ಬೇಲೂರು : ಇತ್ತೀಚಿಗೆ ಸೆ.14 ರಂದು ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಚಿಕನಹಳ್ಳಿ ವಾಟರ್‌ಮ್ಯಾನ್ ಗಣೇಶ್‌ನನ್ನು ಕೊಲೆ ಮಾಡಿದ್ದ ರೌಡಿಶೀಟರ್ ಮಧು
ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ರೌಡಿಶೀಟರ್ ಮಧು
ಇಂದು ಮುಂಜಾನೆ ಹಬ್ಬಕ್ಕೆಂದು ಅರೇಹಳ್ಳಿಗೆ ಬರುತ್ತಿದ್ದ ಮಧು
ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಲು ತೆರಳಿದ್ದ ಪೊಲೀಸರು
ರೌಡಿಶೀಟರ್‌ನನ್ನು ಬಂಧಿಸಲು ಹೋದ ವೇಳೆ ಡ್ರ್ಯಾಗನ್‌ನಿಂದ ಪೊಲೀಸರ ಮೇಲೆ ಹಲ್ಲೆ ಮಾಡಿದ ರೌಡಿಶೀಟರ್ ಮಧು
ಅರೇಹಳ್ಳಿ ಪೊಲೀಸ್ ಠಾಣೆ ಕಾನ್ಸ್‌ಟೇಬಲ್‌ಗಳಾದ ಶಶಿ ಹಾಗೂ ಅಶೋಕ್ ಮೇಲೆ ಹಲ್ಲೆ
ಒಂದು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ತಿಳಿಸಿದ ಇನ್ಸ್‌ಪೆಕ್ಟರ್ ವಿನಯ್
ಈ ವೇಳೆ ಕಲ್ಲಿನಿಂದ ಹಲ್ಲೆ ಮಾಡಿದ ರೌಡಿಶೀಟರ್ ಮಧು
ರೌಡಿಶೀಟರ್ ಹಾಗೂ ಕೊಲೆ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಬೇಲೂರು ಇನ್ಸ್‌ಪೆಕ್ಟರ್ ವಿನಯ್
ಆರೋಪಿ ಮೇಲೆ ಚಿಕ್ಕಮಂಗಳೂರು ಮತ್ತು ಅರೆಹಳ್ಳಿಯಲ್ಲಿ ಒಟ್ಟು 10 ಪ್ರಕರಣಗಳಿದ್ದುಆರೋಪಿ ಬೇಲೂರು ಆಸ್ಪತ್ರೆಗೆ ದಾಖಲು
ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ