ಸಕಲೇಶಪುರ: ಡಾ.ಬಾಬಾ ಸಾಹೇಬ್ ಅಂಬೇಡ್ಕರ್‌ ರವರ ಮೇಲಿನ ಅಭಿಮಾನ ಜನರಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿರುವುದು ಸಂತೋಷದ “ವಿಷಯವಾಗಿದೆ ಎಂದು ಶಾಸಕ ಸಿಮೆಂಟ್ ಮಂಜು ಹೇಳಿದರು.

ಪಟ್ಟಣದ “ಮಿನಿ”ವಿಧಾನಸೌಧದ ಆವರಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಸಮಾಜ ಕಲ್ಯಾಣ ಇಲಾಖೆ, ಪುರಸಭೆ ವತಿಯಿಂದ ಆಯೋಜಿಸಲಾಗಿದ್ದ ಅಂಬೇಡ್ಕರ್ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿ ಬಾಬಾ ಸಾಹೇಬರ ಋಣ ನನ್ನ ಮೇಲಿದೆ. ಬಾಬಾ ಸಾಹೇಬರು ನೀಡಿರುವ ಸಂವಿಧಾನದಿಂದ ನಾನು ಇಂದು ಕ್ಷೇತ್ರದ ಶಾಸಕನಾಗಿದ್ದೇನೆ.

ಬಾಬಾ ಸಾಹೇಬರು ಇಲ್ಲದಿದ್ದಲ್ಲಿ ನಮ್ಮಗಳ ಬದುಕು ಯಾವ ಪರಿಸ್ಥಿತಿ ಇರುತ್ತಿತ್ತು ಅಂತ ನೀವು ಯಾರಾದರೂ ಊಹೆ ಮಾಡಲಿಕ್ಕೂ ಸಾಧ್ಯವಿಲ್ಲ, ಪ್ರತಿಯೊಬ್ಬ ಪ್ರಜೆಗೂ ಮತದಾನದ ಹಕ್ಕನ್ನು ಕೊಡಿಸಿದವರು ಬಾಬಾ ಸಾಹೇಬರು, ವ್ಯಕ್ತಿ ಪ್ರಧಾನಿಯೇ ಆಗಿರಲಿ, ಅಧಿಕಾರಿಯೆ ಆಗಿರಲಿ, ಸಾಮಾನ್ಯ ವ್ಯಕ್ತಿಯೆ ಆಗಿರಲಿ ಒಬ್ಬರಿಗೆ ಒಂದು ಓಟು ಮಾತ್ರ ಹಾಕಲು ಅವಕಾಶ ಎಂದು ಸಂವಿಧಾನದಲ್ಲಿ ಜಾರಿಗೆ ತಂದರು, ಬಾಬಾ ಸಾಹೇಬರು ಇಲ್ಲದಿದ್ದಲ್ಲಿ ಜಮೀನದಾರರಿಗೆ, ಶ್ರೀಮಂತರಿಗೆ ಮಾತ್ರ ಓಟು ನೀಡುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಬಾಬಾ ಸಾಹೇಬರು ಕೊಟ್ಟಿರುವಂತಹ ಸಂವಿಧಾನದಿಂದ ಚಹಾ ಮಾರುವಂತ ವ್ಯಕ್ತಿ ಸಹ ಪ್ರಧಾನ ಮಂತ್ರಿಯಾಗಬಹುದಾಗಿದೆ.

ಬಾಬಾ ಸಾಹೇಬ್ ಅಂಬೇಡ್ಕರ್ ತನ್ನ ಸ್ವಂತಕೋಸ್ಕರ ಏನನ್ನು ಕೂಡ ಮಾಡಿಕೊಳ್ಳಲಿಲ್ಲ, ತನ್ನ ಮಗ ಮೃತಪಟ್ಟ ಸಂರ್ಧಭದಲ್ಲಿ ಸಹ “ವಿದೇಶದಲ್ಲಿದ್ದು ಆವಾಗಲು ಸಹ ಜನಸಾಮಾನ್ಯರಿಗಾಗಿ ದೇಶಕ್ಕೆ ಬರಲಿಲ್ಲ. ಏಕೆಂದರೆ ಅವರು ದೇಶದ ಪ್ರತಿಯೊಬ್ಬರಿಗೂ ನ್ಯಾಯ ಕೊಡಿಸಬೇಕೆಂಬ ತುಡಿತವನ್ನು ಹೊಂದಿದ್ದರು.

ಈ ದೇಶದಲ್ಲಿ ಬಾಬಾ ಸಾಹೇಬ್ ಅಂತ ವ್ಯಕ್ತಿತ್ವ ಮತ್ತೊಂದು ಹುಟ್ಟಲು ಸಾಧ್ಯವಿಲ್ಲ ಅಂತ ಹೇಳಿದರೆ ತಪ್ಪಾಗಲಾರದು, ದೇಶಕ್ಕಾಗಿ ಜೀವನ ಕೊಟ್ಟ ಬಾಬಾ ಸಾಹೇಬರು ಚುನಾವಣೆಗೆ ನಿಂತಾಗ ಎರಡು ಬಾರಿ ಸೋಲಿಸುತ್ತಾರೆ.

“ಈಗಾಗಿ ನಾನು ಪ್ರತಿಯೋರ್ವ ಬಂಧುಗಳಿಗೆ ಮನವಿ” ಮಾಡುತ್ತೇನೆ ಮತದಾನ ಮಾಡುವ ಮೊದಲು ಯೋಚಿಸಿ ಮತದಾನ ಮಾಡಿ ಎನ್ನುತ್ತೇನೆ.ಈ ದೇಶದಲ್ಲಿ “ವಿಷವನ್ನು ಕುಡಿದು ನಮಗೆಲ್ಲ ಅಮೃತ ಕೊಟ್ಟಿರತಕ್ಕಂತ ಯಾವುದಾದರೂ ವ್ಯಕ್ತಿ ಇದ್ದರೆ ಅದು ಅಂಬೇಡ್ಕರ್ ಎಂದು ಪ್ರಧಾನ ಮಂತ್ರಿಗಳೆ ಹೇಳಿದ್ದಾರೆ.

ಬೇರೆ ಬೇರೆ ದೇಶಕ್ಕೆ ಬೇರೆ ಬೇರೆ ರೀತಿಯ ಸಂವಿಧಾನ ಗಳಿದ್ದು ಆದರೆ ಭಾರತದಂತಹ ದೇಶದಲ್ಲಿ ಸಾವಿರಾರು ಜಾತಿಗಳು, ಸಂಸ್ಕೃತಿಗಳು, ಧರ್ಮಗಳಿದ್ದು ಇವೆಲ್ಲವನ್ನು ಒಗ್ಗೂಡಿಸಿರುವುದು ಸಂವಿಧಾನವಾಗಿದೆ.ಎಲ್ಲದಕ್ಕಿಂತ ಮುಖ್ಯವಾಗಿ ಬಾಬಾ ಸಾಹೇಬರ ಜೀವನ ಚರಿತ್ರೆಯನ್ನು ತಾವೆಲ್ಲರೂ ಕೂಡ ಓದಬೇಕು. ಪ್ರತಿಯೋಬ್ಬರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಲು ಮುಂದಾಗಬೇಕು ಎಂದರು. ಮುಖ್ಯ ಭಾಷಣಕಾರ ಪ್ರೊಪೆಷರ್ ಮಂಜಯ್ಯ ಮಾತನಾಡಿ ದೇಶದಲ್ಲಿ ಮಹಿಳೆಯರಿಗೆ, ದೀನ ದಲಿತರಿಗೆ ಸಮಾನವಾದ ಹಕ್ಕು ಸಿಗಲು ಅಂಬೇಡ್ಕರ್ ಕಾರಣರಾಗಿದ್ದಾರೆ. ನಮಗೆ ನಾವೆ ಬೆಳಕಾಗಬೇಕು ಪ್ರತಿಯೊಬ್ಬರು ದುಷ್ಚಟಗಳಿಂದ, ಮೂಡ ನಂಬಿಕೆಗಳಿಂದ ಹೊರ ಬಂದರೆ ಮಾತ್ರ ಅಂಬೇಡ್ಕರ್‌ರವರಿಗೆ ಗೌರವ ಸಲ್ಲಿಸಲು ಸಾಧ್ಯವಾಗುತ್ತದೆ ಎಂದರು.

ಈ ಸಂರ್ಧಭದಲ್ಲಿ ತಹಶೀಲ್ದಾರ್ ಅರವಿಂದ್, ಡಿ.ವೈ.ಎಸ್.ಪಿ ಪ್ರಮೋದ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ್, ಸಮಾಜ ಕಲ್ಯಾಣಧಿಕಾರಿ ಮೋಹನ್ ಕುಮಾರ್, ಪುರಸಭಾ ಮುಖ್ಯಾಧಿಕಾರಿ ಮಹೇಶ್ವರಪ್ಪ, ಪುರಸಭಾ ಸದಸ್ಯೆ ಅನ್ನಪೂರ್ಣ, ಮುಂತಾದವರು ಹಾಜರಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed