ಬೇಲೂರು : ಪಟ್ಟಣದ ಕೋಟೆ ಶೃಂಗೇರಿ ಮಠದಲ್ಲಿ ಜಗದ್ಗುರು ಶ್ರೀ ಶಂಕರಾಚಾರ್ಯರ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಈ ಸಂದರ್ಭದಲ್ಲಿ ವೇದಬ್ರಹ್ಮ ಕೆ ಆರ್ ಮಂಜುನಾಥ್ ಮಾತನಾಡಿ ತಮ್ಮ ಎಂಟನೆ ವಯಸ್ಸಿನಲ್ಲಿಯೇ ಸನ್ಯಾಸತ್ವ ಸ್ವೀಕರಿಸಿದ ಆದಿ ಶಂಕರಾಚಾರ್ಯರು ಹಿಂದೂ ಧರ್ಮದ ಪ್ರಚಾರಕ್ಕಾಗಿ ದೇಶದ ವಿವಿಧೆಡೆಗಳಲ್ಲಿ ನಾಲ್ಕು ಮಠಗಳನ್ನು ಸ್ಥಾಪಿಸಿದ್ದಾರೆ. ವೇದಗಳ ಮೂಲಕ ಪರಮಾತ್ಮನ ಸಾನ್ನಿಧ್ಯ ಸಾಧ್ಯ ಎಂಬುವುದನ್ನು ಸಾಬೀತುಪಡಿಸಿದರಲ್ಲದೆ, ತಮ್ಮ 32 ವರ್ಷಗಳ ಜೀವಿತ ಅವಧಿಯಲ್ಲಿ ಅನೇಕ ಮಹಾನ್ ಗ್ರಂಥಗಳನ್ನು ರಚಿಸಿರುವುದು ವಿಶೇಷವಾಗಿದೆ ಎಂದು ನುಡಿದು, ಆದ್ಯ ಶಂಕರಾಚಾರ್ಯರ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಸಾರ್ಥಕ ಜೀವನ ನಡೆಸಬೇಕು ಎಂದು ಕರೆ ನೀಡಿದರು.

ಶಂಕರಾಚಾರ್ಯರರು ದೇಶಪರ್ಯಟನೆ ಮಾಡಿ ನಾಲ್ಕು ಮಠಗಳನ್ನು ಸ್ಥಾಪಿಸುವದರೊಂದಿಗೆ ಸನಾತನ ಧರ್ಮವನ್ನು ತಿದ್ದಿದವರು. ಜನಸಾಮಾನ್ಯರಿಗೆ ಅರ್ಥವಾಗುವಂತಹ ಸಾಹಿತ್ಯ ರಚಿಸಿ, ಸಾಮಾನ್ಯರು ಕೂಡ ಓದಿ ಅರ್ಥ ಮಾಡಿಕೊಳ್ಳಬಹುದಾದ ಕೃತಿಗಳನ್ನು ರಚಿಸಿದರು. ಅವರ ಸೌಂದರ್ಯ ಲಹರಿ ಅವರ ರಚನೆಗಳಲ್ಲಿ ಉತ್ತಮ ಉದಾಹರಣೆಯಾಗಿದೆ. ಈ ಕೃತಿ ಯಾವುದೇ ಒಂದು ಜಾತಿಗೆ ಸೀಮಿತವಾಗದೆ ಎಲ್ಲ ಮನೆಗಳಲ್ಲಿ ಮಹಿಳೆಯರು ಪಠಿಸುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಶೃಂಗೇರಿ ಶಾಕಾ ಮಠದ ಮುಖ್ಯಸ್ಥ ಆರ್ ಸುಬ್ರಹ್ಮಣ್ಯ, ರವೀಂದ್ರ, ಸುಮಂತ ಶರ್ಮ, ಅನಂತು ಸೇರಿದಂತೆ ಸಮಾಜದ ಬಂಧುಗಳು ಹಾಜರಿದ್ದರು. ಜಯಂತ್ಯುತ್ಸವದ ನಿಮಿತ್ತ ಧಾರ್ಮಿಕ ಕಾರ್ಯಕ್ರಮ, ರುದ್ರಾಭಿಷೇಕ, ಅಷ್ಟಾವಧಾನ, ರುದ್ರ , ವಿಪ್ರ ಮಹಿಳಾ ಸದಸ್ಯೆಯರಿಂದ ಭಜನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ನಂತರ ಶಂಕರಚಾರ್ಯರವರ ಮೂರ್ತಿಯನ್ನು ಭವ್ಯ ಮೆರವಣಿಗೆಯೊಂದಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಪಟ್ಟಣದ ವಿವಿಧ ಭಜನಾ ಮಂಡಳಿಯ ಮಹಿಳೆಯರು , ಸಾರ್ವಜನಿಕರು ಪಾಲ್ಗೊಂಡಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *