ಅರಸೀಕೆರೆ ತಾಲೂಕಿನ ಕಣಕಟ್ಟೆ ಹೋಬಳಿ ಶಶಿವಳ ಗ್ರಾಮದ ಇತಿಹಾಸ ಪ್ರಸಿದ್ಧ ಗೌರಮ್ಮ ದೇವಿ ವಿಸರ್ಜನಾ ಮಹೋತ್ಸವ ಹಾಗೂ ಕುಂಭಾಭಿಷೇಕ ಭಾನುವಾರ ಮಧ್ಯಾನ ಸಾವಿರಾರು ಭಕ್ತರ ಮುತ್ತೈದೆಯರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ವಿಜ್ರಮಣೆಯಿಂದ ಮತ್ತು ಅದ್ದೂರಿಯಾಗಿ ಜರುಗಿತು.
ರಾಜ್ಯದ ಇತಿಹಾಸ ಪ್ರಸಿದ್ಧಿ ಪಡೆದ ಲಕ್ಷಾಂತರ ಮಂದಿ ಆರಾಧ್ಯ ದೇವಿ ಹಾಗೂ ಶಕ್ತಿ ದೇವತೆ ಎಂದೇ ಭಕ್ತರ ಮನ ಮನಗಳಲ್ಲಿ ಬಿಂಬಿತವಾಗಿರುವ ಮಾಡಾಳು ಮೂಲಸ್ಥಾನ ಸ್ವರ್ಣ ಗೌರಮ್ಮ ದೇವಿ ಶಿಶುವಾಳ ಗ್ರಾಮದ ಆರಾಧ್ಯ ದೇವತೆ ಗಂಗಮ್ಮ ದೇವಿ ಈ ಭಾಗದಲ್ಲಿ ಹೆಸರುವಾಸಿಯಾಗಿದೆ
ಭಾದ್ರಪದ ಮಾಸದ ತದಿಗೆಯ ದಿನದಂದು ಗ್ರಾಮದ ಬಸವೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿತಗೊಂಡಿದ್ದ ಗೌರಮ್ಮ ದೇವಿಯು ಕಳೆದ 24 ದಿನಗಳಿಂದ ಧಾರ್ಮಿಕ ವಿಧಿ ವಿಧಾನಗಳಿಂದ ಹಾಗೂ ಶ್ರದ್ಧಾ ಭಕ್ತಿಯಿಂದ ತ್ರಿಕಾಲ ಪೂಜೆ ನಡೆಯುತ್ತಿತ್ತು ಸೋಮವಾರ ವಿಸರ್ಜನಾ ಮಹೋತ್ಸವದ ಪ್ರಯುಕ್ತ ಭಾನುವಾರ ಮಧ್ಯಾನ ಗ್ರಾಮದ ಮಧ್ಯಭಾಗದಲ್ಲಿರುವ ಗಂಗಮ್ಮ ದೇವಿಗೆ ಪೂಜೆ ಸಲ್ಲಿಸಿ ಗ್ರಾಮದ ಹೊರ ಭಾಗದಲ್ಲಿರುವ ಕಲ್ಯಾಣಿಯಿಂದ ನೂರಾರು ಮಹಿಳೆಯರು ಮೆರವಣಿಗೆಯಲ್ಲಿ ತೆರಳಿ ಕಲ್ಯಾಣಿಯಲ್ಲಿ ಗಂಗಾ ಪೂಜೆ ನೆರವೇರಿಸಿದರು
ನಂತರ ಮಂಗಳ ಕರಡಿ ವಾದ್ಯದೊಂದಿಗೆ ಬಾಲಕಿಯ ಮೇಲೆ ಕಳಸಾ ಒರೆಸಿ 101 ಮಹಿಳೆಯರು ಕುಂಭಗಳೊಂದಿಗೆ ನಡೆ ಮಡಿಯ ಮೇಲೆ ಮೆರವಣಿಗೆಯಲ್ಲಿ ಸಾಗಿದ್ದು ಮಾತ್ರ ವಿಶೇಷವಾಗಿತ್ತು
ಮೆರವಣಿಗೆಯು ಬಸವೇಶ್ವರ ದೇವಾಲಯ ಕತೆರಳಿ ಮಹಾಮಂಗಳಾರತಿ ಸಲ್ಲಿಸಿದ ನಂತರ ಗ್ರಾಮದ ಮಧ್ಯ ಭಾಗದಲ್ಲಿರುವ ಗಂಗಾದೇವಿ ಬಾವಿ ಯತ್ರ ಸಮಾಪನಗೊಂಡಿತು ಬಂದಿದ್ದ ಭಕ್ತಾದಿಗಳಿಗೆ ಭಕ್ತ ಮಂಡಳಿ ವತಿಯಿಂದ ಕಡ್ಲೆ ಉಂಡೆ ಕಲಹರ ವಿತರಿಸಲಾಯಿತು ಅಲ್ಲದೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು