ಅರೇಹಳ್ಳಿ: ಕಾಶ್ಮೀರದ ಪಹಲ್ಗಾಮ್‌ನಲ್ಲಿ ೨೬ ಅಮಾಯಕ ಪ್ರವಾಸಿಗರ ಮೇಲೆ ನಡೆದ ಭೀಕರ ಹತ್ಯಾಕಾಂಡ ಪ್ರಕರಣ ಮನಸ್ಸಿಗೆ ನೋವನ್ನುಂಟುಮಾಡಿದ್ದು, ಈ ನರಮೇಧಕ್ಕೆ ಕಾರಣಕರ್ತರಾದ ಭಯೋತ್ಪಾದಕರನ್ನು ಹಡೆಮುರಿ ಕಟ್ಟಲು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ದಿಟ್ಟ ತೀರ್ಮಾನವನ್ನು ಕೈಗೊಳ್ಳಲಿದೆ ಎಂದು ಮಾಜಿ ಜಿಲ್ಲಾಪಂಚಾಯಿತಿ ಸದಸ್ಯ ಅಮಿತ್ ಶೆಟ್ಟಿ ಹೇಳಿದರು.

ಬೇಲೂರು ತಾಲೂಕು ಅರೇಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳ ಹಿಂದೂ ಬಾಂಧವರು ಮಿಲಿಟರಿ ಚಂದ್ರಶೇಖರ್ ವೃತ್ತದಿಂದ ಅಂಬೇಡ್ಕರ್ ವೃತ್ತದವರೆಗೆ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಹಿಂದೂಗಳ ಹತ್ಯೆಯಲ್ಲಿ ನಿಧನರಾದವರಿಗೆ ಮೇಣದ ಬತ್ತಿ ಹಚ್ಚಿ ಮೆರವಣಿಗೆಯ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ ಬಳಿಕ ಮಾತನಾಡಿದ ಅವರು, ಕೇವಲ ಧರ್ಮದ ಆಧಾರದ ಮೇಲೆ ಹತ್ಯಾಕಾಂಡ ನಡೆದಿರುವುದು ಹೇಯಕೃತ್ಯವಾಗಿದೆ. ಸಮಾನತೆಯ ತತ್ವದ ಆಧಾರದ ಮೇಲೆ ನಿಂತಿರುವ ಸನಾತನದ ಧರ್ಮವಾದ ಹಿಂದೂ ಧರ್ಮದ ಮೇಲೆ ನಡೆದಿರುವ ಈ ದಾಳಿಯನ್ನು ಇಡೀ ವಿಶ್ವವೇ ಖಂಡಿಸುತ್ತಿದೆ.

ಇಂದು ಕಾಶ್ಮೀರದಲ್ಲಾದ ಸ್ಥಿತಿ ಭಾರತದ ಇತರೆ ಭಾಗಗಳಲ್ಲೂ ನಡೆಯಬಹುದು. ಈ ನಿಟ್ಟಿನಲ್ಲಿ ಪಕ್ಷಬೇಧ,ಜಾತಿ ಬೇಧ ಮರೆತು ಎಲ್ಲರೂ ಒಂದಾಗಿ ಇಂತಹ ನೀಚ ಕೃತ್ಯವನ್ನು ಖಂಡಿಸಬೇಕು. ವಿಶ್ವನಾಯಕ ನರೇಂದ್ರ ಮೋದಿಯವರು ಭಯೋತ್ಪಾದನೆಯನ್ನು ಪ್ರೋತ್ಸಾಹಿಸುತ್ತಿರುವ ಪಾಕಿಸ್ತಾನವನ್ನು ವಿಶ್ವ ಭೂಪಟದಲ್ಲಿ ಇರದಂತೆ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಭಯೋತ್ಪಾದನೆ ಇರುವವರೆಗೂ ಯಾವುದೇ ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ. ಹಾಗಾಗಿ ಭಯೋತ್ಪಾದನೆ ನಿರ್ಮೂಲನೆ ಮಾಡಲು ಪ್ರತಿಯೊಬ್ಬ ಭಾರತೀಯನು ದೇಶದ ಜೊತೆ ಕೈಜೋಡಿಸಬೇಕು ಎಂದು ನುಡಿದರು.

ಈ ವೇಳೆ ಅರೇಹಳ್ಳಿ ಹಾಗೂ ಸುತ್ತ ಮುತ್ತಲ ಗ್ರಾಮಗಳ ಹಿಂದೂ ಬಾಂಧವರು, ಮುಖಂಡರು ಇದ್ದರು.

ಬೇಲೂರು ತಾಲೂಕು ಅರೇಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮಗಳ ಹಿಂದೂ ಬಾಂಧವರು ಪಹಲ್ಗಾಮ್‌ನಲ್ಲಿ ಅಮಾಯಕ ಹಿಂದೂಗಳ ಮಾರಣಹೋಮವನ್ನು ಖಂಡಿಸಿ ಮೆರವಣಿಗೆ ನಡೆಸಿದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *