
ಸಕಲೇಶಪುರ.ತಾಲೂಕಿನ ಬೆಳಗೋಡು ಹೋಬಳಿಯ ಉದಯವಾರದಲ್ಲಿ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯವಿದ್ದು, ವ್ಯೆದ್ಯರ ಕೊರತೆ ಇದೆ. ಬೆಳಗೊಡು ಹೋಬಳಿಯ ಉದಯವಾರ, ಕೆಸಗುಲಿ, ಕಲ್ಲಹಳ್ಳಿ, ಬಾಳಗೋಡು-ದಿಣ್ಣೇಕೆರೆ, ಕುಶಾಲನಗರ, ಹೊಸನಗರ, ಹೆಬ್ಬನಳ್ಳಿ, ಶಿಡಗಳಲೆ, ಹೊಸ ಕೊಪ್ಪಲು, ಕೆಲಗಳಲೆ ಗ್ರಾಮಗಳಿದ್ದು, ಸುಂಡೇಕೆರೆ ಹಾಗೂ ಬೆಳಗೋಡಿನಲ್ಲಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರು, ಆಂಬುಲೆನ್ಸ್ ವ್ಯವಸ್ಥೆ ಇಲ್ಲದೆ ಸುತ್ತಮುತ್ತಲಿನ ಗ್ರಾಮಸ್ಥರು ತುರ್ತು ಪರಿಸ್ಥಿತಿಯಲ್ಲಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ತಾಲ್ಲೂಕು ಕರವೇ ಅಧ್ಯಕ್ಷರಾದ ಗಗನ್ ಹಾಡ್ಲಳ್ಳಿ ರವರ ಮಾರ್ಗದರ್ಶನದಂತೆ ಸ್ಥಳಕ್ಕೆ ತಾಲೂಕು ರೈತ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ದಿಲೀಪ್ ಕೆಸಗುಲಿ ಹಾಗೂ ಉದಯವಾರ ಘಟಕದ ಅಧ್ಯಕ್ಷರಾದ ಯು.ಎಂ.ಮಂಜುನಾಥ್, ಪ್ರಧಾನ ಕಾರ್ಯದರ್ಶಿಗಳಾದ ಅರುಣ್, ಕುಮಾರ್ ರವರು ಪದಾಧಿಕಾರಿಗಳ ಜೊತೆ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ರೈತ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ದಿಲೀಪ್ ಕೆಸಗುಲಿ ರವರು ಮಾತನಾಡಿ ಸಕಲೇಶಪುರದಿಂದ ಬೆಳಗೋಡು ಹೋಬಳಿಯ ಗ್ರಾಮಗಳಿಗೆ ಸುಮಾರು 15 ರಿಂದ 25 ಕಿ.ಮೀ. ಅಂತರವಿದ್ದು ಬಹುತೇಕ ಜನರು ಕೂಲಿಕಾರ್ಮಿಕರಾಗಿದ್ದು, ಅಪಘಾತ, ಹಾರ್ಟ್ ಅಟ್ಯಾಕ್ ಮುಂತಾದ ತುರ್ತು ಸಂದರ್ಭದಲ್ಲಿ ತಾಲೂಕು ಆಸ್ಪತ್ರೆಗೆ ಕರೆದೊಯ್ಯಲು ವಾಹನ ಸಮಸ್ಯೆ . ಹತ್ತಿರದಲ್ಲಿ ಯಾವುದೇ ಆಂಬುಲೆನ್ಸ್ ವ್ಯವಸ್ಥೆ ಇಲ್ಲದೆ ಬಡ ಕುಟುಂಬಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಶೀಘ್ರದಲ್ಲೇ ಬಡ ಕುಟುಂಬಗಳಿಗೆ ಅನುಕೂಲವಾಗುವಂತೆ ಬೆಳಗೋಡು ಹೋಬಳಿಗೆ ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಿದರು.
ಉದಯವಾರ ಪಂಚಾಯಿತಿ ಘಟಕದ ಅಧ್ಯಕ್ಷರಾದ ಯು.ಎಂ.ಮಂಜುನಾಥ್ ರವರು ಮಾತನಾಡಿ ಸರ್ಕಾರಿ ಆಯುರ್ವೇದಿಕ ಆಸ್ಪತ್ರೆಗೆ ಖಾಯಂ ವೈದ್ಯರನ್ನು ನೇಮಿಸಿ ಕೊಡಿ.ಈ ನಮ್ಮ ಗ್ರಾಮದಲ್ಲಿ ಹೆಚ್ಚಿನವರು ಕೂಲಿಕಾರ್ಮಿಕರಾಗಿದ್ದು ಏನೇ ಒಂದು ತೊಂದರೆಯಾದರೆ ಈ ಆಸ್ಪತ್ರೆಯಲ್ಲಿಯೇ ಬಂದು ಚಿಕಿತ್ಸೆ ಪಡೆಯಬೇಕು.ವೈದ್ಯರಿಲ್ಲದ ಕಾರಣ 14 ಕಿಲೋ ಮೀಟರ್ ಸಕಲೇಶಪುರಕ್ಕೆ ಹೋಗಬೇಕಾಗುತ್ತದೆ.ಆರೋಗ್ಯ ಸಮಯ ಸಂದರ್ಭದಲ್ಲಿ ಯಾವುದೇ ವಾಹನ ಸಿಗುವುದಿಲ್ಲ.ಆದ್ದರಿಂದ ನಮಗೆ ಈ ಒಂದು ಆಸ್ಪತ್ರೆಗೆ ಖಾಯಂ ವೈದ್ಯಾಧಿಕಾರಿಗಳನ್ನು ನೇಮಿಸಿಕೊಡಬೇಕು ಹಾಗೂ ನಮ್ಮ ಈ ಸುತ್ತಮುತ್ತಲಿಗೇ ಒಂದು ಆಂಬುಲೆನ್ಸ್ ಅವಶ್ಯಕತೆ ಇದ್ದು ಈ ಆಂಬುಲೆನ್ಸ್ ಬೆಳಗೋಡು ಸುಂಡೆಕೆರೆ ಅಥವಾ ಉದಯವಾರದಲ್ಲಿ ನಿಲುಗಡೆ ಆದಲ್ಲಿ ಇಲ್ಲಿಯ ಸುತ್ತಮುತ್ತಲ ಜನಸಾಮಾನ್ಯರಿಗೆ ಸಹಕಾರಿಯಾಗುತ್ತದೆ.
ಸಂಬಂಧ ಪಟ್ಟ ಅಧಿಕಾರಿಗಳಲ್ಲಿ ಕೇಳುವುದು ಇಷ್ಟೇ ಆದಷ್ಟು ಬೇಗ ನಮ್ಮ ಈ ಆಸ್ಪತ್ರೆಗೆ ಖಾಯಂ ವೈದ್ಯಾಧಿಕಾರಿಗಳನ್ನು ನೇಮಿಸಿ ಹಾಗೂ ಈ ಸುತ್ತಮುತ್ತಲ ಜನರಿಗೆ ಸಹಕಾರಿಯಾಗುವಂತಹ ಆಂಬುಲೆನ್ಸ್ ವ್ಯವಸ್ಥೆ ಮಾಡಿಕೊಡಿ ಎಂದು ಮನವಿ ಮಾಡಿದರು.
ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ನಮ್ಮ ತಾಲೂಕು ಅಧ್ಯಕ್ಷರಾದ ಗಗನ್ ಹಾಡ್ಲಳ್ಳಿ ರವರ ನೇತೃತ್ವದಲ್ಲಿ ಬೃಹತ್ ಹೋರಾಟದ ಮೂಲಕ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.
