ನಾಳೆಯಿಂದ ಅಂದರೆ ಏಪ್ರಿಲ್ 20, 2023ರಿಂದ ಪಡಿತರ ನಿಯಮಗಳಲ್ಲಿ ಸರ್ಕಾರ ದೊಡ್ಡ ಬದಲಾವಣೆಯನ್ನು ತರಲಿದೆ. ಈ ಹೊಸ ನಿಯಮ ನಾಳೆಯಿಂದ ಜಾರಿಯಾಗಲಿದ್ದು ನೀವು ಪಡಿತರ ಚೀಟಿ (Ration Card) ಯನ್ನು ಹೊಂದಿದ್ದರೆ ಇದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಳ್ಳಬಹುದು. ಹಾಗಾದ್ರೆ ಸರ್ಕಾರ ಹೊರಡಿಸಿರುವ ಹೊಸ ನಿಯಮದಲ್ಲಿ ಏನಿದೆ? ಯಾರಿಗೆಲ್ಲ ಇದರಿಂದ ಪ್ರಯೋಜನವಾಗಲಿದೆ ನೋಡೋಣ.. ಮಾರ್ಚ್ 2024ರ ಒಳಗೆ ಹೊಸ ನಿಯಮ:ಸಾರವರ್ಧಿತ ಅಕ್ಕಿಯನ್ನು ವಿತರಣೆ ಮಾಡಲು ಸರ್ಕಾರ ನಿರ್ಧರಿಸಿದೆ. ಈ ಹೊಸ ನಿಯಮ 269 ಜಿಲ್ಲೆಗಳಲ್ಲಿ ಜಾರಿಗೆ ಬರಲಿದ್ದು ಪಡಿತರ ಚೀಟಿ ಹೊಂದಿರುವವರಿಗೆ ಇದು ಜಾಕ್ ಪಾಟ್ ಯೋಜನೆಯಾಗಿದೆ. ಮಾರ್ಚ್ 2024ರ ಒಳಗೆ ಎಲ್ಲಾ ಜಿಲ್ಲೆಗಳಲ್ಲಿಯೂ ಈ ನಿಯಮ ಜಾರಿಗೆ ಬರಲಿದೆ. ಸಚಿವರಿಂದ ಮಹತ್ವದ ಮಾಹಿತಿ:ಕೇಂದ್ರ ಆಹಾರ ಕಾರ್ಯದರ್ಶಿ ಸಂಜೀವ್ ಚೋಪ್ರಾ ಅವರು ರಾಜಸ್ಥಾನದ ಕೆಲವು ಜಿಲ್ಲೆಗಳಲ್ಲಿ ನಾಳಿಯಿಂದ ಈ ಹೊಸ ನಿಯಮ ಜಾರಿಯಾಗಲಿದೆ ಎಂದು ತಿಳಿಸಿದ್ದಾರೆ. ಸರ್ಕಾರ ಯೋಜನೆ ಮೂಲಕ ಪೌಷ್ಟಿಕ ಆಹಾರಗಳನ್ನು ಸಾಮಾನ್ಯ ಜನರಿಗೆ ವಿತರಿಸಬೇಕು ಎನ್ನುವುದು ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರ ಉದ್ದೇಶ. ಹಾಗಾಗಿ ಪಡಿತರ ಚೀಟಿದಾರರಿಗೆ ಸಾರವರ್ಧಿತ ಅಕ್ಕಿ ವಿತರಿಸಲು ನಿರ್ಧರಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ. ದೇಶದಲ್ಲಿ 17 ಲಕ್ಷ ಟನ್ ಅಕ್ಕಿ ಪ್ರತಿ ವರ್ಷ ಉತ್ಪಾದನೆಯಾಗುತ್ತದೆ. ಪಡಿತರ ಅಂಗಡಿ ಮೂಲಕ 2069 ಜಿಲ್ಲೆಗಳಲ್ಲಿ ಅಕ್ಕಿ ವಿತರಣೆ ಮಾಡಲಾಗುತ್ತದೆ. ದೇಶದಲ್ಲಿ ಇರುವ 735 ಜಿಲ್ಲೆಗಳಲ್ಲಿ ಶೇಕಡಾ 80 ರಷ್ಟು ಜನ ಅಕ್ಕಿಯನ್ನು ಮೂಲ ಆಹಾರವಾಗಿ ಸೇವಿಸುತ್ತಾರೆ. ಹಾಗಾಗಿ ದೇಶದಲ್ಲಿ ಪ್ರತಿಯೊಬ್ಬರಿಗೂ ಸಾರ ವರ್ಧಿತ ಅಕ್ಕಿಯನ್ನು ನೀಡಲು ಸರ್ಕಾರ ಯೋಜನೆ ರೂಪಿಸುತ್ತಿದೆ.ಸಾರವರ್ಧಿತ ಅಕ್ಕಿಯನ್ನು ಹಂತ ಹಂತವಾಗಿ ಎಲ್ಲಾ ಜಿಲ್ಲೆಗಳಿಗೂ ತಲುಪಿಸಲಾಗುವುದು ಮುಖ್ಯವಾಗಿ ಮಕ್ಕಳು ಹಾಗೂ ಮಹಿಳೆಯರಲ್ಲಿ ರಕ್ತಹೀನತೆ ಸಮಸ್ಯೆಯನ್ನು ದೂರ ಮಾಡುವುದಕ್ಕಾಗಿ ಮೈಕ್ರೋನ್ಯೂಟ್ರಿಯಂಟ್ ಇರುವಂತಹ ಸಾರವರ್ಧಿತ ಅಕ್ಕಿಯನ್ನು ನೀಡಬೇಕು ಎಂದು ಕೇಂದ್ರ ಸರ್ಕಾರ ಘೋಷಿಸಿದೆ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *