ಅರೇಹಳ್ಳಿ: ಬೇಲೂರು ತಾಲೂಕಿನ ಅರೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸಾರ್ವಜನಿಕರು ಈ ಹಿಂದೆ ವಿವಿದ ಸ್ಥಳಗಳಲ್ಲಿ ಮೋಬೈಲ್ ಪೋನ್ ಗಳನ್ನು ಕಳೆದು ಕೊಂಡು ಇ ಪೋರ್ಟಲ್ ಮೂಲಕ ದೂರು ದಾಖಲಿಸಿದ್ದು ಅಂಥವರ ಮೊಬೈಲ್ ಗಳನ್ನು ಸಿ.ಈ.ಐ.ಆರ್ ಪೋರ್ಟಲ್ ಮೂಲಕ ಪೊಲೀಸ್ ಇಲಾಖೆ ಪತ್ತೆ ಹಚ್ಚಿ ವಾರಸುದಾರರಿಗೆ ಮರಳಿಸಿದ್ದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಒಂದು ವರ್ಷದ ಹಿಂದೆ ನೆಂಟರೊಬ್ಬರ ಅನಾರೋಗ್ಯ ಸಂಬಂಧ ಜಿಲ್ಲಾ ಆಸ್ಪತ್ರೆಯ ಹೊರಾಂಗಣದಲ್ಲಿ ರಾತ್ರಿ ಸಮಯ ತಂಗಿದ್ದ ವೇಳೆ ಮೊಬೈಲ್ ಖದೀಮರು ತಮ್ಮ ಕೈಚಳಕ ತೋರಿಸುವ ಮೂಲಕ ಮೊಬೈಲ್ ಲನ್ನು ಎಸ್ಕೇಪ್ ಮಾಡಿದ್ದು ಈ ಹಿನ್ನಲೆ ತಕ್ಷಣ ಇ ಪೋರ್ಟಲ್ ಮೂಲಕ ದೂರು ದಾಖಲಿಸಿ ಸಂಬಂಧ ಪಟ್ಟ ಪೊಲೀಸ್ ಠಾಣೆಯಲ್ಲಿ ತಿಳಿಸಲಾಗಿತ್ತು,
ಇದಾದ ವರ್ಷದ ಬಳಿಕ ಸಕ್ರಿಯರಾಗಿದ್ದ ಪೊಲೀಸ್ ಇಲಾಖೆ ಅಧಿಕಾರಿಗಳು ಕಳೆದು ಹೋಗಿದ್ದ ಮೋಬೈಲ್ ಪೋನ್ ಗಳನ್ನು ಪತ್ತೆ ಹಚ್ಚಿ ಮರಳಿ ನೀಡಿರುವುದು ಉತ್ತಮ ಕಾರ್ಯವಾಗಿದೆ .
ಮೋಬೈಲ್ ಖದಿಮರಿಗೆ ಇದೊಂದು ಎಚ್ಚರಿಕೆ ಸಂದೇಶವಾಗಿದ್ದು ಮುಂದಿನ ದಿನಗಳಲ್ಲಿ ಇವುಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಸಜ್ಜಾಗಿದೆ ಎಂದು ಮೋಬೈಲ್ ಕಳೆದುಕೊಂಡವರು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.