ಸಕಲೇಶಪುರ : ಹಲಸುಲಿಗೆ ಗ್ರಾಮ ಪಂಚಾಯಿತಿಯಲ್ಲಿ ಘನ ತ್ಯಾಜ್ಯ ಸಂಸ್ಕರಣಾ ಘಟಕ ಉದ್ಘಾಟನೆ ಮಾಡಿದ ಶಾಸಕರಾದ ಸಿಮೆಂಟ್ ಮಂಜು.
ಈ ಸಮಾರಂಭದಲ್ಲಿ ಭಾಗಿಯಾದ ಶಾಸಕರಾದ ಸಿಮೆಂಟ್ ಮಂಜುರವರು ಮಾತನಾಡಿ ಅವರು ಕಸವನ್ನು ಎಲ್ಲೆಂದರಲ್ಲಿ ಹಾಕಿದರೆ ಆರೋಗ್ಯ ಸಂಬಂಧಿ ಖಾಯಿಲೆಗಳು ಬರುತ್ತವೆ ಆದ್ದರಿಂದ ಶುಚಿಯಾಗಿ ಇರಬೇಕು. ಅಧಿಕಾರಿಗಳು ಸಾರ್ವಜನಿಕರಿಗೆ ತೊಂದರೆಯಾಗದಂತೆ ಅನುಕೂಲಕರವಾಗಿ ಕೆಲಸ ಮಾಡಿಕೊಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾ ಅಧಿಕಾರಿ ರಾಮಕೃಷ್ಣ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಆದಿತ್ಯ, ಗ್ರಾಮೀಣಾಭಿವೃದ್ಧಿ ಸಾಹಯಕ ನಿರ್ದೇಶಕರಾದ ಹರೀಶ್ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಕೃಷ್ಣ, ಉಪಾಧ್ಯಕ್ಷ ನೇತ್ರಾವತಿ ಸದಸ್ಯರು ಮತ್ತು ಇನ್ನಿತರ ಸ್ಥಳೀಯ ಮುಖಂಡರು ಇದ್ದರು.