ಸದ್ಭಕ್ತರ ಗಮನಕ್ಕೆ :- ಶ್ರೀ ಅಮೃತೇಶ್ವರ ಸ್ವಾಮಿ ದೇವಸ್ಥಾನ ದೇವಾಲದಕೆರೆ ಶ್ರೀ ಆದಿಶಕ್ತಿ ದೇವೇರಮ್ಮ 2023 ನೇ ಸಾಲಿನ ಸುಗ್ಗಿ ಉತ್ಸವದ ವಿವರಗಳು. ಎಪ್ರಿಲ್ ದಿನಾಂಕ 17:04:2023 ನೇ ಸೋಮವಾರ “ಊರಹಬ್ಬ” ಶ್ರೀ ಅಮೃತೇಶ್ವರ ಸ್ವಾಮಿಗೆ ರುದ್ರಾಭಿಷೇಕ, ಶ್ರೀ ದೇವಿರಮ್ಮ ದೇವರಿಗೆ ವಿಶೇಷ ಸೇವೆ, ಮಧ್ಯಾಹ್ನ ಅನ್ನ ಸಂತರ್ಪಣೆ ಹಾಗೂ ಹಬ್ಬ ನಿರ್ವಿಘ್ನವಾಗಿ ನೆರವೇರಲು ದೇವರಿಗೆ ಪ್ರಾರ್ಥನೆ.18:04:2023 ನೇ ಮಂಗಳವಾರ 9 ಗ್ರಾಮಕ್ಕೆ ಸಂಬಂಧಪಟ್ಟಂತಹ ಮಾರಿಮಂದೆಯಲ್ಲಿ ಮಾರಿಗೆ ಪರ್ವ.19:04:2023 ನೇ ಬುಧವಾರ ಬೆಳಗ್ಗೆ ಹೆಬ್ಬಾರೆ ಮಂದು ಅಲ್ಲಿ ದೈವಗಳಿಗೆ ಪರ್ವಸೇವೆ, ಹೆಬ್ಬಾರೆ ಬಿಗಿಯುವುದು ಹಾಗೂ ರಾತ್ರೆ ಹೆಬ್ಬಾರೆ ದೇವಸ್ಥಾನಕ್ಕೆ ತರುವುದು ಕುಮಾರದೇವರ ಉತ್ಸವ.20:04:2023 ನೇ ಗುರುವಾರ ದೇವಸ್ಥಾನಕ್ಕೆ ಸಂಬಂಧಪಟ್ಟಂತಹ ವಸಂತಮ್ಮನ ಉದ್ದಿಯಲ್ಲಿ ಪೂಜೆ.21:04:2023 ನೇ ಶುಕ್ರವಾರ ವಿರಾಮ.22:04:2023 ನೇ ಶನಿವಾರ ರಾತ್ರಿ ದೋಣಹಳ್ಳಿ ಯಲ್ಲಿರುವ ದೈವಗಳಿಗೆ ಪರ್ವ, ದೇವಾಲದಕೆರೆ ದೇವಸ್ಥಾನದ ಬಂಡಾರ ಗುಡಿಯಲ್ಲಿ ಕೋಲದೈವಕ್ಕೆ ಪರ್ವ. ( ಕೋಲಾಕಾರರಿಗೆ ಎಡೆ ಹಾಕುವುದು)23:04:2023 ನೇ ಭಾನುವಾರ ತಾಯಿ ಕರೆಯಲು ಕುಮಾರ ದೇವರು ಹೋಗುವುದು.24:04:2023 ನೇ ಸೋಮವಾರ ಪರೀಕ್ಷಿತ್ ಡಿಎಸ್ ಮೇಲಾಮನೆ ರವರ ಮನೆಯಲ್ಲಿ ಮಧ್ಯಾಹ್ನ 3 ಗಂಟೆಯಿಂದ “ಮಲ್ಲಮುಂಡಿ” ಕಟ್ಟುವುದು ಗ್ರಾಮದ ಸದಸ್ಯರೆಲ್ಲ ಸೇರಿಕೊಂಡು, ದೇವಾಲದಕೆರೆ ದೇವಸ್ಥಾನದಲ್ಲಿ ರಾತ್ರಿ 10 ಗಂಟೆಯಿಂದ ಮಂಗಳವಾರ ಬೆಳಿಗ್ಗೆ ಆರು ಗಂಟೆಯವರೆಗೆ ಮಲ್ಲು ಸುಗ್ಗಿ ಉತ್ಸವ ವಿರುತ್ತದೆ.25:04:2023 ನೇ ಮಂಗಳವಾರ ಶ್ರೀ”ದೇವೇರಮ್ಮನ ಚೌತ” ಹಾಗೂ ಬಿಳಿಸಾರೆ ಗ್ರಾಮದ ದೇವೇರಮ್ಮನ ಬನದಲ್ಲಿ ಉತ್ಸವ.26:04:2023 ನೇ ಬುಧವಾರ “ಕುಮಾರದೇವರ ಚೌತ” ಹಾಗೂ ಅಚ್ಚನಹಳ್ಳಿ ಗ್ರಾಮದ ಕುಮಾರ ದೇವರ ದೇವಸ್ಥಾನದಲ್ಲಿ ಕೆಂಡ ಹಾಗೂ ಸುಗ್ಗಿ ಉತ್ಸವ.27:04:2023 ನೇ ಗುರುವಾರ ದೇವೇರಮ್ಮ ಹಾಗೂ ಕುಮಾರದೇವರ ನಂದಿ ಹಿರುದ್ಧಿ ಕಟ್ಟೆಗೆ ಹೋಗುವುದು, ಕಟ್ಟೆಯಲ್ಲಿ ಪೂಜೆ ಹಾಗೂ ಉತ್ಸವ.28:04:2023 ನೇ “ಹಗಲುಸುಗ್ಗಿ, ” ದೇವಾಲದಕೆರೆ ದೇವಸ್ಥಾನದ ಸುಗ್ಗಿ ಮಂದಿನಲ್ಲಿ ಮಧ್ಯಾಹ್ನ 2 ಗಂಟೆಯಿಂದ ಕೆಂಡ ಹಾಗೂ ಸುಗ್ಗಿ ಉತ್ಸವ, ಪ್ರಸಾದ, ಹರಕೆ. ಸಾಯಂಕಾಲ 6:00 ಗಂಟೆ ನಂತರ 12 ಸುತ್ತು ಎಲ್ಲಾ ದೇವಸ್ಥಾನಗಳಿಗೆ ಪ್ರದಕ್ಷಣೆ.29:04:2023 ನೇ ಶನಿವಾರದಂದು ವರ್ಷದ ದೇವಸ್ಥಾನದ ಆಗುಹೋಗುಗಳ ಚರ್ಚೆ ಹಾಗೂ ಲೆಕ್ಕಾಚಾರಗಳು. (ದೇವಾಲದಕೆರೆ ಶ್ರೀ ದೇವೇರಮ್ಮ ಸುಗ್ಗಿ ಉತ್ಸವದ ಮಾಹಿತಿ ನೀಡಿದವರು ಶ್ರೀ ವಿಷ್ಣುಮೂರ್ತಿ ಭಟ್ ಡಿಎಸ್ ದೇವಾಲದಕೆರೆ)

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *