ಅರೇಹಳ್ಳಿ: ಇಡೀ ವಿಶ್ವದಲ್ಲಿರುವ ಸಮಾಜ ಸೇವಾ ಸಂಸ್ಥೆಗಳಲ್ಲಿ ಲಯನ್ಸ್ ಸಂಸ್ಥೆ ಮುಂಚೂಣಿಯಲ್ಲಿರುವ ಸಂಸ್ಥೆಯಾಗಿದ್ದು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಲಯನ್ಸ್ ಸಂಸ್ಥೆಯ ಜಿಲ್ಲಾ ರಾಜ್ಯಪಾಲ ಲ. ಡಾ.ಮೆಲ್ವಿನ್ ಡಿಸೋಜಾ ಹೇಳಿದರು.

ಬೇಲೂರು ತಾಲೂಕಿನ ಅರೇಹಳ್ಳಿಯ ಲಯನ್ಸ್ ಕ್ಲಬ್ ನಲ್ಲಿ ಆಯೋಜನೆ ಮಾಡಲಾಗಿದ್ದ ಜಿಲ್ಲಾ ರಾಜ್ಯಪಾಲರ ಅಧಿಕೃತ ಭೇಟಿ ಕಾರ್ಯಕ್ರಮನ್ನು ಉದ್ದೇಶಿಸಿ ಮಾತನಾಡಿದ ಅವರು, ಇಂದು ಪ್ರಪಂಚದಲ್ಲಿ ಅನೇಕ ಸಮಸ್ಯೆಗಳು ತಾಂಡವವಾಡುತ್ತಿದೆ. ಇಂತಹ ಸಮಸ್ಯೆಗಳಿಗೆ ತಿಲಾಂಜಲಿ ಇಡಲು ನಮ್ಮ ಸಂಸ್ಥೆಯು ಹಗಲಿರುಳು ಶ್ರಮಿಸುತ್ತಿದೆ. ನಮ್ಮ ಸಂಸ್ಥೆ ಇತ್ತೀಚಿನ ದಿನಗಳಲ್ಲಿ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುವುದರೊಂದಿಗೆ ಖ್ಯಾತಿ ಗಳಿಸಿದೆ.

ನಾನು ವೃತ್ತಿಯಲ್ಲಿ ಶಿಕ್ಷಕನಾದರೂ ಸಹ ಈ ಸಂಸ್ಥೆಯಲ್ಲಿರುವ ಧ್ಯೇಯೋದ್ದೇಶಗಳು ನನ್ನನ್ನು ಆಕರ್ಷಿಸಿತು. ಆದ್ದರಿಂದ ಮನುಷ್ಯ ಕೂಡಿಟ್ಟಿರುವ ಸಂಪತ್ತಿನ ಒಂದು ಭಾಗವನ್ನು ಸಮಾಜದ ಒಳಿತಿಗಾಗಿ ಮೀಸಲಿಡಬೇಕು. ಅನೇಕ ಸಮಸ್ಯೆಗಳನ್ನು ಇಂದು ಭಾರತ ಎದುರಿಸುತ್ತಿದೆ.ಆ ಸಮಸ್ಯೆಗಳನ್ನು ಧೈರ್ಯವಾಗಿ ಎದುರಿಸಲು ನಾವೆಲ್ಲರೂ ಒಟ್ಟಾಗಿ ಕಾರ‍್ಯನಿರ್ವಹಿಸಬೇಕಾದ ಅನಿವಾರ್ಯತೆ ಇದೆ. ಆಗ ಮಾತ್ರ ನಿರುದ್ಯೋಗ, ಬಡತನ, ಅನಕ್ಷರತೆಯಂತಹ ಸಾಮಾಜಿಕ ಪಿಡುಗುಗಳನ್ನು ಹೋಗಲಾಡಿಸಲು ಸಾಧ್ಯ ಎಂದರು.

ಲಯನ್ಸ್ ಅಧ್ಯಕ್ಷ ಲ. ಲಕ್ಷ್ಮಣ್ ಪೂಜಾರಿ ಮಾತನಾಡಿ, ನಮ್ಮ ಸಂಸ್ಥೆ ಸರ್ವ ಸದಸ್ಯರ ಬೆಂಬಲದೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಉಳಿದಿರುವ ನನ್ನ ಅವಧಿಯಲ್ಲಿ ಇನ್ನಷ್ಟು ಸೇವಾ ಕಾರ್ಯಗಳನ್ನು ಮಾಡುತ್ತೇನೆ ಎಂದರು.

ಈ ಸಂದರ್ಭದಲ್ಲಿ ಲ.ಲಕ್ಷ್ಮಣ್ ಪೂಜಾರಿ ಹಾಗೂ ಲ.ಸಂಕಲ್ಪರವರು ಸಂಸ್ಥೆಯ ಸಹಯೋಗದೊಂದಿಗೆ ಅನುಘಟ್ಟ ಸರಕಾರಿ ಪ್ರೌಢಶಾಲೆಗೆ ನೀರಿನ ಶುದ್ಧಿಕರಣ ಘಟಕ, ಸಂಸ್ಥೆಗೆ ಧ್ವನಿವರ್ಧಕ ಕೊಡುಗೆ ಸಕಲೇಶಪುರ ಹಾಗೂ ಬೇಲೂರು ರಸ್ತೆಯಲ್ಲಿರುವ ಸ್ವಾಗತ ಫಲಕಗಳನ್ನು ರಾಜ್ಯಪಾಲರು ಅನಾವರಣಗೊಳಿಸಿದರು.

ಮಲಸಾವರ ಅಂಚೆ ಇಲಾಖೆಯ ಸಿಬ್ಬಂದಿ ಮುತ್ತಣ್ಣ, ಎಸ್ಸೆಸ್ಸೆಲ್ಸಿಯಲ್ಲಿ ಹೆಚ್ಚು ಅಂಕ ಪಡೆದ ಲ.ಫೆಲಿಕ್ಸ್ರವರ ಪುತ್ರ ನಿಶಾಂತ್‌ರವರನ್ನು ಈ ವೇಳೆ ಸನ್ಮಾನಿಸಲಾಯಿತು.

ಪ್ರಾಂತೀಯ ಅಧ್ಯಕ್ಷ ಲ.ಜಗದೀಶ್, ವಲಯಾಧ್ಯಕ್ಷ ಲ.ಸಂತೋಷ್, ಕಾರ್ಯದರ್ಶಿ ಲ.ಸಂಕಲ್ಪ, ಖಜಾಂಚಿ ಲ.ಸತೀಶ್ ಪೂಜಾರಿ, ನಿಕಟಪೂರ್ವ ಅಧ್ಯಕ್ಷ ಲ.ಚಾಮರಾಜ್ ಸೇರಿದಂತೆ ಲಯನ್ಸ್ ಸಂಸ್ಥೆಯ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *