ಸಕಲೇಶಪುರ : ಬ್ರಹ್ಮ ಕಮಲಕ್ಕೆ ವಿಶೇಷವಾದ ಸ್ಥಾನವಿದ್ದು ಇದು ಹಿಂದೂ ಧರ್ಮದಲ್ಲಿ ಬಹಳ ಮಹತ್ವದ ಹೂವು ಎಂದು ಗುರುತಿಸಲ್ಪಟ್ಟಿದ್ದು ವಿಶೇಷವಾಗಿ ಭಾರತದ ಉತ್ತರಾಖಂಡದ ಸ್ಥಳೀಯ ಹೂವು ಇದಾಗಿದೆ ಎಂದು ಹೇಳಲಾಗುತ್ತದೆ
ವೈಜ್ಞಾನಿಕವಾಗಿ ಹೇಳುವುದಾದರೆ ಸಸೆರಿಯಾ ಒಬೊವೆಲ್ಟಾ ಎಂಬ ಹೆಸರಿದೆ.
ರಾಜ್ಯದ ಕೆಲವು ಭಾಗಗಳಲ್ಲಿ ಈ ಹೂವನ್ನು ಬೆಳೆಸಲಾಗುತ್ತದೆ ಬ್ರಹ್ಮಕಮಲವು ರಾತ್ರಿ ಸುಮಾರು 11 ಘಂಟೆಯ ಸಮಯದಲ್ಲಿ ಅರಳಿ ಬೆಳಗಾಗುವಷ್ಟರಲ್ಲಿ ಮುದುಡಿ ಹೋಗುವ ಲಕ್ಷಣವನ್ನು ಹೊಂದಿದೆ ಇದು ಬಹಳ ಕಡಿಮೆ ಅವಧಿಗೆ ಗೋಚರಿಸುತ್ತದೆ.
ಈ ಹೂವಿನ ಬಗ್ಗೆ ಕೆಲವೇ ಜನರಿಗೆ ತಿಳಿದಿದೆ, ಆದರೆ ಅದರ ವಿಶೇಷತೆ ಬ್ರಹ್ಮಕಮಲ ಅರಳುವಾಗ ಸುಗಂಧಬರಿತವಾದ ವಾಸನೆಯನ್ನು ಬೀರುತ್ತದೆ
ಈ ಹೂವಿನ ಬಗ್ಗೆ ನಿಮಗೆ ತಿಳಿದಿದ್ದರೆ, ನೀವೂ ಕೂಡ ಖಂಡಿತವಾಗಿಯೂ ಈ ಹೂವಿನ ಗಿಡವನ್ನು ಮನೆಯಲ್ಲಿ ತಂದು ಬೆಳೆಸಬಹುದು ಹಾಗಾದರೆ ತಡವೇಕೆ ನೀವೂ ಕೂಡ ನಿಮ್ಮ ಮನೆಯಲ್ಲಿ ಬ್ರಹ್ಮಕಮಲ ಬೆಳೆಸುವ ಪ್ರಯತ್ನ ಮಾಡಿ.