
ಸಕಲೇಶಪುರ.ತಾಲ್ಲೂಕಿನ ರಕ್ಷಿದಿಯ ಕಾಫಿ ಬೆಳೆಗಾರರಾದ ಜಾನ್ ಲೋಬೋ ಹಾಗೂ ಏಗ್ನೆಸ್ ಲೋಬೋ ಅವರ ಒಂಬತ್ತು ಜನ ಮಕ್ಕಳಲ್ಲಿ ಮೂರನೆಯವರಾಗಿ ಏಪ್ರೀಲ್ 16 ರ 1946 ರಲ್ಲಿ ಜನಿಸಿದ ರೀಟಾ ಲೋಬೋ ಪ್ರಸೂತಿ ತಜ್ಞವೈದ್ಯರಾಗಿ ಹೆಸರಾದವರು.
ಗಂಗಾವತಿ, ಸಕಲೇಶಪುರ, ಹಾಗೂ ಹಾಸನದಲ್ಲಿ ಅನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದ ರೀಟಾ ಲೋಬೋ ಅತ್ಯುತ್ತಮ ಪ್ರಸೂತಿ ತಜ್ಞರೆಂದೂ ಹೆಸರು ಗಳಿಸಿದ್ದರಲ್ಲದೆ ಜನಾನುರಾಗಿ ಖ್ಯಾತಿಯಾಗಿದ್ದರು.
ಜಾನ್ ಲೋಬೋ ಅವರ ಇಡೀ ಕುಟುಂಬವೇ ದಾನಿಗಳೆಂದೂ, ಸಮಾಜ ಸೇವಕರೆಂದು ಹೆಸರಾದವರು.ಅತ್ಯುತ್ತಮ ಸಮಾಜ ಸೇವಕರೆಂದು ಹಾಗೂ ಸಾಮಾಜಿಕ ಕಾರ್ಯಕರ್ತರೆಂದ, ಪರಿಸರ ಪ್ರೇಮಿಯೆಂದು ಹೆಸರಾಗಿರುವ ರಿಚರ್ಡ್ ಲೋಬೋ ರೀಟಾ ಅವರ ಕಿರಿಯ ಸಹೋದರ.. ಕೆಲ ಕಾಲ ಅನಾರೋಗ್ಯದಿಂದ ಇದ್ದ, ರೀಟಾ ಲೋಬೋ ತಮ್ಮ ಎಪ್ಪತ್ತೊಂಬತ್ತನೆಯ ಜನ್ಮದಿನಾಚರಣೆ ಯ ಹಿಂದಿನ ದಿನವೇ ( 15/4/25) ನಿಧನರಾಗಿದ್ದಾರೆ.
ಆಫ್ರಿಕಾದಲ್ಲಿ ಉದ್ಯೋಗಿಯಾಗಿರುವ ಏಕೈಕ ಪುತ್ರಿ ಶ್ವೇತಾ ಸೇರಿದಂತೆ ನೂರಾರು ಬಂಧು ಮಿತ್ರರನ್ನು ರೀಟಾ ಅಗಲಿದ್ದಾರೆ.
ನಾಳೆ ಸಂಜೆ 16/4/25 ರಂದು ಸಂಜೆ ನಾಲ್ಕು ಗಂಟೆಗೆ ಸಕಲೇಶಪುರದ ಕ್ಯಾಥೊಲಿಕ್ ಚರ್ಚ್ ನಲ್ಲಿ ಅಂತ್ಯ ಕ್ರಿಯೆ ನಡೆಯಲಿದೆ ಎಂದು ಕುಟುಂಭದ ಮೂಲಗಳು ತಿಳಿಸಿವೆ.
