ಸಕಲೇಶಪುರದ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ನಿಂದ ನೂತನ ಧ್ವಜ ಸ್ತಂಭ ಪ್ರತಿಷ್ಠಾಪನ ಕಾರ್ಯಕ್ರಮ…..ಸಕಲೇಶಪುರ. ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ನೂತನ ಧ್ವಜಸ್ತಂಭ ಪ್ರತಿಷ್ಠಾಪನೆ ಕಾರ್ಯಕ್ರಮವು ದಿನಾಂಕ 20, 21 ಮತ್ತು 22ನೇ ಮೇ 2023 ರಂದು ಕಾರ್ಯಕ್ರಮಗಳು ನಡೆಯುತ್ತವೆ.ದಿನಾಂಕ 20/05/ 2023ನೇ ಶನಿವಾರ ಸಂಜೆ 6 ರಿಂದ ಶ್ರೀ ಆಚಾರ್ಯವರಣಂ, ಪಶುದಾನಂ, ಪುಣ್ಯನಾಗ ಗಣಪತಿ ಹೋಮ, ರುತ್ವಿಕಾವರಣೆ, ವಾಸ್ತು ಹೋಮ, ವಾಸ್ತು ಕಳಸ, ವಾಸ್ತು ಬಲಿ, ವಾಸ್ತು ಪುಣ್ಯಾಹ, ವಾಹನ ಜಲಾದಿವಾಸಂ.ದಿನಾಂಕ 21/05 /2023ನೇ ಭಾನುವಾರ ಬೆಳಿಗ್ಗೆ 6ರಿಂದ ಶ್ರೀ ಗಣಪತಿ ಹವನ, ಬಿಂಬಶುದ್ಧಿ ಕಳಸ, ಅನುಜಂತ ಕಳಸ, ಕಳಸಾಭಿಷೇಕ ಪೂಜೆ.ಬೆಳಗ್ಗೆ 7.30ಕ್ಕೆ ಅನುಬಂಧ ಪ್ರಾರ್ಥನೆ, ವಾಹನ ಜಲೋದ್ಧಾರಂ.ಸಂಜೆ 6 ರಿಂದ ,ಕಳಸ ಪೂಜೆ, ವಾಹನ ಕಡಿವ ಕಳಸ ಪೂಜೆ, ಧ್ವಜ ದೇವತಾ ಕಳಸ ಪೂಜೆ, ಶಯ್ಯ ಪೂಜೆ, ನಿರ್ಧಾಕಳಸಂ, ಆದಿವಾಸ ಹೋಮ, ಆದಿವಾಸ ಪೂಜೆ.ಸಂಜೆ 7ಕ್ಕೆ ಪಡಿ ಪೂಜೆ ರಾತ್ರಿ 8ಕ್ಕೆ ಶ್ರೀ ಸ್ವಾಮಿಯವರಿಗೆ ಪುಷ್ಪ ಅಭಿಷೇಕಂ, ಮಂಗಳಾರತಿ ಹಾಗೂ ಪ್ರಸಾಗವಿನಿಯೋಗ ವಿರುತ್ತದೆ.ದಿನಾಂಕ 25/05/2023ನೇ ಸೋಮವಾರ ಬೆಳಿಗ್ಗೆ 6 ರಿಂದ ಅಷ್ಟ ದ್ರವ್ಯ ಗಣಪತಿ ಹೋಮ.ಮಧ್ಯಾಹ್ನ 12:30 ಕ್ಕೆ ಮಹಾ ಮಂಗಳಾರತಿ, ಅನ್ನ ಸಂತರ್ಪಣೆಯು ಸಮಸ್ತ ಭಕ್ತಾಧಿಗಳಿಂದ ಸೇವೆ ನೆಡೆಯಲಿದೆ.ಸಂಜೆ 6.30ಕ್ಕೆ ಮಹಾದೀಪಾರಾದನೆ, ಶ್ರೀ ಸ್ವಾಮಿಯವರಿಗೆ 90 ಕೆಜಿ ಹೂವಿನ ಪುಷ್ಪಾರ್ಚನೆ ರಾತ್ರಿ 8:30 ಕ್ಕೆ ಮಹಾ ಮಂಗಳಾರತಿ ಪ್ರಸಾದ ವಿನಿಯೋಗ ಇರುತ್ತದೆ.ಈ ಎಲ್ಲಾ ಪೂಜಾ ಕಾರ್ಯಕ್ರಮಗಳು ಕೇರಳದ ಸಾಂಪ್ರದಾಯಿಕ ತಂತ್ರಿಗಳಾದ ಶ್ರೀ ಕಾಂತರು ಮೋಹನರು ತಂತ್ರಿಗಳು ಮತ್ತು ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಬ್ರಹ್ಮ ಶ್ರೀ ಕೃಷ್ಣಮೂರ್ತಿ ಭಟ್ ಇವರ ನೇತೃತ್ವದಲ್ಲಿ ನೆರವೇರಿಸಲು ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ನಿರ್ಧರಿಸಿದ್ದು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶ್ರೀ ಸ್ವಾಮಿಯವರ ಕೃಪೆಗೆ ಪಾತ್ರರಾಗಬೇಕಾಗಿ ಕೇಳಿಕೊಳ್ಳುವ ಅಧ್ಯಕ್ಷರು ಕಾರ್ಯದರ್ಶಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರು ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್( ರಿ) ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ಉತ್ಸವ ಸಮಿತಿ ಸಕಲೇಶಪುರ.