ಮತ್ತೆ ಚಾಕೋಲೆಟ್ ಪ್ರತ್ಯಕ್ಷ: ಜನತೆಯಲ್ಲಿ ಮನೆಮಾಡಿದ ಆತಂಕ

ಅರೇಹಳ್ಳಿ: ಬೇಲೂರು ತಾಲೂಕಿನ ಅರೇಹಳ್ಳಿಯ ಲಿಂಗಾಪುರ, ಉಲ್ಲಾಸನಗರ, ಮಲಸಾವರ ರಸ್ತೆಯಲ್ಲಿ ಕಳೆದ ಕೆಲವು ದಿನಗಳ ಕಂಡು ಬಂದ ಹಿನ್ನಲೆ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಚಾಕೋಲೆಟ್ ಪ್ರಕರಣವು ಜನಮಾನಸದಲ್ಲಿ ಮರೆಯಾಗುವ ಮುನ್ನವೇ ಮತ್ತೆ ಚಾಕೋಲೆಟ್ ಪ್ಯಾಕೆಟ್‌ಗಳು ಅಲ್ಲಲ್ಲಿ ಗೋಚರಿಸುತ್ತಿರುವುದರಿಂದ ನಿವಾಸಿಗಳಲ್ಲಿ ತೀವ್ರ ಆತಂಕ ಮನೆ ಮಾಡಿದೆ.

ಬೇಲೂರು ಮುಖ್ಯ ರಸ್ತೆಯಲ್ಲಿರುವ ವಲ್ಲಿ ಎಸ್ಟೇಟ್‌ನ ಗೇಟ್ ಬಳಿಯ ಮೋರಿ ಕಟ್ಟೆಯ ಬಳಿ ಶನಿವಾರ ಮಧ್ಯಾಹ್ನ ಕಂಡುಬಂದ ಈ ಘಟನೆಯನ್ನು ಉದ್ದೇಶಿಸಿ ಸರ್ದಾರ್ ಷರೀಫ್ ಮಾತನಾಡಿ, ಕೆಲವು ಕೆಲ ದಿನಗಳ ಹಿಂದೆ ಹಲವು ಸ್ಥಳಗಳಲ್ಲಿ ಚಾಕೋಲೆಟ್‌ಗಳು ಕಂಡುಬಂದಿದ್ದವು. ದಯಮಾಡಿ ಈ ವಿಚಾರವನ್ನು ಎಲ್ಲರಿಗೂ ತಿಳಿಸಿ. ಪೋಷಕರು ಈ ರೀತಿ ಸಿಗುತ್ತಿರುವ ಸಿಹಿ ವಸ್ತುಗಳನ್ನು ಬಳಸದಂತೆ ಮಕ್ಕಳಿಗೆ ತಿಳುವಳಿಕೆ ನೀಡಬೇಕು. ಇನ್ನೂ ಒಂದು ವರ್ಷದ lಅವಧಿಯಿರುವಂತಹ ಚಾಕೋಲೆಟ್‌ಗಳನ್ನು ಯಾವ ಉದ್ದೇಶದಿಂದ ಹೀಗೆ ಎಲ್ಲರಿಗೂ ಸಿಗುವಂತೆ ಇಡುತ್ತಿದ್ದಾರೋ ಗೊತ್ತಿಲ್ಲ.

ಆದ್ದರಿಂದ ಇಂತಹ ಪ್ರಕರಣಗಳನ್ನು ಪೊಲೀಸರು ಲಘುವಾಗಿ ಪರಿಗಣಿಸದೇ ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಭಯದ ವಾತಾವರಣ ಸೃಷ್ಠಿ ಮಾಡುತ್ತಿರುವಂತಹ ವ್ಯಕ್ತಿಗಳನ್ನು ಪತ್ತೆ ಹಚ್ಚಬೇಕು ಇಂದು ಮನವಿ ಮಾಡಿದ್ದಾರೆ

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *