ಆಲೂರು : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಹಾಸನ ಆಲೂರು ತಾಲ್ಲೂಕು ಪತ್ರಕರ್ತರ ಸಂಘದ ಸಹಯೋಗದಲ್ಲಿ ಎರಡನೇ ವರ್ಷದ ಕೆಸರು ಗದ್ದೆ ಕ್ರೀಡಾಕೂಟ ಬೈರಾಪುರದ ಬ್ಯಾಡರಹಳ್ಳಿ ಗ್ರಾಮದಲ್ಲಿ ನಡೆಯಿತು

ಕಾರ್ಯಕ್ರಮದ ಉದ್ಘಾಟನೆಯನ್ನು ಆದಿಚುಂಚನಗಿರಿ ಶಾಕಾ ಮಠದ ಶಂಭುನಾಥ ಮಹಾ ಸ್ವಾಮಿಗಳು ಗಿಡಕ್ಕೆ ನೀರನ್ನು ಎರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾನಾಡಿದವರು ಮಳೆಗಾಲದಲ್ಲಿಯೂ ನಾನಾ ಕ್ರೀಡಾ ಚಟುವಟಿಕೆಗಳು ನಡೆಯುತ್ತವೆ ಅದರಲ್ಲೂ ಮಳೆಗಾಲದಲ್ಲಿ ಕೆಸರುಗದ್ದೆಯಲ್ಲಿ ನಡೆಯುವ ಕ್ರೀಡಾಕೂಟ ಮಹತ್ವ ಪಡೆದುಕೊಂಡಿದೆ ಹಾಸನ ಜಿಲ್ಲಾ ಪತ್ರಕರ್ತರ ಸಂಘದ ವಿಶೇಷತೆ ಎಂದರೆ ಬೇಸಿಗೆಯ ಸಮಯದಲ್ಲಿ ಕ್ರಿಕೆಟ್‌, ಫುಟ್‌ಬಾಲ್‌, ವಾಲಿಬಾಲ್‌ ಒಂದಲ್ಲೊಂದು ಕ್ರೀಡಾಕೂಟಗಳು ನಡೆಸುತ್ತಲೇ ಇರುತ್ತಿರ ಮಳೆಗಾಲ ಬಂತೆಂದರೆ, ಕೆಸರು ಗದ್ದೆ ಕ್ರೀಡಾಕೂಟಗಳು ಗಮನ ಸೆಳೆಯುತ್ತವೆ.

ಈ ಕ್ರೀಡಾಕೂಟಗಳು ದೇಸಿ ಸೊಗಡನ್ನು ಅನಾವರಣಗೊಳಿಸುತ್ತವೆಇಲ್ಲಿನ ಕ್ರೀಡಾಪ್ರೇಮಿಗಳು ಮಳೆ ಚಳಿಗೆ ಮೈಯೊಡ್ಡಿ ಆಟವಾಡುವುದಕ್ಕಾ ಏನೋ ಉಮ್ಮಸ್ಸು ಎನಿಸುತ್ತದೆ ಹಾಗೂ ಬಾಲ್ಯದ ಸಿಹಿ ಕಹಿ ನೆನಪುಗಳನ್ನು ಮೆಲುಕು ಹಾಕುತ್ತದೆ ಗದ್ದೆಯಲ್ಲಿ ವಾಲಿಬಾಲ್‌, ಥ್ರೋಬಾಲ್‌, ಹಗ್ಗಜಗ್ಗಾಟ, ಕೆಸರು ಗದ್ದೆ ಓಟ, ಮುಕ್ತ ಓಟ, ಸಾಂಪ್ರದಾಯಿಕ ನಾಟಿ ಓಟದ ಸ್ಪರ್ಧೆಗಳು ಗ್ರಾಮೀಣ ಪ್ರದೇಶದ ಸಂಸ್ಕೃತಿಯನ್ನು ಎತ್ತಿ ಹಿಡಿಯಲು ಸಹಕರಿಸುತ್ತದೆ ಎಂದು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು

ಇದೇ ಸಂದರ್ಭದಲ್ಲಿ ಎ ಟಿ ರಾಮಸ್ವಾಮಿ ಮಾತಾನಾಡಿ ಸದಾ ಕೆಲಸದ ಒತ್ತಡದಲ್ಲಿರುವ ಪತ್ರಕರ್ತರು ಇಂತಹ ಕ್ರೀಡೆಗಳನ್ನು ಆಯೋಜಿಸಿಕೊಂಡು ತಮ್ಮ ಕುಟುಂಬದ ಸದಸ್ಯರೊಂದಿಗೆ ಕಾಲ ಕಳೆಯಲು ಸುಂದರ ಸುಸಂದರ್ಭ ಒದಗಿ ಬಂದಿದೆ ಪ್ರತಿನಿತ್ಯ ಕೆಲಸ ಕೆಲಸವೆಂದು ಮನೆಯವರ ಜೋತೆ ಅವರೊಡನೆ ಇರಲು ಸಮಯವೇ ಸಿಗುವುದಿಲ್ಲ ಇಂತಹ ಜಾಗಕ್ಕೆ ಮನೆಯವರೊಡನೆ ಬಂದರೆ ಅವರಿಗೆ ಸಂತೋಷ ಸಿಗುತ್ತದೆ ನಿಮಗೂ ಮನಸ್ಸು ತಿಳಿಯಾಗುತ್ತದೆ ಎಂದರು

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *