ಸಕಲೇಶಪುರ : ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಾಳ್ಳುಪೇಟೆ ಯಿಂದ ಮಾರನಹಳ್ಳಿಯವರೆಗೆ ಕಳೆದ 6 ವರ್ಷಗಳಿಂದ ಆರಂಭಗೊಂಡಿದ್ದು ಈ ಕಾಮಗಾರಿ ಸಂಪೂರ್ಣ ಅವೈಜ್ಞಾನಿಕದಿಂದ ಕೂಡಿದೆ ಎಂದು ಸಾಗರ್ ಜಾನೆಕೆರೆ ತಿಳಿಸಿದ್ದಾರೆ.

ಇಂದು ಹೊಸೂರು ವ್ಯಾಪ್ತಿಯ ಸಮೀಪ ರಾಷ್ಟ್ರೀಯ ಹೆದ್ದಾರಿ 75 ರಲ್ಲಿ ರಸ್ತೆಯ ಬದಿಗೆ ಹಾಕಿರುವ ಮಣ್ಣು ಅತಿಯಾದ ಮಳೆಗೆ ಕೊಚ್ಚಿಹೋಗಿದ್ದು ವಾಹನ ಸವಾರರು ಆತಂಕದಲ್ಲಿ ಸಂಚರಿಸುವಂತಾಗಿದೆ, ಸಕಲೇಶಪುರ ಮಲೆನಾಡು ಭಾಗವಾಗಿದ್ದು ಇದೀಗ ಸುರಿಯುತ್ತಿರುವ ಧಾರಾಕಾರ ಮಳೆಗೆ ರಸ್ತೆಯ ಬದಿಗೆ ಹಾಕಿರುವ ಮಣ್ಣು ಕೊಚ್ಚಿಹೋಗಿದ್ದು ಮಣ್ಣು ಕುಸಿಯದಂತೆ ಮರಳು ಮೂಟೆಗಳನ್ನು ಅಡ್ಡಲಾಗಿ ಇಡಲಾಗಿದ್ದು ಹಾಗೂ ರಾಗಿಯ ಸಸಿಯನ್ನೂ ಕೂಡ ಹಾಕುವ ಮೂಲಕ ತಡೆಗಟ್ಟಲಾಗುತ್ತಿದೆ

ಇದೇ ರೀತಿ ತಾಲೂಕಿನ ಬಾಳ್ಳುಪೇಟೆಯಿಂದ ಮಾರನಹಳ್ಳಿಯವರಗೆ ಮಣ್ಣು ಕುಸಿಯುತ್ತಿದ್ದು ಕೆಲವು ಭಾಗಗಳಲ್ಲಿ ರಸ್ತೆ ನಿರ್ಮಾಣಕ್ಕಾಗಿ ಗೆರೆಯನ್ನು ಜೆಸಿಬಿ ಯಂತ್ರಗಳ ಮೂಲಕ ಮಣ್ಣನ್ನು ಗೋರಿದ್ದು ಅತಿಯಾದ ಮಳೆಗೆ ಕೆಲವು ಭಾಗಗಳಲ್ಲಿ ಭೂ ಕುಸಿತ ಸಹ ಆಗುತ್ತಿದ್ದು ಕೂಡಲೇ ಹಾಸನ ಜಿಲ್ಲಾ ಸಂಸದರಾದ ಪ್ರಜ್ವಲ್ ರೇವಣ್ಣ ಅವರು ಹಾಗೂ ಈ ಕ್ಷೇತ್ರದ. ಶಾಸಕರಾದ ಸಿಮೆಂಟ್ ಮಂಜುನಾಥ್ ಅವರು ಈ ರಸ್ತೆಯನ್ನು ವೀಕ್ಷಣೆ ಮಾಡಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡುವಂತೆ ಸೂಚನೆ ನೀಡಬೇಕು ಎಂದು ಸಾರ್ವಜನಿಕರ ಪರವಾಗಿ ನಮ್ಮ ಸಂಘಟನೆಯ ವತಿಯಿಂದ ಮನವಿ ಮಾಡುತ್ತಿದ್ದೇವೆ ಎಂದು ಸಾಗರ್ ಜಾನೆಕೆರೆ ತಿಳಿಸಿದ್ದಾರೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *