಕೆಯ ಸಿಬ್ಬಂದಿ ಗಳಿಗೆ ಈ ಅವಕಾಶ ಸರ್ಕಾರ ಮಾಡಿಕೊಟ್ಟಿದೆ. ಅಂತಹ ನಿರ್ದಿಷ್ಟ ಇಲಾಕೆಗಳಾವುದು?
ಚುನಾವಣಾ ಆಯೋಗದ ನಿರ್ದೇಶನದನ್ವಯ, ಅಗತ್ಯ ಸೇವೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂದರೆ ವಿದ್ಯುತ್ ಇಲಾಖೆ, ಬಿ. ಎಸ್. ಎನ್. ಎಲ್., ರೈಲ್ವೆ, ಆರೋಗ್ಯ ಇಲಾಖೆ, ವಿಮಾನಯಾನ, ಸಾರಿಗೆ ಸೇವೆ, ಅಗ್ನಿಶಾಮಕದಳ, ಚುನಾವಣಾ ದಿನದ ಕವರೇಜ್ ಮಾಡುವ ಅಧಿಕೃತ ಮಾಧ್ಯಮ ಪ್ರತಿನಿಧಿಗಳು, ಟ್ರಾಫಿಕ್ ಪೊಲೀಸ್ ಹಾಗೂ ಅಂಬ್ಯುಲೆನ್ಸ್ ಸೇವೆಯಲ್ಲಿರುವವರಿಗೆ ಅಂಚೆ ಮತಪತ್ರಗಳ ಮೂಲಕ ಮತಚಲಾಯಿಸಲು ಅವಕಾಶವಿರುತ್ತದೆ.
ವರದಿ ಪ್ರವೀಣ್ ನಾಯ್ಡು
ಲ