ಸಕಲೇಶಪುರ : ನಗರದ ಹೇಮಾವತಿ ನದಿ ಪಕ್ಕದಲ್ಲಿ ಅಕ್ರಮವಾಗಿ ತಡೆಗೋಡೆ ನಿರ್ಮಾಣ ಆರೋಪದ ಹಿನ್ನೆಲೆಯಲ್ಲಿ ಇಂದು ಬೆಳ್ಳಂಬೆಳಗ್ಗೆ ಬಿಗಿ ಪೊಲೀಸ್ ಬಂದೋಬಸ್ತ್ ನೊಂದಿಗೆ ತಾಲ್ಲೂಕು ಆಡಳಿತ ತಡೆಗೋಡೆ ತೆರವುಗೊಳಿಸಿದ್ದಾರೆ.

ನಗರದ ಶ್ರೀನಿವಾಸ ಕನ್ವೇಷನ್ ಹಾಲ್ ಮಾಲಿಕತ್ವದ ಶ್ರೀನಿವಾಸ್ ರವರು ನಿರ್ಮಿಸಿದ್ದರು ಎನ್ನಲಾದ ತಡೆಗೋಡೆ ಕುರಿತು ಕೆಲ ಸಂಘ ಸಂಸ್ಥೆಗಳು ಆರೋಪ ಮಾಡಿದ್ದರು.ಹಾಗಾಗಿ ಇಂದು ಬೆಳಿಗ್ಗೆ ಜೆಸಿಬಿ ಯಂತ್ರದ ಮೂಲಕ ಬೃಹತ್ ತಡೆ ಗೋಡೆಯನ್ನು ತೆರವುಗೊಳಿಸಿದ್ದಾರೆ.

ಈ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿತ್ತು.ಆದರೆ ಮಾಲಿಕರಾದ ಶ್ರೀನಿವಾಸರವರ ಹೇಳಿಕೆಯಂತೆ ತಾಲೂಕಿನ ಕಸಬಾ ಹೋಬಳಿಯ ಮಳಲಿ ಗ್ರಾಮ ಪಂಚಾಯತಿ ಸರ್ವೆ ನಂಬರ್ 287 ಹಾಗೂ ಇತರೆ ನನ್ನ ಸ್ವಂತ ಇಡುವಳಿ ಜಮೀನಾಗಿದ್ದು, ಈ ಜಮೀನಿನಲ್ಲಿ ನಾನು ಅಡಿಕೆ , ಏಲಕ್ಕಿ, ಕಾಡುಜಾತಿಯ ಮರಗಳನ್ನು ಹಾಕಿ ಕೃಷಿ ಚಟುವಟಿಕೆ ಮಾಡಿಕೊಂಡಿರುತ್ತೇನೆ.

ಈ ಕೃಷಿ ಜಮೀನಿಗೆ ದನಕರುಗಳು ಬರುವುದರಿಂದ ಹಾಗೂ ಹೇಮಾವತಿ ನದಿಯೂ ಪಕ್ಕದಲ್ಲಿ ಇರುವುದರಿಂದ ನೀರಿನ ರಭಸಕ್ಕೆ ಮಣ್ಣಿನ ಸವೆತ ಉಂಟಾಗಿರುತ್ತದೆ. ಮಣ್ಣಿನ ಸವೆತವನ್ನು ತಡೆಗಟ್ಟಲು ನನ್ನ ಹಿಡುವಳಿ ಜಾಗದ ಪಶ್ಚಿಮ ಭಾಗದಲ್ಲಿ ಕಾಂಪೌಂಡ್ ನಿರ್ಮಿಸಿ ಕೊಂಡಿರುತ್ತೇನೆ. ನಾನು ಈ ಕಾಪೌಂಡ್ ನಿರ್ಮಿಸುವ ಮುಂಚೆ ಮಳಲಿ ಗ್ರಾಮ ಪಂಚಾಯಿತಿಗೂ ಸಹ ನನಗೆ ಕಾಂಪೌಂಡ್ ಕಟ್ಟಲು ಅನುಮತಿ ಕೇಳಿಕೊಳ್ಳುತ್ತೇನೆ ಆ ಸರ್ವೆ ನಂಬರ್ ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಎಂದು ತಿಳಿಸಿರುತ್ತಾರೆ

ಹಾಗೂ ಸಕಲೇಶಪುರ ಪುರಸಭೆಯವರು ಸಹ ಅದು ನಮ್ಮ ವ್ಯಾಪ್ತಿಗೆ ಬರುವುದಿಲ್ಲವೆಂದು ತಿಳಿಸಿರುತ್ತಾರೆ .ಈ ಹಿಡುವಳಿ ಜಾಗವು ಯಾವುದೇ ಮುಳಗಡೆ ಜಾಗಕ್ಕೆ ಸೇರಿಲ್ಲವೆಂದು ಹೇಮಾವತಿ ಜಲಾನಯನ ಇಲಾಖೆಯವರು ನಮ್ಮಗೆ ನೀರಪೇಕ್ಷಪಣಾ ಪತ್ರವನ್ನು ನೀಡಿರುತ್ತಾರೆ.ಹಾಗೂ ಈ ಜಾಗಕ್ಕೆ ಸಂಬಂಧಿಸಿದಂತೆ ನಮ್ಮ ಹಿಡುವಳಿ ಜಾಗದಲ್ಲಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ಹಿಡುವಳಿ ಮಧ್ಯದಲ್ಲಿ ದಾರಿಯನ್ನು ಬಿಟ್ಟುಕೊಟ್ಟಿರುತ್ತೇನೆ ಆದರೆ ಸಕಲೇಶಪುರ ತಾಲ್ಲೂಕು ಆಡಳಿತ ಅಧಿಕಾರಿಗಳು ಏಕಾಏಕಿ ನಮಗೆ ಯಾವುದೇ ಮಾಹಿತಿ ಹಾಗೂ ನೋಟಿಸ್ ನೀಡದೆ ಇಂದು ಬೆಳಿಗ್ಗೆ 5:30 ರ ಸುಮಾರಿಗೆ ಪುರಸಭೆಯ ಜೆಸಿಬಿ ಹಾಗೂ ಪೊಲೀಸ್ ಸಿಬ್ಬಂದಿಗಳ ಸಹಾಯದಿಂದ ಕಾಂಪೌಂಡ್ ಒಡೆದುಹಾಕಿರುತ್ತಾರೆ ಎಂದು ದೂರಿದ್ದಾರೆ.

ಸಕಲೇಶಪುರ ಉಪವಿಭಾಗಾಧಿಕಾರಿಗಳಾದ ಡಾ.ಎಂ.ಕೆ.ಶೃತಿ ಮಾತನಾಡಿ ಈ ಹಿಂದೆಯೇ ಶ್ರೀನಿವಾಸ ಕನ್ವೆನ್ಶನ್ ಅವರಿಗೆ ಈ ಪ್ರದೇಶ ಬೊಫೋರ್ ಜೋನ್‌ಗೆ ಬರುವ ಕಾರಣ ಈ ಜಾಗದಲ್ಲಿ ಯಾವುದೇ ಕಾಮಗಾರಿ ಮಾಡಬಾರದು ಎಂದು ನೋಟೀಸ್ ನೀಡಲಾಗಿತ್ತು ಅದು ಅಲ್ಲದೆ ಹೇಮಾವತಿ ನದಿ ಪಾತ್ರದ 50 ಮೀಟರ್‌ನಲ್ಲಿ ಯಾವುದೇ ಕಾಮಗಾರಿ ಮಾಡಬಾರದು ಎಂಬ ನಿಯಮವಿದೆ ಆ ನಿಯಮವನ್ನು ಮೀರಿ ಹಾಗೂ ಸಾರ್ವಜನಿಕರು ತಿರುಗಾಡುವ ರಸ್ತೆಗೆ ಮತ್ತು ವಿದ್ಯುತ್ ಕಂಬಗಳಿಗೆ ತಡೆಗೋಡೆ ಸೇರಿಸಿ ಕಟ್ಟಿರುವುದು ನಿಯಮ ಬಾಹಿರವಾಗಿದ್ದು ಹಾಗೂ ಅಕ್ರಮ ತಡೆಗೋಡೆಯ ಬಗ್ಗೆ ಸಂಘಟನೆಗಳು ಪ್ರತಿಭಟನೆ ಮಾಡಿ ಮನವಿ ಸಲ್ಲಿಸಿದ ಹಿನ್ನಲೆಯಲ್ಲಿ ಇಂದು ತಡೆಗೋಡೆಯನ್ನು ತೆರವುಗೊಳಿಸಲಾಗಿದೆ ಎಂದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *