॥ ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ ॥

ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಮೂಗಲಿ ಮತ್ತು ಸುಂಡಳ್ಳಿ ಗ್ರಾಮ, ಸಕಲೇಶಪುರ ತಾಲ್ಲೂಕು.

ಇವರ ಸಂಯುಕ್ತ ಆಶ್ರಯದಲ್ಲಿ ಹರಿಹರ ಸಂಬೂತ ಧರ್ಮಶಾಸ್ತ ಶಬರಿಗಿರಿವಾಸ ಶ್ರೀ ಅಯ್ಯಪ್ಪ ಸ್ವಾಮಿಯವರ 39ನೇ ವರ್ಷದ ಮಹಾಪೂಜೆ ಮಹೋತ್ಸವವನ್ನು ದಿನಾಂಕ : 4-1-2025ನೇ ಶನಿವಾರರಾತ್ರಿ 7 ಘಂಟೆಗೆ ವೈಭವದಿಂದ ನಡೆಸಲುನಿಶ್ಚಯಿಸಿರುವುದರಿಂದ ಭಕ್ತ ಮಹಾಶಯರುಗಳು ಶ್ರೀ ಸ್ವಾಮಿಯವರ ಪೂಜೆಗೆ ಆಗಮಿಸಿ. ತೀರ್ಥ-ಪ್ರಸಾದ ಸ್ವೀಕರಿಸಿ, ಶ್ರೀ ಸ್ವಾಮಿಯವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.

ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ ಮೂಗಲಿ ಮತ್ತು ಸುಂಡಳ್ಳಿ ಹಾಗೂ ಸುತ್ತ-ಮುತ್ತಲಿನ ಗ್ರಾಮಸ್ಥರು.

ವಿಶೇಷ ಸೂಚನೆ : ಶ್ರೀ ಸ್ವಾಮಿಯವರ ಕಳಸವನ್ನು ಸಂಜೆ 4 ಘಂಟೆಗೆ ಶಂಕು ತೀರ್ಥ ನದಿಯಿಂದ 101 ಜ್ಯೋತಿಯೊಂದಿಗೆ ವಿದ್ಯುತ್ ದೀಪ ಅಲಂಕೃತ ಮಂಟಪದಲ್ಲಿ ಮೆರವಣಿಗೆಯೊಂದಿಗೆ ಶ್ರೀ ಸ್ವಾಮಿಯವರ ಮೂರ್ತಿಯನ್ನು “ಚಂಡೆ” ವಾಧ್ಯವೃಂದದೊಂದಿಗೆ ಹಾಗೂ ಹೊಸದುರ್ಗ ತಾ. ನಾಯಿಗೆರೆ ಗ್ರಾಮದ ಲೋಕೇಶ್ ಮತ್ತು ತಂಡದವರಿಂದ ವೀರಗಾಸೆ ಕುಣಿತದೊಂದಿಗೆ ತರಲಾಗುವುದು.

ದಿನಾಂಕ : 10-1-2025ನೇ ಶುಕ್ರವಾರ ಬೆಳಿಗ್ಗೆ 10-00 ಘಂಟೆಗೆ ಇರುಮುಡಿ ಪೂಜಾ ಕಾರ್ಯಕ್ರಮ ಮತ್ತು ಮಧ್ಯಾಹ್ನ 1-00 ಘಂಟೆಗೆ ಊಟದ ವ್ಯವಸ್ಥೆ ಇರುತ್ತದೆ.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *