ಸಕಲೇಶಪುರ : ಪಟ್ಟಣದ ಹಳೆ ಬಸ್ ನಿಲ್ದಾಣದ ಬಳಿ ಶುಕ್ರವಾರದಂದು ಬಾಗೆ ಜೆಎಸ್ಎಸ್ ಪಬ್ಲಿಕ್ ಶಾಲೆ ಮಕ್ಕಳಿಂದ ರೈತರ ಅಳಲು ಮತ್ತು ಮಾನವ ಸಂಬಂಧಗಳ ಕುರಿತಾದ ಬೀದಿ ನಾಟಕ ಪ್ರದರ್ಶನದ ಉದ್ಘಾಟನೆ ಮಾಡಿ ಮಾತನಾಡಿ ಇಂದಿನ ಸಂಕಷ್ಟದ ಪರಿಸ್ಥಿಯಲ್ಲಿ ರೈತರು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ಮಕ್ಕಳು ಜಾಣ್ಮೆಯಿಂದ ಅಭಿನಯಿಸಿ ತೋರಿಸಿದ್ದಾರೆ ನಾಡಿನ ಬೆನ್ನೆಲುಬಾದ ರೈತನ ಜೀವನದ ಕುರಿತು ಹಾಗೂ ಮಾನವೀಯ ಸಂಬಂಧಗಳ ಕುರಿತು ವಿದ್ಯಾರ್ಧಿಗಳಲ್ಲಿ ಭಾವನೆ ಮೂಡಿಸಲು ಇಂತಹ ಪ್ರದರ್ಶನಗಳಿಂದ ಸಾಧ್ಯ ಎಂದರು.

ಅಕ್ಕಮಹಾ ದೇವಿ ಮಹಿಳಾ ಸಂಘದ ಅಧ್ಯಕ್ಷೆ ಕೋಮಲಾ ದಿನೇಶ್ ಮಾತನಾಡಿ ಮಕ್ಕಳಲ್ಲಿ ಮಾನವೀಯ ಮೌಲ್ಯ ಸಾಹಿತ್ಯಾತ್ಮಕ ಭಾವನೆಗಳು ಬೆಳಸಲು ಇಂತಹ ಪ್ರದರ್ಶನಗಳು ಸಹಕಾರಿಯಾಗಲಿದೆ ಇದಕ್ಕೆ ಮುಂದಾದ ಶಾಲೆಗೆ ಅಭಿನಂದನೆಗಳನ್ನು ಸಲ್ಲಿಸುವುದಾಗಿ ತಿಳಿಸಿದರು.

ಹಾಸನ ಜಿಲ್ಲಾ ಕಾಫಿ ಬೆಳೆಗಾರರ ಸಂಘದ ನಿಕಟ ಪೂರ್ವ ಅಧ್ಯಕ್ಷ ಕೆ.ಬಿ. ಸುಬ್ರಹ್ಮಣ್ಯ ,ಸಾಹಿತ್ಯ ಪರಿಷತ್ತು ಅಧ್ಯಕ್ಷೆ ಶಾರದಾ ಗುರುಮೂರ್ತಿ,ಶಿಕ್ಷಕ ಛೇತನ್ ,ಜೆ.ಎಸ್ .ಎಸ್ ಶಾಲೆಯ ಶಿಕ್ಷಕರುಳು, ವಿದ್ಯಾರ್ಧಿಗಳು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed