ರಾಜಕೀಯ ನಡವಳಿಕೆಯಲ್ಲಿ ದೇವಗೌಡರ (Deve Gowda) ಪಾತ್ರ ದೊಡ್ಡದು, ಜೆಡಿಎಸ್ ಮೂಲಕ ಗುರುತಿಸಿಕೊಂಡು ಅನೇಕ ಜನರ ಏಳಿಗೆಗಾಗಿ ಪಾತ್ರ ವಹಿಸಿದವರು, ಕಳೆದ ಕೆಲವು ವರ್ಷಗಳಲ್ಲಿ ಜಿ.ಟಿ.ದೇವೇಗೌಡರ ಪಕ್ಷದ ನಡವಳಿಯ ಬಗ್ಗೆ ಕ್ಯುರಾಸಿಟಿ ಕೆರಳಿಸಿತ್ತು. ಚಾಮುಂಡೇಶ್ವರಿ ಕ್ಷೇತ್ರದ ಜೆಡಿಎಸ್ ಶಾಸಕ ಜಿಟಿ ದೇವೇಗೌಡ ಅವರು ಕುಮಾರಸ್ವಾಮಿ ಮೇಲೆ ಬೇಸರ ಪಟ್ಟುಕೊಂಡು ಪಕ್ಷದ ವೈಖರಿಯಿಂದ ದೂರ ಉಳಿದಿದ್ದರು ಎಂಬ ಮಾತು ಕೂಡ ಕೇಳಿ ಬಂದಿತ್ತು, ಅದರೆ ದೇವೇಗೌಡ ಅವರು ಕೆಲವೇ ತಿಂಗಳಲ್ಲಿ ತಮ್ಮ ನಿಲುವು ತಿಳಿಸುವ ಬಗ್ಗೆಯೂ ಹೇಳಿದ್ದರು, ಜಿ.ಟಿ.ದೇವೇಗೌಡರು ತಮ್ಮ ಮಗನ ರಾಜಕೀಯ ಭವಿಷ್ಯದ ಬಗ್ಗೆ ಯೋಚಿಸುತ್ತಿರುವುದು ಕೂಡ ತಿಳಿದೆ ಇದೆ, ಇವರ ಫ್ಯಾಮಿಲೀ ಯೇ ರಾಜಕೀಯ ಚಟುವಟಿಕೆಗಳಲ್ಲಿ ಒಗ್ಗೂಡಿದೆ, ಇದೀಗ ನಿಖಿಲ್ ಕುಮಾರಸ್ವಾಮಿ ರಾಮನಗರದಲ್ಲಿ ಜೆಡಿ ಎಸ್ ಸ್ಪರ್ಧಿ ಯಾಗಿದ್ದಾರೆ, ಇವರಿಗೆ ನೀಡುವ ಮತ ಪ್ರಚಾರವೂ ಅಷ್ಟೆ ಪ್ರಮುಖ್ಯ ವಾಗಿರುತ್ತದೆ, ಇದೀಗ ದೇವಗೌಡ ಅವರು ತಮ್ಮ ಸೊಸೆಯಂದಿರಗೆ ಯಾವ ರೀತಿಯ ಟಾಸ್ಕ್ ನೀಡಿದ್ದಾರೆ. ನಿಖಿಲ್ ಕುಮಾರ ಸ್ವಾಮಿ ಚುನಾವಣಾ ಪ್ರಚಾರ:ದೇವೇಗೌಡ ಹಾಗೂ ಕುಮಾರಸ್ವಾಮಿ ರಾಜಕೀಯ ವಿಚಾರ ದಲ್ಲಿ ಯಾವುದೇ ಸಂಘರ್ಷಕ್ಕೂ ಕಾರಣ ವಾಗದೇ ಸಮಾಜದಲ್ಲಿ ಒಳ್ಳೆಯ ವ್ಯಕ್ತಿತ್ವ ವನ್ನು ಕಾಪಾಡಿಕೊಂಡು ಬಂದಿದ್ದಾರೆ, ರಾಮನಗರ ಕ್ಷೇತ್ರದಿಂದಲೇ ದೇವೇಗೌಡ ಅವರು ಶಾಸಕರಾಗಿ ಮುಖ್ಯಮಂತ್ರಿಯಾಗಿ ಆಯ್ಕೆಯಾದವರು, ಇದೀಗ ನಿಖಿಲ್ ಕುಮಾರ ಸ್ವಾಮಿ (Nikhil Kumaraswamy) ಸ್ಪರ್ದಿಸುತ್ತಿದ್ದಾರೆ, ಮೊನ್ನೆಯಷ್ಟೆ ರಾಮನಗರ ಕ್ಷೇತ್ರದ ಅಭ್ಯರ್ಥಿಯಾಗಿ ನಿಖಿಲ್ ನಾಮ ಪತ್ರ ಸಲ್ಲಿಸುದಕ್ಕಾಗಿ ಮಾಜಿ ಪ್ರಧಾನಿ ದೇವೆಗೌಡರಿಂದ (HD Devegowda) ಆಶೀರ್ವಾದ ಪಡೆದುಕೊಳ್ಳಲು ಬಂದಿದ್ದರು, ದೇವಗೌಡ ಅವರು ನಿಖಿಲ್ ಗೆ ಬೆಂಬಲವಾಗಿ ನಿಂತಿದ್ದಾರೆ, ಈ ಮೂಲಕ ಮತದಾನ ದ ಪ್ರಚಾರ ಕೂಡ ಭರದಿಂದ ಸಾಗುತ್ತಿದೆ. ಪ್ರಚಾರದತ್ತ ಅನಿತಾ ಕುಮಾರಸ್ವಾಮಿ ಮತ್ತು ಭವಾನಿ ರೇವಣ್ಣ:ಈಗಾಗಲೇ ರಾಮನಗರ ಕ್ಷೇತ್ರವನ್ನು ಪುತ್ರ ನಾದ ನಿಖಿಲ್ ಕುಮಾರಸ್ವಾಮಿ ಗೆ ಬಿಟ್ಟು ಕೊಟ್ಟಿದ್ದಾರೆ, ಕಳೆದ ವರ್ಷ ಜೆಡಿಎಸ್, ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡ, ಎಚ್‌ಡಿ ಕುಮಾರಸ್ವಾಮಿ ಅವರ ಆದೇಶವನ್ನು ಗೌರವಿಸಿ ಸ್ಪರ್ಧಿಸಿದ್ದೆ ಈ ವರ್ಷ ನಿಖಿಲ್ ಗೆ ಬೆಂಬಲ ಮಾಡುತ್ತೇನೆ ಎಂದಿದ್ದಾರೆ, ಹಾಸನ ಜೆಡಿಎಸ್ ಟಿಕೆಟ್ ಭವಾನಿ ರೇವಣ್ಣ ಕೈ ತಪ್ಪಿ ಸ್ವರೂಪ್ ಅವರಿಗೆ ನೀಡಿದ್ದಾರೆ, ಸ್ವರೂಪ್ ಗೆಲುವುವಿಗಾಗಿ ಈಗಾಗಲೇ ಹಾಸನದಲ್ಲಿ ಪ್ರಚಾರ ಕಾರ್ಯ ಆರಂಭವಾಗಿದೆ. ಭವಾನಿ ರೇವಣ್ಣ ಕೂಡ ಸ್ವರೂಪ್ ಗೆಲುವಿಗಾಗಿ ಪ್ರಚಾರಕ್ಕೆ ಇಳಿದಿದ್ದಾರೆ. ಕೊಟ್ಟ ಟಾಸ್ಕ್ ಏನು?ಈ ವರ್ಷ ದೇವೇಗೌಡರ ಸೊಸೆಯಂದಿರಿಗೆ ಚುನಾವಣೆಗೆ ಟಿಕೆಟ್ ದೊರೆತಿಲ್ಲ, ಈ ಬಾರಿ ಮಾತ್ರ ಚುನಾವಣೆಯಲ್ಲಿ ಸ್ಪರ್ಧಿಸದಿದ್ರೂ ಇವರ ಪ್ರಚಾರ ಹವಾ ಜೋರಾಗಿ ಇದೆ, ಇದೀಗ ಇವರುಗಳ ಮಾವ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರಿಬ್ಬರಿಗೆ ಟಾಸ್ಕ್ ನೀಡಿದ್ದಾರೆ, ಹೌದು ರಾಮನಗರದಲ್ಲಿ ಅಭ್ಯರ್ಥಿ ಯಾಗಿರುವ ನಿಖಿಲ್ ಕುಮಾರ ಸ್ವಾಮಿಯನ್ನು ಪ್ರಚಾರ ಮಾಡಿ ಗೆಲ್ಲಿಸುವಂತೆ ಅನಿತಾ ಕುಮಾರಸ್ವಾಮಿಯವರಿಗೆ ಸಲಹೆ ನೀಡಿದ್ದಾರೆ , ಅದೇ ರೀತಿ ಹಾಸನದಲ್ಲಿ ಸ್ವರೂಪ್ ಅವರನ್ನು ಗೆಲ್ಲಿಸುವ ಜವಾಬ್ದಾರಿಯನ್ನ ಭವಾನಿ ರೇವಣ್ಣನವರಿಗೆ ಹೇಳಿದ್ದಾರೆ, ಈ ಮೂಲಕ ಮತ ಪ್ರಚಾರದಲ್ಲಿ ತೊಡಗಿ ಕೊಂಡಿದ್ದಾರೆ, ಸದ್ಯ ಚುನಾವಣೆ ಕಾವು ಹೆಚ್ಚಾಗಿದ್ದು ಫಲಿತಾಂಶ ಏನಾಗುತ್ತೆ ಕಾದು ನೋಡ್ಬೆಕು.