
ಅರಸೀಕೆರೆ : ತಾಲೂಕಿನ ಇತಿಹಾಸ ಪ್ರಸಿದ್ಧ ಮಾಡಾಳು ಮೂಲಸ್ಥಾನ ಶ್ರೀ ಸ್ವರ್ಣ ಗೌರಮ್ಮ ಗೌರಮ್ಮ ದೇವಿ ದೇವಾಲಯದಲ್ಲಿ ಮಣ್ಣೆತ್ತಿ ಅಮಾವಾಸ್ಯೆ ಪ್ರಯುಕ್ತ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠದ ಉತ್ತರಾಧಿಕಾರಿ ಶ್ರೀ ಚೇತನ್ ಮರಿದೇವರ ಪಾದ ಪೂಜೆಯೊಂದಿಗೆ ವಿಶೇಷ ಪೂಜೆ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರದ್ಧಾ ಭಕ್ತಿಯಿಂದ ಬುಧವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು
ಸಂಪ್ರದಾಯದಂತೆ ಪ್ರತಿ ತಿಂಗಳು ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯುತ್ತವೆ ಅಂದು ಬೆಳಗ್ಗೆ ದೇವಾಲಯದಲ್ಲಿ ಸಂಭ್ರಮ ಮನೆ ಮಾಡಿತ್ತು ದೇವಾಲಯವನ್ನುತಳಿರು ತೋರಣ ಹಾಗೂ ಬಾಳೆಕಂದುಗಳಿಂದ ಶೃಂಗೇರಿಸಲಾಗಿತ್ತು ಅಲ್ಲದೆ ಬಣ್ಣ ಬಣ್ಣದ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿತ್ತು ಬ್ರಾಹ್ಮಿ ಮುಹೂರ್ತದ ಲ್ಲಿ ಅರ್ಚಕರು ರುದ್ರಾಭಿಷೇಕ ಪಂಚಾಭಿಷೇಕ ಹಾಗೂ ದೇವಿಗೆ ಕುಂಕುಮಾರ್ಚನೆಯನ್ನು ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನಗಳಿಂದ ನೆರವೇರಿಸಿದರು
ಸಂಜೆ ಕೊಡಿಮರದಿಂದ ಆಗಮಿಸಿದ ಶ್ರೀಗಳನ್ನು ರ ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು ನಂತರ ಶ್ರೀಗಳವರ ಪಾದ ಪೂಜೆ ಶಾ ಶಾಸ್ತ್ರೋಕ್ತವಾಗಿ ಧಾರ್ಮಿಕ ವಿಧಿ ವಿಧಾನಗಳಿಂದ ನೆರವೇರಿಸಲಾಯಿತು
ಈ ಸಂದರ್ಭದಲ್ಲಿ ಮಾತ ನಾಡಿದ ಚೇತನ್ ಮರಿದೇವರು ಧರ್ಮಚರಣೆ ಇಲ್ಲದ ಮನುಷ್ಯನ ವ್ಯಕ್ತಿತ್ವಕ್ಕೆ ಬೆಲೆ ನೆಲೆ ಸಿಗಲಾರದು ಸಂಸ್ಕಾರದಿಂದಬೆಲೆಯುಳ್ಳ ಬದುಕು ಸಾರ್ಥಕ ಗೊಳ್ಳುತ್ತದೆ ಸಂಪತ್ತು ಅಷ್ಟೇ ಮುಖ್ಯವಲ್ಲ ಅದರೊಂದಿಗೆ ಒಂದಿಷ್ಟಾದರೂಶಿವ ಜ್ಞಾನದ ಅರಿವು ಮುಖ್ಯ ಅಲ್ಲದೆ ಧರ್ಮಪ್ರಜ್ಞೆಯು ಅಗತ್ಯವಿದೆ ಎಂದು ಶ್ರೀಗಳು ತಿಳಿಸಿದರು ದೇವಿಗೆ ಮಹಾಮಂಗಳಾರತಿಯ ನಂತರ ಬಂದ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು
ಮಾಡಾಳು ಸೇರಿದಂತೆ ಡಿ ಎಂ ಕುರ್ಕೆ ಶಶಿವಾಳ ರಾಂಪುರ ಹಾರನಹಳ್ಳಿ ನಾಗತಿಹಳ್ಳಿ ಅಣ್ಣಾಯಕನಹಳ್ಳಿ ಸೋಮಶೆಟ್ಟಿಹಳ್ಳಿವೈಜಿಹಳ್ಳಿ ಪಿ ಹೊಸಳ್ಳಿ ಕಿತ್ತನಕೆರೆ ದೊಣನಕಟ್ಟೆ ಬೊಮ್ಮಸಮುದ್ರ ಕೆ ಶಂಕರನಹಳ್ಳಿ ಕಡಲಮಗೆ ಮುಂತಾದ ಗ್ರಾಮಗಳಿಂದ ಭಕ್ತರು ಆಗಮಿಸಿ ದೇವಿ ದರ್ಶನ ಪಡೆದು ಪುನೀತರಾದರು.
