ಸಕಲೇಶಪುರ ಭಾಗದ ಜನರಿಗೆ ತೊಂದರೆ ನೀಡುತ್ತಿದ್ದ ಮಕನ ಆನೆ ಸೆರೆ ಹಿಡಿದ ಅರಣ್ಯ ಸಿಬ್ಬಂದಿಗಳಿಗೆ ಮಾಜಿ ಶಾಸಕರಾದ ಹೆಚ್ ಕೆ ಕುಮಾರಸ್ವಾಮಿ ಯವರಿಂದ ಪ್ರಶಂಸೆ. ಸಕಲೇಶಪುರ. ಸಕಲೇಶಪುರ ಭಾಗದ ಜನರಿಗೆ ತೊಂದರೆ ನೀಡುತ್ತಿದ್ದ ಆನೆಯನ್ನು ಸೆರೆ ಹಿಡಿದ ಅರಣ್ಯ ಇಲಾಖೆಯ ಕಾರ್ಯಕ್ಕೆ ಮಾಜಿ ಶಾಸಕರಾದ ಹೆಚ್ ಕೆ ಕುಮಾರ ಸ್ವಾಮಿ ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.ಆನೆಗಳು ಮಲೆನಾಡಿನಲ್ಲಿ ರೈತರಿಗೆ ಬಹಳ ತೊಂದರೆ ಮಾಡುತ್ತಿವೆ. ಈ ಬಗ್ಗೆ ಹಲವಾರು ಬಾರಿ ಸದನದಲ್ಲಿ ಪ್ರಸ್ತಾಪ ಮಾಡಿದ್ದೇನೆ.ರೈತರಿಗೆ ತೊಂದರೆ ಮಾಡುತ್ತಿರುವ ಆನೆಗಳನ್ನು ಹಿಡಿಯಲು ಮುಖ್ಯ ಮಂತ್ರಿಗಳಲ್ಲಿ ಚರ್ಚೆ ಮಾಡಿದ್ದೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದೆ.ಈ ಎಲ್ಲಾ ಕ್ರಮಗಳ ಫಲವಾಗಿ ಸಕಲೇಶಪುರದಲ್ಲಿ ತೊಂದರೆ ಮಾಡುತ್ತಿದ್ದ ಮಕನ ಆನೆಯನ್ನು ಸೆರೆ ಹಿಡಿಯಲಾಗಿದೆ. ಆನೆ ಸೆರೆ ಹಿಡಿಯ ಬೇಕಿದ್ದ ಕಾರ್ಯಚರಣೆ ಏಪ್ರಿಲ್ ತಿಂಗಳಲ್ಲೇ ನಡೆಯಬೇಕಿತ್ತು. ಆದರೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಆ ಕಾರ್ಯವನ್ನು ಮೇ ತಿಂಗಳಲ್ಲಿ ಪೂರೈಸಲಾಗಿದೆ ಎಂದಿದ್ದಾರೆ.ಆನೆ ಸಮಸ್ಯೆ ಪರಿಹಾರ ಮಾಡಲು ಬಹಳಷ್ಟು ಮಂದಿ ಹೋರಾಟಗಾರರು, ಅರಣ್ಯ ಅಧಿಕಾರಿಗಳು ಶ್ರಮ ಪಟ್ಟಿದ್ದಾರೆಈ ನಿಟ್ಟಿನಲ್ಲಿ ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೆನೆ ಎಂದು ತಿಳಿಸಿದ್ದಾರೆ.