ಹಾಸನ : ಕೃಷಿ ವಿಜ್ಞಾನ ಸಂಗ್ರಹಾಲಯ ಒಂದು ಉತ್ತಮ ಮಾಹಿತಿಯ ವೇದಿಕೆಯಾಗಿದ್ದು, ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳ ಕುರಿತು ವೈಜ್ಞಾನಿಕ ಮಾಹಿತಿಯನ್ನು ಒದಗಿಸುವಲ್ಲಿ ಮಹತ್ತರ ಪಾತ್ರವನ್ನು ವಹಿಸುತ್ತದೆ. “ನೋಡಿ-ಕಲಿ” ಎಂಬ ವ್ಯಾಖ್ಯಾನದೊಂದಿಗೆ ಭೇಟಿ ನೀಡುವ ವೀಕ್ಷಕರಿಗೆ ತಂತ್ರಜ್ಞಾನಗಳ ಕುರಿತು ಜ್ಞಾನಾರ್ಜನೆ ಮಾಡಿಕೊಡುತ್ತದೆ, ಈ ನಿಟ್ಟಿನಲ್ಲಿ, ಕೃಷಿ ಮಹಾವಿದ್ಯಾಲಯ, ಹಾಸನವು ಜ್ಞಾನದ ಆಗರವಾದ ಕೃಷಿ ವಿಜ್ಞಾನ ಸಂಗ್ರಹಾಲಯವನ್ನು ನಿರ್ಮಿಸಿದ್ದು ಅನೇಕ ತಂತ್ರಜ್ಞಾನಗಳ ಮಾಹಿತಿಯನ್ನು ಕೊಡುವಲ್ಲಿ ಒಂದು ಹೆಜ್ಜೆಯನ್ನು ಮುಂದಿಟ್ಟಿದೆ.

ಸಂಗ್ರಹಾಲಯದಲ್ಲಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು ಉಗಮ, ಉದ್ದೇಶಗಳು, ದೃಷ್ಟಿ, ಮಿಷನ್, ಗುರಿಗಳು, ಕೃಷಿ ಮಹಾವಿದ್ಯಾನಿಲಯ ಹಾಸನದ ಉಗಮ, ಶೈಕ್ಷಣಿಕ ಕಾರ್ಯಕ್ರಮಗಳು, ಹಾಸನ ಜಿಲ್ಲೆಯ ವಿವಿಧ ಕೃಷಿ ಹವಾಮಾನ ವಲಯಗಳ ಮಣ್ಣಿನ ಮಾದರಿ, ಮಣ್ಣು ವಿಜ್ಞಾನ, ಬೇಸಾಯ ಶಾಸ್ತ್ರ, ತೊಟಗಾರಿಕೆ, ಅರಣ್ಯ, ಪಶು ಸಂಗೋಪನೆ, ಕೃಷಿ ಯಾಂತ್ರೀಕರಣ, ರೇಷ್ಮೆ ಕೃಷಿ, ಸಮಗ್ರ ಕೃಷಿ ಪದ್ದತಿ, ಜೈವಿಕ ತಂತ್ರಜ್ಞಾನ, ಸಸ್ಯ ಸಂರಕ್ಷಣೆ, ಆಹಾರ ತಂತ್ರಜ್ಞಾನ, ಕೃಷಿ ವಿಸ್ತರಣಾ ಪದ್ದತಿಗಳು, ಹವಾಮಾನ ಚತುರ ಕೃಷಿ ಪದ್ದತಿ ಇತ್ಯಾದಿ., ಹೀಗೆ ಅನೇಕ ತಂತ್ರಜ್ಞಾನಗಳನ್ನು ಭಿತ್ತಿ ಚಿತ್ರಗಳು, ಗೋಡೆ ಬರಹ, ವಿವಿಧ ನೀರಾವರಿ ಪದ್ಧತಿಗಳು, ಗೂಬ್ಬರ ತಯಾರಿಕ ಪದ್ದತಿಗಳು, ಜಲಾನಯನ ಅಭಿವೃದ್ಧಿ ಹಾಗೂ ಇತರೆ ತಂತ್ರಜ್ಞಾನಗಳ ಮಾದರಿಯನ್ನು ಸಹ ಪ್ರದರ್ಶಿಸಲಾಗಿದೆ.

ಕೃಷಿ ವಿಜ್ಞಾನ ಸಂಗ್ರಹಾಲಯ, ತಂತ್ರಜ್ಞಾನಗಳ ಪ್ರಸರಣೆಯಲ್ಲಿ ಹೆಚ್ಚಿನ ಆದ್ಯತೆಯನ್ನು ಕೊಡುವುದರಿಂದ ಅನೇಕ ರೈತರು, ವಿಧ್ಯಾರ್ಥಿಗಳು ಹಾಗೂ ಇತರೆ ಸಾರ್ವಜನಿಕರು ಉಪಯೋಗ ಪಡೆಸಿಕೊಳ್ಳಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಡಾ.ಶಂಕರ ಎಂ ಎಚ್ ಮುಖ್ಯಸ್ಥರು, ಕೃವಿ,ಸ,. ಕೃಷಿ ಮಹಾವಿದ್ಯಾಲಯ, ಹಾಸನ

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *