
ಸ್ಟೋನ್ ವ್ಯಾಲ್ಯೂ ರೆಸಾರ್ಟ್‌ನಲ್ಲಿ ಹಲ್ಲೆ ಅರೋಪ.
ಸಕಲೇಶಪುರ: ತಾಲೂಕಿನ ಹಾನುಬಾಳು ಬಳಿಯ ಸ್ಟೋನ್ ವ್ಯಾಲ್ಯೂ ರೆಸಾರ್ಟ್‌ನಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಹಲವು ಜನರ ಮೇಲೆ ಹಲ್ಲೆ ನಡೆದಿರುವ ಘಟನೆ ನಡೆದಿದೆ.
ಗಾಯಾಳುಗಳು ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಾಗಿ, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ.
ಕ್ರಾಫರ್ಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಗಾಯಾಳುಗಳಲ್ಲಿ ಒಬ್ಬರು,
“ನಾವು ರೆಸಾರ್ಟ್‌ಗೆ ಬೇಸಿಗೆಯಲ್ಲಿ ಮಕ್ಕಳಿಗೆ ರಜೆ ಇದ್ದ ಕಾರಣ ಇಲ್ಲಿ ಸೌಂದರ್ಯ ವೀಕ್ಷಿಸಲು ಕುಟುಂಬ ಸಮೇತರಾಗಿ ಬಂದಿದ್ದೆವು. ಆದರೆ ಕೆಲವರು ನಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದರು. ನಾವು ಕಾರಣ ಕೇಳಿದಾಗ, ಅವರು ನಮ್ಮ ಮೇಲೆ ಹಲ್ಲೆ ನಡೆಸಿದರು ಎಂದು ಹೇಳಿದರು.
ಸಕಲೇಶಪುರದ ಜನರು ಅತಿಥಿ ಸತ್ಕಾರದಲ್ಲಿ ನಿಪುಣರು, ನಾಗರಿಕವಾಗಿ ವರ್ತಿಸುತ್ತಾರೆ ಎಂದು ಕೇಳಿದ್ದೆವು. ಆದರೆ ಇಲ್ಲಿ ನಮಗೆ ಎದುರಾದ ಅನುಭವ ನೋವು ತಂದಿದೆ. ಮಹಿಳೆಯರ ಮತ್ತು ಮಕ್ಕಳ ಮುಂದೆಯೇ ರೆಸಾರ್ಟ್ ಕಾರ್ಮಿಕರು ಹಾಗೂ ಮಾಲೀಕರು ಅಸಭ್ಯವಾಗಿ ವರ್ತಿಸಿ ದೌರ್ಜನ್ಯ ಎಸಗಿದರು, ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ಮೇಲೆ ಗುಂಪು ಹಲ್ಲೆ ನಡೆದಿದೆ, ದೌರ್ಜನ್ಯ ಕೂಡ ನಡೆದಿದೆ. ನಾವು ಬೇಗ ರೆಸಾರ್ಟ್‌ನಿಂದ ಹೊರಬಂದೆವು, ಇಲ್ಲವಾದರೆ ಪ್ರಾಣಾಪಾಯವಾಗುತ್ತಿತ್ತೇನೋ ಸ್ಥಳೀಯ ಕೆಲವು ಮಂದಿ ನಮ್ಮ ನೆರವಿಗೆ ಬಂದು, ಮೊದಲು ಹಾನುಬಾಳಿನಲ್ಲಿ ಚಿಕಿತ್ಸೆ ಪಡೆದಿದ್ದೇವೆ. ನಂತರ ಸಕಲೇಶಪುರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಈಗ ಮಂಗಳೂರಿಗೆ ಹೋಗುತ್ತಿದ್ದೇವೆ. ಈ ಸಂಬಂಧ ಪೊಲೀಸರು ತಕ್ಷಣವೇ ಉಗ್ರ ಕಾನೂನು ಕ್ರಮ ಕೈಗೊಳ್ಳಬೇಕು, ಎಂದು ಹೇಳಿದರು.