ಸಕಲೇಶಪುರ : ಮಕ್ಕಳಿಗೆ ಪಠ್ಯದಲ್ಲಿರುವ ಪಾಠವನ್ನು ಪ್ರಾಯೋಗಿಕವಾಗಿ ಅರಿವು ಮೂಡಿಸುವ ದೃಷ್ಠಯಿಂದ ಇಂದು ಬ್ಯಾಕರವಳ್ಳಿ ಮುರಾರ್ಜಿ ಶಾಲೆಯ ಮಕ್ಕಳು ಸಾಕ್ಷಿಯಾದರು .
ಪಾಠದ ಹೆಸರು ಸೀನಪ್ಪ ಶೆಟ್ಟರು ನಮ್ಮ ಟೀಚರು 7.ನೇ ತರಗತಿಯ ವಿದ್ಯಾರ್ಥಿಗಳಿಗೆ ಕೃಷಿಯ ಬಗೆಗಿನ ಸಾಮಾನ್ಯ ಪಾಠವದು… ಆದರೆ ಅದನ್ನು ಬೋಧಿಸಲು ಆರ್ಥೈಸಲು ಬ್ಯಾಕರವಳ್ಳಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರು ಶಿಕ್ಷಕರು ಆಯ್ಕೆ ಮಾಡಿಕೊಂಡ ವಿಧಾನ ಮಾತ್ರ ಇದೀಗ ಎಲ್ಲರ ಗಮನ ಸೆಳೆದು ಮೆಚ್ಚುಗೆಗೆ ಪಾತ್ರವಾಗಿದೆ.
ಸುಮಾರು ಇಪ್ಪತ್ತು ವಿದ್ಯಾರ್ಥಿಗಳನ್ನು ಸಮೀಪದ ನಡಹಳ್ಳಿ ಗ್ರಾಮದ ಗದ್ದೆಯೊಂದಕ್ಕೆ ಕರೆದೊಯ್ದು ನಾಟಿಮಾಡುತ್ತಿದ್ದವರೊಂದಿಗೆ ನಾಟಿಮಾಡಿ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆ ಮೂಲಕ ಅನುಭವ ಸಂಪಾದಿಸಿದರು.
ಗದ್ದೆಯೊಳಗೆ ವಿದ್ಯಾರ್ಥಿಗಳ ಕಲರವ ಮತ್ತು ಉತ್ಸಾಹ ಇಮ್ಮಡಿಯಾಗಿ ಶಿಕ್ಷಕರು ಹೇಳಿದ ಒಂದೊಂದೇ ಅಂಶವನ್ನು ಅರ್ಥಮಾಡಿಕೊಳ್ಳುತ್ತಾ ಸಾಗಿದರು..ಕೆಸರಿನೊಳಗೆ ಇಳಿದು ಓಡಾಡುತ್ತಾ ನಾಟಿಮಾಡುವವರೊಂದಿಗೆ ಒಂದಾಗಿ ಹಾಡುತ್ತಾ ಸಸಿನೆಡುತ್ತಾ ಸಸಿಗಳ ಕಂತೆಯ ದೂರ ದೂರಕ್ಕೆ ಎಸೆಯುತ್ತಾ ಸಂಭ್ರಮಿಸುತ್ತಲೇ ಕಲಿಯುತ್ತಲೇ ಸಾಗಿದ ಪರಿ ಅನನ್ಯ.
ನೋಡುತ್ತಾ ಕೇಳುತ್ತಲೇ ಕಲಿಯುವ ಏಕತಾನತೆಯನ್ನು ಮರೆಸಲು ಜಾನ್ ಡ್ಯೂ ಅವರ ತತ್ವ ಜ್ಞಾನ Learning by doing (ಮಾಡುತ್ತಾಕಲಿಯುವ ತತ್ವವನ್ನು) ಅಳವಡಿಸಿಕೊಂಡರು ವಿದ್ಯಾರ್ಥಿಗಳಿಗೆ ಖುಷಿಯಾಗಿದೆ….
ಅಷ್ಟುಮಾತ್ರದ ಪ್ರಯತ್ನ ಸಾಕಾರವಾಗಿದೆ ಎಂದು ಪ್ರಾಂಶುಪಾಲರಾದ ಶತೇಂದ್ರ ಅವರು ಹೇಳುತ್ತಾರೆ.