ಸಕಲೇಶಪುರ: ಕಾಫಿ ತೋಟದ ಮಾಲೀಕರು ಕೂಲಿ ಕೆಲಸಕ್ಕೆ ಬಾಂಗ್ಲಾ ದೇಶಿಯರ ಮೇಲಿನ ವ್ಯಾಮೋಹ ಬಿಡಬೇಕು ಕಾರ್ಮಿಕರ ವ್ಯವಸ್ಥೆಯನ್ನು ಸಂಘಟನೆ ವತಿಯಿಂದ ಮಾಡಲಾಗುವುದು ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.

ಮಲೆನಾಡು ಭಾಗದ ಕಾಫಿ ತೋಟಗಳಲ್ಲಿ ಕೂಲಿ ಕಾರ್ಮಿಕರ ಸೋಜಿನಲ್ಲಿ ಅಕ್ರಮವಾಗಿ ಬಾಂಗ್ಲಾ ದೇಶಿಯರು ನೆಲೆಸಿದ್ದಾರೆ. ಇವರನ್ನು ಹೊರ ಹಾಕುವ ಕೆಲಸ ಮಾಡದಿದ್ದಲ್ಲಿ ಸ್ಥಳೀಯವಾಗಿ ಅಶಾಂತಿ ಹುಟ್ಟು ಹಾಕುವುದರಲ್ಲಿ ಅನುಮಾನವಿಲ್ಲ. ಕಾಫಿಯ ಎಸ್ಟೇಟ್ಗಳ ಮಾಲೀಕರಿಗೆ ಕೈಮುಗಿದು ಮನವಿ ಮಾಡುತ್ತೇನೆ

ನಮ್ಮ ದೇಶ ಉಳಿಸುವ ಕೆಲಸ ಮಾಡಿ ಉತ್ತರ ಕರ್ನಾಟಕ ಭಾಗದಿಂದ ಕಾರ್ಮಿಕರ ವ್ಯವಸ್ಥೆಯನ್ನು ನಾವು ಮಾಡುತ್ತೇವೆ. ಕೇಂದ್ರ ಸರ್ಕಾರವು ಬಾಂಗ್ಲಾ ದೇಶಿಯರನ್ನು ಹೊರ ಹಾಕಲು ನಿರ್ಲಕ್ಷ್ಯ ತೋರುತ್ತಿದೆ. ಈ ಹಿನ್ನೆಲೆಯಲ್ಲಿ ಸಂಘಟನೆ ವತಿಯಿಂದ ಬಾಂಗ್ಲಾದೇಶಿಯರ ಸರ್ವೆ ಮಾಡಿ ನಾವೇ ಓಡಿಸುವ ಕೆಲಸ ಮಾಡುತ್ತೇವೆ.

ರಘುರವರಂತಹ ಹಿಂದೂ ಮುಖಂಡರು ನಿಷ್ಕ್ರಿಯರಾಗಿ ಮನೆಯಲ್ಲಿ ಕೂರಬಾರದು, ಅವರ ಅವಶ್ಯಕತೆ ಹಿಂದೂ ಸಮಾಜಕ್ಕೆ ಇದೆ. ಸಂಘಟನೆ ವತಿಯಿಂದ ಪ್ರಮುಖರೊಡನೆ ಚರ್ಚೆ ಮಾಡಿ ಅವರಿಗೆ ಸೂಕ್ತ ಜವಾಬ್ದಾರಿ ಕೊಡುತ್ತೇವೆ. ಹಿಂದೂಗಳ ಸಮಾಜದಲ್ಲಿ ಭಯಗ್ರಸ್ಥರಾಗಿಯೆ ಬದುಕು ಸಾಗಿಸುವ ಪರಿಸ್ಥಿತಿ ನಿರ್ಮಾಣವಾಗಿದ್ದು ಈ ಹಿನ್ನೆಲೆಯಲ್ಲಿ ಸಮಾಜವನ್ನು ಕಟ್ಟುವ ಕೆಲಸವನ್ನು ಶ್ರೀರಾಮಸೇನೆ ಸದಾ ಮಾಡುತ್ತದೆ.

ಇಂದು ಸಂಜೆ ನಡೆಯಲಿರುವ ಹಿಂದೂ ಸಮಾಜೋತ್ಸವದಲ್ಲಿ ಎಲ್ಲಾರು ಪಾಲ್ಗೋಳ್ಳಿ ಎಂದರು.

ಈ ಸಂಧರ್ಭದಲ್ಲಿ ಹಿಂದೂ ಮುಖಂಡರಾದ ರಘು ಸಕಲೇಶಪುರ, ಹೆತ್ತೂರು ವಿಜಯ್ ಕುಮಾರ್, ಧರ್ಮೇಶ್, ಕೌಶಿಕ್, ಬೆಂಗಳೂರಿನ ಹಿಂದೂ ಮುಖಂಡ ತೇಜಸ್ ಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

By tv46malenadu

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *

You missed