ಸಕಲೇಶಪುರ.ಸಕಲೇಶಪುರ ತಾಲೂಕಿನ ಬೆಳಗೋಡು ಹೋಬಳಿ ಉದಯವಾರ ಪಂಚಾಯಿತಿಯ ಹೊಸಕೊಪ್ಪಲು ಗ್ರಾಮದ ಕೃಷಿಕರಾದ ಚಂದ್ರಶೇಖರ್ ಅವರ ಕಾಫಿ ತೋಟವನ್ನು ಕಾಡಾನೆಗಳು ಸಂಪೂರ್ಣ ತುಳಿದು ಹಾಳು ಮಾಡಿವೆ .
ಸಂಬಂಧಪಟ್ಟ ಅರಣ್ಯ ಇಲಾಖೆಯವರಿಗೆ ಎಷ್ಟೇ ಮನವಿ ಮಾಡಿದರೂ ಕೂಡ ರೈತರ ಕಷ್ಟಕ್ಕೆ ಯಾವುದೇ ಅಧಿಕಾರಿಗಳು ಬರುತ್ತಿಲ್ಲ. ರೈತರ ಕಷ್ಟನಾ ಕೇಳೋರಿಲ್ಲ ಮತ್ತು ಕಾಡಾನೆ ಸಮಸ್ಯೆಯನ್ನು ಬಗೆಹರಿಸಲಿಲ್ಲ ಎಂದು ಕೃಷಿ ಕೆ ಚಂದ್ರಶೇಖರ್ ತಿಳಿಸಿದ್ದಾರೆ.
ಸಂಬಂಧ ಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಸಕಲೇಶಪುರ ಶಾಸಕರು ಸಿಮೆಂಟ್ ಮಂಜು ರವರು,ಹಾಸನ ಜಿಲ್ಲೆಯ ಸಂಸದರಾದ ಪ್ರಜ್ವಲ್ ರೇವಣ್ಣ ಹಾಸನ ಉಸ್ತುವಾರಿ ಸಚಿವರಾದ ಕೆ ಎನ್ ರಾಜಣ್ಣ , ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ, ಹಾಸನದ ಜಿಲ್ಲಾಧಿಕಾರಿಳು ಗಮನಹರಿಸಿ ಪರಿಹಾರ ದೊರಕಿಸಿಕೊಡಬೇಕು ಎಂದು ನಾಗೇಂದ್ರ ಹೊಸಕೊಪ್ಪಲು ಅವರ ಮನವಿ ಮಾಡಿಕೊಂಡಿದ್ದಾರೆ.