ಹಾಸನ : ಬಸವಣ್ಣನಂತೆ “ಹೊಳ್ಯಾಗ ಜಿಗಿರಿ” ಎಂದು ಹೇಳಿ ಬಸವ ಭಕ್ತರಿಗೆ ನೋವು ಉಂಟು ಮಾಡಿರುವ ವಿಜಯಪುರದ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಕೂಡಲೇ ಕ್ಷಮೆಯಾಚಿಸಬೇಕು ಎಂದು ವೀರಶೈವ ಲಿಂಗಾಯತ ಯುವ ಸೇನೆಯ ಪ್ರಧಾನ ಕಾರ್ಯದರ್ಶಿ ಅವಿನಾಶ್ ಜಿ.ಎಸ್ ಆಗ್ರಹಿಸಿದ್ದಾರೆ.

ಬಸವಣ್ಣನವರ ಬಗ್ಗೆ ಅವಿವೇಕ ತನದಿಂದ ಲಘುವಾಗಿ ಮಾತನಾಡಿರುವ ಯತ್ನಾಳ್ ಕ್ಷಮೆ ಕೇಳದಿದ್ದರೆ ಹಾಸನ ಜಿಲ್ಲಾ ವೀರಶೈವ ಲಿಂಗಾಯತ ಯವ ಸೇನೆ ಶೀಘ್ರ ಸಭೆ ಕರೆದು ಯತ್ನಾಳ್ ಅವರ ಹೇಳಿಕೆ ಬಗ್ಗೆ ಸೂಕ್ತ ತೀರ್ಮಾನಕ್ಕೆ ಬರಲಾಗುವುದು.

ಬಸವಣ್ಣನವರು ಮಾನವ ಕಲ್ಯಾಣಕ್ಕಾಗಿ ಕ್ರಾಂತಿ ಮಾಡಿದ್ದರು. ಅವರು ಹೊಳೆಯಲ್ಲಿ ಜಿಗಿದಿರಲಿಲ್ಲ, ಅವರು ಹಾಗೆ ಜಿಗಿದಿದ್ದರೆ ಯತ್ನಾಳ್ ಅವರ ತಂದೆ-ತಾಯಿ ಅವರಿಗೆ ಬಸವಣ್ಣನವರ ಹೆಸರು ಇಡುತ್ತಿರಲಿಲ್ಲ, ಬಸವಣ್ಣನವರು ಕ್ರಾಂತಿಯೋಗಿ, ಧೀರ ಪ್ರವಾದಿ, 12ನೇ ಶತಮಾನದಲ್ಲಿ ಶತ ಶತಮಾನಗಳ ಮೌಢ್ಯ, ಅನಿಷ್ಠ ಪದ್ಧತಿಗಳನ್ನು ಹೋಗಲಾಡಿಸಿ, ಸಮಾನತೆ ಸಮಾಜ ನಿರ್ಮಿಸಿ, ಮಹಿಳೆಯರಿಗೂ ಸಹ ಸಮಾನತೆ ದೊರಕಿಸಿಕೊಟ್ಟವರು.

ಅವರು ಜನ್ಮವೆತ್ತ ಜಿಲ್ಲೆಯಲ್ಲೇ ಜನಿಸಿದ ಯತ್ನಾಳರು ಮಾತಿನ ಬರದಲ್ಲಿ ಬಸವಣ್ಣನವರ ಕುರಿತು ಅವಿವೇಕದ ತಪ್ಪು ಸಂದೇಶ ಹೋಗುವ ರೀತಿಯಲ್ಲಿ ಮಾತನಾಡಿರುವುದು ಸರಿಯಲ್ಲ ಎಂದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *