ಸಕಲೇಶಪುರ: ಪಟ್ಟಣದ ಸಕಲೇಶ್ವರಸ್ವಾಮಿ ದೇವಸ್ಥಾನದಿಂದ ಅಂಭೇಡ್ಕರ್ ಭಾವಚಿತ್ರವನ್ನು ಸಾರೋಟ್‌ನಲ್ಲಿ ಇಟ್ಟು ನಾಸಿಕ್ ಡೋಲ್, ಡಿಜೆಯೊಂದಿಗೆ ಮುಖ್ಯ ಬೀದಿಯಲ್ಲಿ ಮೆರವಣಿಗೆ ನಡೆಸಿದ ಮುಖಂಡರು ದಾರಿಯುದ್ದಕ್ಕೂ ಪಟಾಕಿ ಸಿಡಿಸುವ ಮೂಲಕ ಅಂಭೇಡ್ಕರ್‌ಗೆ ಜೈಕಾರ ಹಾಕುವ ಮೂಲಕ ಡಿಜೆಯ ಹಾಗೂ ನಾಸಿಕ್ ಡೋಲ್‌ಗೆ ಯುವಕರು ಯುವತಿಯರು ಡ್ಯಾನ್ಸ್ ಮಾಡುವ ಮೂಲಕ ಅಂಭೇಡ್ಕರ್ ಬರ್ತಡೆ ಸೆಲೆಬ್ರೆಷನ್ ಮಾಡಿದರು.

ಅಂಬೇಡ್ಕರ್ ಜಯಂತಿಯ ಅಂಗವಾಗಿ ಸಂಘದ ವತಿಯಿಂದ ಪಟ್ಟಣದ ಹಳೆಬಸ್ ನಿಲ್ದಾಣದಲ್ಲಿ ಏರ್ಡಿಸಿದ್ದ ರಕ್ತದಾನ ಶಿಬಿರದಲ್ಲಿ ಹಲವಾರು ಅಂಭೇಡ್ಕರ್ ಅಭಿಮಾನಿಗಳು ಮತ್ತು ಕಾರ್ಯಕರ್ತರು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು.

ನಂತರ ತಾಲೂಕು ಆಡಳಿತ ಸೌದದ ಎದುರು ಇರುವ ಅಂಭೇಡ್ಕರ್ ಪ್ರತಿಮೆಗೆ ಶಾಸಕ ಸಿಮೆಂಟ್ ಮಂಜುನಾಥ್, ಮಾಜಿ ಶಾಸಕ ಹೆಚ್.ಕೆ.ಕುಮಾರಸ್ವಾಮಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಡಿಸಿ ಸಣ್ಣಸ್ವಾಮಿ, ಪುರಸಭೆ ಮಾಜಿ ಅದ್ಯಕ್ಷ ಕಾಡಪ್ಪ, ಮಾಜಿ ಸದಸ್ಯ ಜೈಭೀಮ್ ಮಂಜು, ಕಾಂಗ್ರೆಸ್ ಯೂತ್ ಅದ್ಯಕ್ಷ ದರ್ಮ ಹೆನ್ನಲಿ, ಮುಖಂಡರಾದ ಈರಪ್ಪ ನಲ್ಲುಲಿ, ವೆಂಕಟೇಶ್ ಹೆನ್ನಲಿ, ದರ್ಮ ರಾಮೇನಹಳ್ಳಿ, ನಿಂಗರಾಜು ಕುನಿಗನಹಳ್ಳಿ, ಗಿರೀಶ್ ವಡೂರು, ಬಿ.ಬಿ.ಮಂಜುನಾಥ್, ತಿಪ್ಪೇಸ್ವಾಮಿ, ನಿರ್ವಣಯ್ಯ, ಉದಯ ರಾಗಿಪುರ ಇತರರು ಇದ್ದರು.

ಬೌದ್ದ ಸಮಾಜದಿಂದ ಮೆರವಣಿಗೆ

ಡಾ.ಬಿ.ಆರ್.ಅಂಭೇಡ್ಕರ್ ಅವರ 134 ನೇ ಜನ್ಮ ದಿನಾಚರಣೆಯ ಅಂಗವಾಗಿ ಪಟ್ಟಣದ ಹೇಮಾವತಿ ಪ್ರತಿಮೆಯ ಬಳಿಯಿಂದ ಬೌದ್ದ ಸಮಾಜದ ನೂರಾರು ಜನರು ಬಿಳಿ ವಸ್ತ್ರಗಳನ್ನು ತೊಟ್ಟು ಅಂಭೇಡ್ಕರ್ ಭಾವಚಿತ್ರವನ್ನು ಪ್ರಮುಖ ಬೀದಿಯಲ್ಲಿ ಮೆರವಣಿಗೆ ನಡೆಸಿ ನಂತರ ತಾಲೂಕು ಆಡಳಿತ ಸೌದದ ಮುಂಭಾಗ ಬುದ್ದನ ಮೂರ್ತಿಯನ್ನು ಇಟ್ಟು ಪ್ರಾರ್ಥನೆ ಸಲ್ಲಿಸುವ ಮೂಲಕ ಅಂಭೇಡ್ಕರ್ ಜಯಂತಿಯನ್ನು ಆಚರಿಸಿದರು.

ಈ ಸಂದರ್ಭದಲ್ಲಿ ಬೌದ್ದ ಸಮಾಜದ ಮುಖಂಡ ನಾಗಸೇನ ನಾಗರ, ರಮೇಶ್ ನಾಗರ, ಮೊಗಪ್ಪ, ಸೇರಿದಂತೆ ಅನೇಕ ಉಪಾಸಕರು ಹಾಗೂ ಉಪಾಸಕಿಯರು ಮೆರವಣಿಗೆಯಲ್ಲಿ ಸಾಲಾಗಿ ಬಂದಿದ್ದು ವಿಶೇಷವಾಗಿತ್ತು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed