ಆಲೂರು : ಹೆತ್ತವರ ಮನ ಕಲಕುವಂತಿದೆ ಇಂದಿನ ಘಟನೆ.
ಇನ್ನೂ ಎಳೆ ವಯಸ್ಸಿನ ಮಕ್ಕಳು,ಆಟ ಆಡಿಕೊಂಡು ತಂದೆ ತಾಯಿಗಳ ಜೊತೆ ಸ್ವಚ್ಛoಧವಾಗಿ ಬದುಕಿ ಬಾಳಬೇಕಾದ ಕಂದಮ್ಮಗಳು ಇಂದು ಕೇವಲ ನೆನಪಾಗಿದ್ದಾರೆ.
ಎಂತ ದುರ್ದೈವ ಪಾಪಿ ಕಣ್ಣಲ್ಲಿ ಉಸಿರುಗಟ್ಟಿ ಮುಳುಗಿದ ಮುಗ್ದ ಮನಸಿನ ಕಂದಮ್ಮಗಳ ಮೃತ ದೇಹ ಕಾರ್ಯಚಾರಣೆ ಮಾಡುವಾಗ ಒಂದೊಂದೇ ಮಕ್ಕಳ ದೇಹ ಸಿಕ್ಕಾಗೆಲ್ಲ ಕಿರುಚಿ ರೋದಿಸುವ ಪಾಲಕರ ಕಣ್ಣೀರ ನೋಡುವುದ್ಹೇಗೆ?
ಒಂದೇ ಕ್ಷಣ ಮಕ್ಕಳ ಹೆರಲೇ ಬಾರದು ಈ ಜನ್ಮ ಹೆತ್ತರೂ ಈ ಸ್ಥಿತಿಯಲ್ಲಿ ನೋಡಬಾರದು ಎಂದು ಬೋರ್ಗರೆದು ಅಳುವ ಸಂಭಂದಿಕರ ಕಣ್ಣೀರು ಎಂಥ ಕಲ್ಲು ಹೃದಯವನ್ನು ಕರಗಿಸಿಬಿಟ್ಟಿತ್ತು.
ಶಾಲಾ ರಜೆಯನ್ನು ಆಟವಾಡಿಕೊಂಡು ಆನಂದಿಸುತ್ತಿದ್ದ ನಾಲ್ವರು ಬಾಲಕರು ಇಂದು ಕೆರೆಯಲ್ಲಿ ಈಜಲು ಹೋಗಿ ಮುಳುಗಿ ಸಾವನಪ್ಪಿರುವ ಘಟನೆ ಆಲೂರು ತಾಲೂಕು ಕದಾಳು ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಮುತ್ತಿಗೆಯಲ್ಲಿ ನಡೆದಿದೆ.
ಮುತ್ತಿಗೆ ಜೀವನ್ (13 )ಸಾತ್ವಿಕ್ (11) ವಿಶ್ವ ಹಾಗೂ ಪೃಥ್ವಿ( 12 )ವರ್ಷದ ಮೃತ ಬಾಲಕರಾಗಿರುತ್ತಾರೆ.
ಶಾಲೆಗೆ ರಜೆ ಇರುವುದರಿಂದ ಈಜಲು ಹೋಗಿದ್ದ ಮಕ್ಕಳು ಒಬ್ಬರನ್ನೊಬ್ಬರು ರಚಿಸುವ ಪ್ರಯತ್ನದಲ್ಲಿ ಮುಳುಗಿರುತ್ತಾರೆಂದು ಗ್ರಾಮಸ್ಥರು ಮಾಹಿತಿ ನೀಡಿದಾರೆ .ಕೂಡಲೇ ಅಗ್ನಿಶಾಮಕ ದಳದವರು ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಶವಗಳ ಕಾರ್ಯಚರಣೆ ನಡೆಸಿ ನಾಲ್ಕು ಮಕ್ಕಳ ದೇಹವನ್ನು ಹೊರಕ್ಕೆ ತೆಗೆದಿದ್ದಾರೆ.
ನಂತರ ಆಲೂರು ಪೊಲೀಸ್ ಸಿಬ್ಬಂದಿಗಳು ಆಗಮಿಸಿ ಪರಿಶೀಲಿಸಿ ಬಾಲಕರ ಮೃತ ದೇಹವನ್ನು ಆಲೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಯಿತು.
ಇದೇ ಸಂದರ್ಭದಲ್ಲಿ ಶಾಸಕ ಮಂಜುನಾಥ್, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿಗಳು, ಸಕಲೇಶಪುರ ಉಪ ವಿಭಾಗದ ಅಧಿಕಾರಿ, ತಹಸಿಲ್ದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳು ಘಟನೆ ನಡೆದ ಸ್ಥಳಕ್ಕೆ ಆಗಮಿಸಿ ಮೃತ ಮಕ್ಕಳ ಪೋಷಕರಿಗೆ ಸಾಂತ್ವನ ನೀಡಿ ಬಾಲಕರ ಶವಕ್ಕೆ ಕಂಬನಿ ಮಿಡಿದಿದ್ದಾರೆ.
ಒಟ್ಟಾರೆ ನಮ್ಮ ಪತ್ರಿಕೆಯ ಸಾರಾಂಶ ಇಷ್ಟೇ, ಪ್ರತಿ ಬಾರಿ ಇಂತಹ ದುರ್ಘಟನೆಗಳು ನಡೆದಾಗ ಮೃತರ ಮಾಹಿತಿ ಹಾಕಿ ಸುದ್ದಿ ಮಾಡುವುದಷ್ಟೇ ಅಲ್ಲಾ ಸಾಮಾಜಿಕ ಸಂದೇಶ ನೀಡುವಂಥಹಜವಾಬ್ದಾರಿ ನಮ್ಮದು. ಆ ನಿಟ್ಟಿನಲ್ಲಿ ಪ್ರೈಮರಿ ಯಿಂದ ಪಿ ಯು ಸಿ ವರೆಗೂ ಶಾಲೆಯಲ್ಲಿ ಮಕ್ಕಳ ಸದೃಢ ಜೀವನ ರೂಪಿಸುವಂತಹ ಜಾಗೃತಿ ಶಿಕ್ಷಣವನ್ನು ತಿಂಗಳಿಗೊಮ್ಮೆ ಆದರು ನೀಡುವಂತೆ ಶಿಕ್ಷಣ ಇಲಾಖೆ ಪಠ್ಯ ಅಳವಡಿಸಿ ಬೋಧೀಸಬೇಕು. ದಯಮಾಡಿ ಮಕ್ಕಳೇ ಶಾಲೆ ರಜೆ ದಿನವನ್ನು ನಿಮ್ಮ ಪೋಷಕರೊಂದಿಗೆ ಆಟ ಆಡುತ್ತಾ ಕಳೆಯಿರಿ, ಎಲ್ಲಿಗಾದರೂ ಹೋಗುವ ಸಂಧರ್ಭದಲ್ಲಿ ತಂದೆ ತಾಯಿಗಳಿಗೆ ತಿಳಿಸಿ ಹೋಗಿ, ಅವರಿಗೆ ಗೊತ್ತಿಲ್ಲದಂತೆ ಈಜುವುದು ಬೈಕ್ ಓಡಿಸುವುದು ಇಂತಹ ಚಟುವಟಿಕೆಯಲ್ಲಿ ಪಾಲ್ಗೊಳ್ಳಬೇಡಿ.
ಎಲ್ಲಾ ತಂದೆ ತಾಯಂದಿರು ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಿನದಿಂದ ಅವರು ಸಾಯುವ ತನಕ ತಮ್ಮ ಮಕ್ಕಳಿಗೋಸ್ಕರ ಬದುಕುತ್ತಾರೆ. ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಆಸೆಗಳೆಲ್ಲವನ್ನು ತೊರೆದು ಮಕ್ಕಳ ಖುಷಿಯಲ್ಲಿ ತಮ್ಮ ನೋವು ಮರೆತು ತಮ್ಮ ಕೊನೆಗಾಲದಲ್ಲಿ ನನ್ನ ತಲೆ ಕಾಯುತ್ತಾರೆ ಎಂದು ಪ್ರತಿ ಕ್ಷಣ ಹಾಪಾಹಾಪಿಸುತ್ತಾರೆ.
ಇಂತಹ ಕ್ಷಣಿಕ ಆಟಗಳು ಮಕ್ಕಳ ಜೇವನ ಕಸಿದಾಗ ಮತ್ಯಾರು ದಿಕ್ಕು. ದಯಮಾಡಿ ಮಕ್ಕಳ ಭವಿಷ್ಯ ನಮ್ಮ ಜವಾಬ್ದಾರಿ ಎಂಬುದೇ ನಮ್ಮ ಆಶಯ.