
ಸಕಲೇಶಪುರ : ಇಂದು ಲಯನ್ಸ್ ಕ್ಲಬ್ ನ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 155ನೇ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಅವರ 120ನೇ ಜನ್ಮ ದಿನಾಚರಣೆ ಅಂಗವಾಗಿ ವಿಶೇಷವಾಗಿ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪಾ ಸಲ್ಲಿಸುವುದರ ಮೂಲಕ ನಮನವನ್ನು ಸಲ್ಲಿಸಲಾಯಿತು.
ಹಾಗೆ ಲಯನ್ಸ್ ಕ್ಲಬ್ ವತಿಯಿಂದ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು
ಈ ಕಾರ್ಯಕ್ರಮದಲ್ಲಿ ಲಯನ್ಸ್ ನ ಅಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ ಅವರು ಕಾರ್ಯದರ್ಶಿಯವರಾದ ವೆಂಕಟೇಶ್ ಕೆ.ಆರ್ ಅವರು ಹಾಗೂ ಖಜಾಂಚಿವರಾದ ಪ್ರೇಮ್ ನಾಥ್ ರವರು ಹಾಜರಿದ್ದರು
ಈ ಸ್ವಚ್ಛತಾ ಕಾರ್ಯದಲ್ಲಿ ಲಯನ್ಸ್ ನ ಮಾಜಿ ಅಧ್ಯಕ್ಷರುಗಳಾದ ಲಯನ್ ಬಬಿತಾ ಲಯನ್ ವಿಶ್ವನಾಥ್ ಆನಂದ್ ಲಿಯೋ ವಾಸ್ ಹಾಗೂ ಲಯನ್ಸ್ ಸದಸ್ಯರುಗಳಾದ ಲಯನ್ ಗಿರೀಶ್ ಮಂಜು ಲಯನ್ ಜಗದೀಶ್ ಲಯನ್ ಶಶಿಕಲಾ ಕೃಷ್ಣಪ್ಪ ಪೂಜಾರಿ ಮತ್ತು ಲಿಯೋ ಅಧ್ಯಕ್ಷರಾದ ಆಶ್ರಿತ ಹಾಗೂ ಲಿಯೋ ಸದಸ್ಯರುಗಳು ಭಾಗವಹಿಸಿದ್ದರು



