ಇಲ್ಲಿನ ಗೌಡಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಿರಿಕರ, ಚಿಕ್ಕಾರ, ಕೂಗೂರು, ಗ್ರಾಮಗಳ ಕಾಫಿ ಮತ್ತು ಅಡಿಕೆ ತೋಟಗಳಿಗೆ ನಿತ್ಯ ಕಾಡಾನೆ ಮತ್ತು ಕಾಡುಕೋಣಗಳು ದಾಳಿ ನಡೆಸಿ, ಬೆಳೆ ನಾಶ ಮಾಡುತ್ತಿವೆ.
ಶನಿವಾರ ಹಿರಿಕರ ಗ್ರಾಮದ ಎಚ್.ಎಸ್.ರಕ್ಷಿತ್ ಅವರ ಅಡಿಕೆ ತೋಟಕ್ಕೆ ರಾತ್ರಿ ಬಂದ ಕಾಡಾನೆಗಳು ಮತ್ತು ಕಾಡುಕೋಣಗಳು ಸುಮಾರು 20ಕ್ಕೂ ಹೆಚ್ಚು 5 ವರ್ಷದ ಅಡಿಕೆಗಳನ್ನು ನಾಶ ಮಾಡಿವೆ.
ಮಾಲಂಬಿ ಮೀಸಲು ಅರಣ್ಯ ಪ್ರದೇಶದಿಂದ ನಿತ್ಯ ರಾತ್ರಿ ಹೊತ್ತು ವನ್ಯಜೀವಿಗಳು ಇಲ್ಲಿಗೆ ಬಂದು ಬೆಳೆ ನಾಶ ಮಾಡುತ್ತಿರುವುದನ್ನು ನೋಡಿ ಕಾಫಿ ಬೆಳೆಗಾರರು ಆತಂಕಗೊಂಡಿದ್ದಾರೆ.
ಕಾಡಿನ ಅಂಚಿನಲ್ಲಿ ದೊಡ್ಡ ಬಂಡೆ ಕಲ್ಲು ಇರುವ ಸ್ಥಳದಲ್ಲಿ ಸೋಲಾರ್ ತಂತಿಯನ್ನು ಅರಣ್ಯ ಇಲಾಖೆಯಿಂದ ಅಳವಡಿಕೆ ಮಾಡಿದ್ದರೂ, ಅದನ್ನು ಲೆಕ್ಕಿಸದೆ ಕಾಡುಕೋಣ ಬರುತ್ತಿರುವುದು ಹೇಗೆ ಎಂದು ರೈತರಲ್ಲಿ ಚಿಂತೆಯಾಗಿದೆ. ಅರಣ್ಯ ಇಲಾಖೆ ಸೂಕ್ತ ಕ್ರಮ ತೆಗೆದುಕೊಂಡು ಈಗ ಬಂದಿರುವ ಕಾಡಾನೆ ಮತ್ತು ಕಾಡುಕೋಣ ಹಿಡಿದು ಕಾಡಿನೊಳಗೆ ಬಿಡಬೇಕು ಎಂದು ಒತ್ತಾಯಿಸಿದ್ದಾರೆ.