ಕೋರವಂಗಲ ಗ್ರಾಮದಲ್ಲಿ ಪಶು ಆರೋಗ್ಯ ತಪಾಸಣಾ ಶಿಬಿರ
ಹಾಸನ: ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರದಲ್ಲಿರುವ ಹಾಸನದ ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು ಹಾಸನ ತಾಲೂಕಿನ ದುದ್ದ ಹೋಬಳಿಯ ಕೋರವಂಗಲ ಗ್ರಾಮದಲ್ಲಿ ಪಶು ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಂಡಿದ್ದರು.
ಕೃಷಿ ಮಹಾವಿದ್ಯಾಲಯ ಹಾಸನ,ಪಶು ವೈದ್ಯಕೀಯ ಮಹಾವಿದ್ಯಾಲಯ ಹಾಸನ ಮತ್ತು ಪಶು ಸಂಗೋಪನಾ ಇಲಾಖೆ ಹಾಸನ, ಹಿರಿಯ ವಿದ್ಯಾರ್ಥಿಗಳ ಸಂಘ, ಯು.ಎ.ಎಸ್ ಬೆಂಗಳೂರು, ಹಾಗೂ ಕೃಷಿ ತಂತ್ರಜ್ಞರ ಸಂಸ್ಥೆ ಹಾಸನ ಘಟಕ ಇವರ ಸಂಯುಕ್ತಾಶ್ರಯದಲ್ಲಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಡಾII ಕೆ. ಎನ್.ಮುನಿಸ್ವಾಮಿ ಗೌಡ,ಡೀನ್ ಕೃಷಿ,ಕೃಷಿ ಮಹಾವಿದ್ಯಾಲಯ ಹಾಸನ ರವರು ಕರುವಿಗೆ ಜಂತು ಹುಳುವಿನ ಔಷಧಿ ನೀಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶಿಬಿರಕ್ಕೆ ಸುಮಾರು 90ಕ್ಕೂ ಹೆಚ್ಚು ರಾಸುಗಳು, ಕುರಿ ಮೇಕೆಗಳು ಹಾಗೂ ಒಂದು ನಾಯಿಯನ್ನು ತಪಾಸಣೆಗಾಗಿ ಕರೆ ತಂದಿದ್ದರು.
ಈ ಶಿಬಿರದ ಅಂಗವಾಗಿ ಪಶು ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವೈದ್ಯ ಪ್ರಾಧ್ಯಾಪಕರ ಮುಂದಾಳತ್ವದಲ್ಲಿ ಹಾಗೂ ಕೃಷಿ ವಿದ್ಯಾರ್ಥಿಗಳ ಸಹಕಾರದೊಂದಿಗೆ ಗ್ರಾಮದ ಎಲ್ಲಾ ಜಾನುವಾರುಗಳನ್ನು ಪರಿಶೀಲಿಸಿ ಅದಕ್ಕೆ ತಕ್ಕ ಚಿಕಿತ್ಸೆಯನ್ನು ಉಚಿತವಾಗಿ ನೀಡಿದರು ಮತ್ತು ಜಾನುವಾರುಗಳಲ್ಲಿ ಕಂಡುಬರುವ ಚಪ್ಪಟೆ ರೋಗಕ್ಕೆ ಲಸಿಕೆಯನ್ನು ನೀಡಿದರು.
ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಪಶುಗಳ ರೋಗ ಮತ್ತು ಅದರ ನಿರ್ವಹಣೆಗೆ ಸಂಬಂಧಿಸಿದಂತೆ ಮಾಡಿದ್ದ ಚಾರ್ಟ್ ಹಾಗೂ ಮಾದರಿಗಳನ್ನು ರೈತರು ವೀಕ್ಷಿಸಿದರು.ರೈತರ ಅನುಕೂಲಕ್ಕಾಗಿ ನಡೆಸಿದ್ದ ಈ ಶಿಬಿರವನ್ನು ಗ್ರಾಮದ ಎಲ್ಲಾ ರೈತರು ಸದುಪಯೋಗ ಪಡೆಸಿಕೊಂಡರು.
ಈ ಕಾರ್ಯಕ್ರಮದಲ್ಲಿ ಡಾII ಕೆ. ಎನ್.ಮುನಿಸ್ವಾಮಿ ಗೌಡ,ಡೀನ್ ಕೃಷಿ,ಕೃಷಿ ಮಹಾವಿದ್ಯಾಲಯ ಹಾಸನ. ಡಾ.ಶಂಕರೇಗೌಡ,ಸಹಾಯಕ ಪ್ರಾಧ್ಯಾಪಕರು ಜನನೇಂದ್ರಿಯ ಮತ್ತು ಪ್ರಸೂತಿ ಶಾಸ್ತ್ರ ವಿಭಾಗ, ಪಶು ವೈದ್ಯಕೀಯ ಮಹಾವಿದ್ಯಾಲಯ ಹಾಸನ .ಡಾ.ಧಾರಣೇಶ್,ಮುಖ್ಯ ಪಶುವೈದ್ಯಾಧಿಕಾರಿಗಳು, ಚಿಕ್ಕ ಕಡಲೂರು. ಡಾ.ಅಶ್ವಿನಿ ಎ. ಸಹಾಯಕ ಪ್ರಾಧ್ಯಾಪಕರು,ಪಶು ವೈದ್ಯಕೀಯ ಮತ್ತು ಚಿಕಿತ್ಸಾ ವಿಭಾಗ,ಪಶು ವೈದ್ಯಕೀಯ ಮಹಾವಿದ್ಯಾಲಯ ಹಾಸನ. ಡಾ.ಪ್ರಮೋದ್ ಸಹಾಯಕ ಪ್ರಾಧ್ಯಾಪಕರು, ಬೇಸಾಯ ಶಾಸ್ತ್ರ ವಿಭಾಗ ಕೃಷಿ ಮಹಾವಿದ್ಯಾಲಯ ಹಾಸನ ಹಾಗೂ ಪಶು ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕೃಷಿ ಮಹಾವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಗ್ರಾಮದ ರೈತರು ಸಹಕರಿಸಿ ಈ ಶಿಬಿರವನ್ನು ಯಶಸ್ವಿಗೊಳಿಸಿದರು.