ಒಬ್ಬ ವ್ಯಕ್ತಿ ಜೀವಂತವಾಗಿ ಇರಬೇಕಾದ ಸಂದರ್ಭದಲ್ಲಿ ತನ್ನ ಜೊತೆಗೆ ಕೆಲಸ ಕಾರ್ಯಗಳು ಸುಗಮವಾಗಿ ನಡೆಯಬೇಕು ಎನ್ನುವ ಕಾರಣಕ್ಕಾಗಿ ಆಧಾರ್ ಕಾರ್ಡ್ ಪಾನ್ ಕಾರ್ಡ್ (Aadhaar-PAN Card) ರೀತಿಯ ಹಲವಾರು ದಾಖಲೆಗಳನ್ನು ತನ್ನ ಜೊತೆಗೆ ಇಟ್ಟುಕೊಂಡಿರುತ್ತಾನೆ ಆದರೆ ಆತ ಮರಣ ಹೊಂದಿದ ನಂತರ ಅದೆಲ್ಲ ಏನಾಗುತ್ತದೆ ಏನು ಮಾಡಬೇಕು ಎನ್ನುವುದರ ಕುರಿತಂತೆ ಸಾಕಷ್ಟು ಗೊಂದಲಗಳು ನಿಮ್ಮಲ್ಲಿ ಇರಬಹುದು ಬನ್ನಿ ಇಂದಿನ ಲೇಖನಿಯಲ್ಲಿ ಆ ಗೊಂದಲವನ್ನು ಪರಿಹರಿಸುವ ಪ್ರಯತ್ನವನ್ನು ಮಾಡೋಣ. ಮೊದಲಿಗೆ ವ್ಯಕ್ತಿ ಮರಣ ಹೊಂದಿದ ನಂತರ UIDAI ಕೇಂದ್ರಕ್ಕೆ ಹೋಗಿ ಈ ವಿಚಾರವನ್ನು ತಿಳಿಸಿ ಆತನ ಆಧಾರ್ ಕಾರ್ಡ್ (Aadhaar Card) ಅನ್ನು ಲಾಕ್ ಮಾಡಬೇಕಾಗುತ್ತದೆ. ಮರಣ ಹೊಂದಿರುವ ವ್ಯಕ್ತಿಯ ಮರಣ ದೃಢೀಕರಣ ಪತ್ರವನ್ನು ತೆಗೆದುಕೊಂಡು ನಿಮ್ಮ ಹತ್ತಿರದ ಆಧಾರ್ ಕೇಂದ್ರಕ್ಕೆ ಹೋಗಿ ಈ ಕೆಲಸವನ್ನು ಸುಲಭವಾಗಿ ನೀವು ಮಾಡಬಹುದಾಗಿದೆ. ಇದು ಆಧಾರ್ ಕಾರ್ಡ್ ವಿಚಾರವಾದರೆ ಇನ್ನು ಪಾನ್ ಕಾರ್ಡ್ (PAN Card) ವಿಚಾರ ತಿಳಿಯೋಣ ಬನ್ನಿ. ಮರಣ ದೃಡೀಕರಣ ಪತ್ರವನ್ನು ತೆಗೆದುಕೊಂಡು ಹೋಗಿ ಪಾನ್ ಕಾರ್ಡ್ ಅನ್ನು ಸರಂಡರ್ ಮಾಡಲು ನೀವು ಆದಾಯ ತೆರಿಗೆ ಇಲಾಖೆಗೆ ಹೋಗಿ ಈ ವಿಚಾರವನ್ನು ದೃಢೀಕರಿಸಬೇಕಾಗುತ್ತದೆ. PAN Card ಪೋರ್ಟಲ್ ಗೆ ಕೂಡ ಹೋಗಿ ನೀವು ಈ ಪ್ರಕ್ರಿಯೆಯನ್ನು ಪೂರೈಸಬಹುದಾಗಿದೆ. ನಂತರ Passport ವಿಚಾರಕ್ಕೆ ಬಂದ್ರೆ ಏಕೆ ವಿಶೇಷವಾದ ಪ್ರಕ್ರಿಯೆ ಇಲ್ಲ ಆದರೆ ಅದರ ವ್ಯಾಲಿಡಿಟಿ ಮುಗಿದಾಗ ಅದು ಕೂಡ ಅಮಾನ್ಯಗೊಳ್ಳುತ್ತದೆ ಆದರೆ ಇದನ್ನು ತಪ್ಪು ಕೆಲಸಕ್ಕಾಗಿ ಮಾತ್ರ ಬಳಕೆ ಮಾಡಬಾರದು. Voter ID ಅನ್ನು ಚುನಾವಣಾ ಕಚೇರಿಗೆ ಹೋಗುವ ಮೂಲಕ ಅಲ್ಲಿ ಹೋಗಿ ನಮೂನೆ 7 ಭರ್ತಿ ಮಾಡಿ ಮರಣ ಹೊಂದಿರುವ ವ್ಯಕ್ತಿಯ ದೃಢೀಕರಣ ಪತ್ರ ಹಾಗೂ ವೋಟರ್ ಐಡಿ ಎರಡನ್ನು ಕೂಡ ನೀಡಿ ಅಲ್ಲಿ ನೀವು ಅದನ್ನು ರದ್ದುಗೊಳಿಸಬಹುದಾಗಿದೆ. ಈ ಮೂಲಕ ಮರಣ ಹೊಂದಿರುವ ವ್ಯಕ್ತಿಯ ಪ್ರತಿಯೊಂದು ದಾಖಲೆಗಳನ್ನು ರದ್ದುಗೊಳಿಸುವ ಮೂಲಕ ಅವರ ದಾಖಲೆಗಳನ್ನು ಬೇರೆ ಅವರು ತಪ್ಪು ಕೆಲಸಕ್ಕೆ ಬಳಸದಂತೆ ಜಾಗೃತೆ ವಹಿಸಬಹುದಾಗಿದೆ.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *