
ಸಕಲೇಶಪುರ : ಕೊಲ್ಲಹಳ್ಳಿ ಗ್ರಾಮದ ಶ್ರೀ ವಿನಾಯಕ ಸೇವಾ ಸಮಿತಿ ವತಿಯಿಂದ ಈ ದಿನ 25ನೇ ವರ್ಷದ ಶ್ರೀ ವಿದ್ಯಾಗಣಪತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಶ್ರೀ ವಿನಾಯಕ ಸಮಿತಿ ಯೊಂದಿಗೆ ಕೊಲ್ಲಹಳ್ಳಿ ಬದ್ರಿಯಾ ಜುಮಾ ಮಸೀದಿಯ ಆಡಳಿತ ಸಮಿತಿಯವರು ಸೇರಿದಂತೆ ಗ್ರಾಮದ ಎಲ್ಲ ವರ್ಗದ, ಎಲ್ಲ ಜಾತಿಯ ಜನರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಇಡೀ ಗ್ರಾಮದಲ್ಲಿ ಶಾಂತಿ ಸೌಹಾರ್ದತೆಯ, ಸಹಬಾಳ್ವೆಯ, ಸಂಭ್ರಮದ, ವಿಜೃಂಭಣೆಯ ಗೌರಿ ಗಣೇಶ ಹಬ್ಬಕ್ಕೆ ಸಾಕ್ಷಿಗಳಾದೆವು.
ಸ್ವಾತಂತ್ರ್ಯ ಪೂರ್ವದಲ್ಲಿ ಭಾರತ ಸ್ವಾತಂತ್ರ್ಯಕ್ಕಾಗಿ ಬಾಲಗಂಗಾಧರ ತಿಲಕ ರವರು ಪ್ರಾರಂಭಿಸಿದ ಈ ಒಂದು ಹಬ್ಬ ಈ ದಿನ ನಮ್ಮ ಗ್ರಾಮದಲ್ಲೂ ಸ್ವಾತಂತ್ರ್ಯ ಸಂಗ್ರಾಮದ ನೆನಪು ಮತ್ತು 1947ರ ಸ್ವಾತಂತ್ರ್ಯ ದಿನದ ಸಂತೋಷ ಸಂಭ್ರಮ ಕಾಣುತ್ತಿತ್ತು.
ಭಾರತದ ಪ್ರತಿಯೊಂದು ಹಳ್ಳಿಗಳಲ್ಲೂ, ಬೀದಿ ಬೀದಿ ಗಳಲ್ಲೂ , ಗಲ್ಲಿ ಗಲ್ಲಿ ಗಳಲ್ಲೂ ಇಂತಹ ಶಾಂತಿ, ಸೌಹಾರ್ದತೆಯ, ಸಹಬಾಳ್ವೆಯ ಸಂಭ್ರಮದ ಹಬ್ಬಗಳು ಭಗವಂತ ಆಶೀರ್ವದಿಸಲಿ ಎಂದು ಕಾಂಗ್ರೆಸ್ ಕೆಪಿಸಿಸಿ ಸದಸ್ಯ ಕೊಲ್ಲಹಳ್ಳಿ ಸಲೀಂ ಪ್ರಾರ್ಥಿಸುತ್ತೇನೆ ಎಂದರು.

