ಸಕಲೇಶಪುರ : ಪಟ್ಟಣದ ಅರಣ್ಯ ಇಲಾಖೆ ಕಚೇರಿ ಆವರಣದಲ್ಲಿ ಅರಣ್ಯ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಚಿಣ್ಣರ ವನ ದರ್ಶನ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಬ್ಯಾಗ್, ಪುಸ್ತಕ ಹಾಗೂ ಟೋಪಿ ನೀಡಿ ನಂತರ ಬಸ್ ಸಂಚಾರಕ್ಕೆ ಹಸಿರು ಬಾವುಟ ತೋರಿಸಿದ ನಂತರ ಮಾತನಾಡಿದ ಶಾಸಕರು ನಿಜವಾಗಿಯೂ ಕೂಡ ಇದೊಂದು ಉತ್ತಮ ಕಾರ್ಯಕ್ರಮ. ಮಕ್ಕಳಿಗೆ ಪ್ರಾಣಿ, ಪಕ್ಷಿಗಳೆಂದರೆ ತುಂಬಾ ಪ್ರೀತಿ,ಸಕಲೇಶಪುರದಂತಹ ಊರಿನಲ್ಲಿ ಮಕ್ಕಳಿಗೆ ಕಾಡಾನೆಗಳು ಸಾಮಾನ್ಯವಾಗಿದೆ ಏಕೆಂದರೆ ಇಲ್ಲಿ ಆನೆಗಳನ್ನು ಬಹುತೇಕವಾಗಿ ಎಲ್ಲರೂ ನೋಡಿದ್ದಾರೆ.
ಕಾಡಿನಲ್ಲಿ ಸಾರಿ ಮಾಡುವುದರಿಂದ ಮಕ್ಕಳಿಗೆ ಬಹಳ ಸಂತೋಷವಾಗುತ್ತದೆ. ಬಹುತೇಕ ಪ್ರಾಣಿಗಳನ್ನು ಮಕ್ಕಳು ಪುಸ್ತಕದಲ್ಲಿ ಮಾತ್ರ ನೋಡಿರುತ್ತಾರೆ. ಆದರೆ ಈ ಕಾರ್ಯಕ್ರಮದಿಂದ ಮಕ್ಕಳು ಹಲವು ಪ್ರಾಣಿಗಳನ್ನು ನೇರವಾಗಿ ನೋಡಲು ಅವಕಾಶ ದೊರಕುತ್ತದೆ.
ಈ ಕಾರ್ಯಕ್ರಮದಿಂದ ಮಕ್ಕಳ ಸಾಮಾನ್ಯ ಜ್ಞಾನ ಹೆಚ್ಚಳವಾಗುತ್ತದೆ ಹಾಗೂ ಪರಿಸರದ ಕುರಿತು ಅರಿವು ಮೂಡುತ್ತದೆ.
ಈ ನಿಟ್ಟಿನಲ್ಲಿ ಮಕ್ಕಳು ಈ ಕಾರ್ಯಕ್ರಮವನ್ನು ಸದುಪಯೋಗ ಮಾಡಿಕೊಳ್ಳಬೇಕು ಹಾಗೂ ಮುಂದಿನ ದಿನಗಳಲ್ಲಿ ಎಲ್ಲಾ ಶಾಲೆಗಳಿಗೂ ಈ ಕಾರ್ಯಕ್ರಮವನ್ನು ವಿಸ್ತರಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮದುಸೂದನ್ ಮಾತನಾಡಿ ಪ್ರತಿ ವರ್ಷ ಸರ್ಕಾರಿ ಶಾಲೆಯ ಮಕ್ಕಳಿಗೆ ಅರಣ್ಯ ಹಾಗೂ ಪರಿಸರದ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ. ಪ್ರ
ಸ್ತುತ ಕೆಲಗಳಲೆ ಸರ್ಕಾರಿ ಶಾಲೆಯ 47 ಮಕ್ಕಳನ್ನು ಮುತ್ತೋಡಿ ಅ‘ಯಾರಣ್ಯಕ್ಕೆ 2 ದಿನಗಳ ಕಾಲ ಪ್ರವಾಸಕ್ಕೆ ಕಳುಹಿಸಲಾಗುತ್ತಿದೆ. ಪಶ್ಚಿಮ ಘಟ್ಟದಲ್ಲಿ ಹೆಚ್ಚಿನ ಅರಣ್ಯ ಪ್ರದೇಶವಿರುವುದರಿಂದ ಈ ಮರಗಳು ಮಳೆ ನೀರನ್ನು ಹೀರಿಕೊಳ್ಳುತ್ತದೆ ಇದರಿಂದ ‘ಭೂಮಿ ಎಂದು ಬತ್ತುವುದಿಲ್ಲ.
ಇತ್ತೀಚೆಗೆ ‘ಭೂಕುಸಿತಗಳ ಪ್ರಕರಣಗಳು ವರದಿಯಾಗುತ್ತಿದೆ ಇದಕ್ಕೆ ಕಾರಣ ಏನೆಂದರೆ ಅರಣ್ಯ ನಾಶ ಮಾಡುವುದು ಹೆಚ್ಚಾಗಿದೆ. ಪಶ್ಚಿಮಘಟ್ಟದ ಕಾಡುಗಳನ್ನು ಉಳಿಸಿ ಬೆಳೆಸುವುದು ನಿಮ್ಮಂತ ಮುಂದಿನ ಪೀಳಿಗೆಯ ಮಕ್ಕಳ ಮೇಲಿದೆ.
ಚಿಣ್ಣರ ವನ ಕಾರ್ಯಕ್ರಮ ಮುಗಿದ ನಂತರ ಸುಮ್ಮನಾಗದೆ ಪ್ರತಿಯೋರ್ವ ವಿದ್ಯಾರ್ಥಿಗಳು ತಮ್ಮ ಮನೆ ಅಥವಾ ಶಾಲೆಯ ಹತ್ತಿರ ಗಿಡವೊಂದನ್ನು ನೆಟ್ಟು ಪೋಷಣೆ ಮಾಡಬೇಕು ಹಾಗೂ ಪ್ರತಿಯೋರ್ವ ವಿದ್ಯಾರ್ಥಿಗಳು ಅರಣ್ಯ ಇಲಾಖೆಯ ಕಾರ್ಯದ ಕುರಿತು ಮಾಹಿತಿ ಹೊಂದಬೇಕು ಮತ್ತು ಕಾಡು ಪ್ರಾಣಿಗಳನ್ನು ನೋಡಿದರೆ ಅದರಿಂದ ಅಂತರ ಕಾದುಕೊಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ವಲಯ ಅರಣ್ಯಾಧಿಕಾರಿ ಹೇಮಂತ್, ಉಪವಲಯ ಅರಣ್ಯಾಧಿಕಾರಿಗಳಾದ ಹೇಮಂತ್, ದಿನೇಶ್ , ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ್ ತಗಡೂರು ಉಪಸ್ಥಿತರಿದ್ದರು