ಸಕಲೇಶಪುರ:- ಕಾಶ್ಮೀರದಲ್ಲಿ ಪಹಲ್ಗಾಮ್‍ದಲ್ಲಿ ಉಗ್ರರು ದಾಳಿ ನೆಡೆಸಿ ಅಮಾಯಕ ಹಿಂದುಗಳ ಹತ್ಯೆಯನ್ನು ಮಾಡಿದ್ದನು ಖಂಡಿಸಿ ಶುಕ್ರವಾರ ದೇವಾಲದಕೆರೆಯಲ್ಲಿ ಹಿಂದೂ ಬಾಂಧವರು ಹಾಗೂ ಸನಾತನ ಸೇವಾ ಟ್ರಸ್ಟ್ ವತಿಯಿಂದ ಪ್ರತಿಭಟನೆ ಹಾಗೂ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಮೇಣದ ಬತ್ತಿಯನ್ನು ಬೆಳಗುವ ಮೂಲಕ ಶ್ರದ್ಧಾಂಜಲಿಯನ್ನು ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಸನಾತನ ಸೇವಾ ಟ್ರಸ್ಟ್ಅಧ್ಯಕ್ಷರಾದ ಮಂಜುನಾಥ್ ಸಂಗೀ ” ಹಿಂದೂಗಳ ಮೇಲೆ ನಡೆದ ಹೇಯ ಕೃತ್ಯಕ್ಕೆ ಈಗಾಗಲೇ ನಮ್ಮ ದೇಶದ ವೀರಯೋಧರು ಉಗ್ರರಿಗೆ ತಕ್ಕ ಉತ್ತರವನ್ನು ಬಂದುಕಿನ ಮೂಲಕ ನೀಡಿದ್ದಾರೆ. ಯಾವುದೇ ಉಗ್ರರು ಹಿಂದೂಗಳಿಗೆ ಬಂದೂಕು ತೋರಿಸು ಮೊದಲು ತಮ್ಮ ಸಾವಿನ ಭೀಕರತೆಯ ಬಗ್ಗೆ ಯೋಚನೆ ಮಾಡುವಂತಾಗಲಿ . ಉಗ್ರವಾದವನ್ನು ಬೇರು ಸಹಿತ ಕಿತ್ತೆಸೆಯಲು ಎಲ್ಲಾ ದೇಶದ ಸರ್ಕಾಗಳು ಕಠಿಣ ಕ್ರಮಗಳನ್ನು ಜಾರಿಗೊಳಿಸಬೇಕು. ಅಮಾಯಕ ಹಿಂದೂ ಗಳನ್ನು ಹೆದರಿಸುವ ಇತರ ಕೃತ್ಯಕ್ಕೆ ಮುಂದಾದ ಉಗ್ರರಿಗೆ ಹಾಗೂ ಕೃತ್ಯ ನಡೆಸಲು ಸಹಕರಿಸಿದವರಿಗೆ ತಕ್ಕ ಶಿಕ್ಷೆ ನೀಡಬೇಕು.ಎಂದರು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಲೋಕೇಶ್, ವಿಚಾರವಾದಿ ಹಾಗೂ ಬರಹಗಾರರಾದ ಅರ್ಜುನ್ ದೇವಾಲದಕೆರೆ,ಅನಿಲ್ ಸಂಪುಟಗೋಡು,ಸುನಿಲ್ ದೇವಲಕೆರೆ, ಪರೀಕ್ಷಿತ್,ಡಿ.ಎಸ್ ಸುಧೀಶ್,ಡಿಕೆ ಪ್ರಸನ್ನ ಪೂಜಾರಿ,ಎಸ್ ಆರ್ ಅಶೋಕ್,ರಮೇಶ್ ಆಚಾರಿ ಸೇರಿದಂತೆ ಮುಂತಾದ ಮುಖಂಡರುಗಳು ಭಾಗಿಯಾಗಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *