ಸಕಲೇಶಪುರ : ಪೌರಕಾರ್ಮಿಕರಾಗಿ ಸೇವೆ ಸಲ್ಲಿಸುತ್ತಿದ್ದ ಬಿ.ರಾಜು( ಹನುಮ) ಇಂದು ಹೃದಯಾಘಾತದಿಂದ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಇಂದು ಮದ್ಯಾಹ್ನ ಎದೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಬಿ.ರಾಜು (ಹನುಮ) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಚಿಕಿತ್ಸೆ ಫಲಕಾರಿಯಾಗದೆ ಇಂದು ನಿಧನ ಹೊಂದಿದ್ದು ಬಿ.ರಾಜು ಅವರು ಹನುಮ ಎಂಬ ಹೆಸರಿನಿಂದಲೇ ಎಲ್ಲರಲ್ಲೂ ಗುರುತಿಸಲ್ಪಡುತ್ತಿದ್ದರು,
ಇವರು ಪತ್ನಿ ಹಾಗೂ ಮಕ್ಕಳಿಲ್ಲದ ಕಾರಣ ಒಂದು ಹೆಣ್ಣು ಮಗುವನ್ನು ದತ್ತು ಪಡೆದು ಸಾಕುತ್ತಿದ್ದರು ಎಂದು ಹೇಳಲಾಗಿದೆ.
ಇವರು ಪ್ರೇಮನಗರ ಬಡಾವಣೆಯ ಶ್ರೀ ಕಪ್ಪಿನಕೋಡಿ ಚೌಡೇಶ್ವರಿ ದೇವಸ್ಥಾನದ ಮುಂಭಾಗ ವಾಸವಿದ್ದರು.
ಮೃತರ ಅಂತ್ಯಕ್ರಿಯೆ ನಾಳೆ ಸುಭಾಷ್ ಮೈದಾನದ ಸಮೀಪವಿರುವ ಸಾರ್ವಜನಿಕ ರುದ್ರಭೂಮಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.