ಅರೇಹಳ್ಳಿ : ಬೇಲೂರು ತಾಲೂಕು ಅರೇಹಳ್ಳಿ ಹೋಬಳಿ ವ್ಯಾಪ್ತಿ ಪ್ರದೇಶದಲ್ಲಿ ಕಾಡಾನೆ ಹಾವಳಿ ಮಿತಿ‌ಮೀರಿರುವ ಹಿನ್ನೆಲೆಯಲ್ಲಿ ಕಾಡಾನೆಗಳಿಗೆ ರೇಡಿಯೋ ಕಾಲರ್ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಬೀಟಮ್ಮ -೨ ರ ಗುಂಪಿನಲ್ಲಿದ್ದ ಒಂದು ಕಾಡಾನೆಗೆ ಅಳವಡಿಸಲಾಗಿದ್ದ ರೇಡಿಯೋ ಕಾಲರ್ ಬ್ಯಾಟರಿ ಪ್ರಮಾಣ ಕ್ಷೀಣಿಸಿತ್ತು. ಈ ಹಿನ್ನೆಲೆಯಲ್ಲಿ ೬ ಕುಮ್ಕಿ ಆನೆಗಳ ಸಹಾಯದಿಂದ ಬಾಸುರದಲ್ಲಿ ಕಾಡಾನೆಯನ್ನು ಟ್ರ್ಯಾಕ್ ಮಾಡಲಾಯಿತು. ಬಳಿಕ ವೈದ್ಯಾಧಿಕಾರಿಗಳು ಡಾಟ್ ಮಾಡಿದರು. ನಂತರ ಹೊಸದಾದ ರೇಡಿಯೋ ಕಾಲರ್ ಅನ್ನು ಕಾಡಾನೆಗೆ ಯಶಸ್ವಿಯಾಗಿ ಅಳವಡಿಸಿ ಅಲ್ಲಿಯೆ ಬಿಡಲಾಯಿತು.

ಡಾಟ್ ಗೆ ಸಿಗದ ಮತ್ತೊಂದು ಕಾಡಾನೆ:ಒಂದು ಕಾಡಾನೆಗೆ ರೇಡಿಯೋ ಕಾಲರ್ ಯಶಸ್ವಿಯಾಗಿ ಅಳವಡಿಸಿದ ಬಳಿಕ ೨೦ ಆನೆಗಳಿರುವ ಡಿಸ್ಪ್ಯಾಚ್ಡ್ ಹರ್ಡ್ ನಲ್ಲಿರುವ ಒಂದು ಕಾಡಾನೆಗೆ ರೇಡಿಯೋ ಕಾಲರ್ ಅಳವಡಿಸಲು ಯೋಜನೆ ರೂಪಿಸಿಕೊಂಡು ಕಾನಹಳ್ಳಿ ಅರಣ್ಯ ಪ್ರದೇಶಕ್ಕೆ ನುರಿತ ಅನುಭವಿಗಳ ತಂಡ ತೆರಳಿತ್ತು. ಆದರೆ ಕಣ್ಣಿಗೆ ಕಾಣಿಸಿಕೊಂಡ ಕಾಡಾನೆಯು ಸಂಜೆಯಾದರೂ ಡಾಟ್ ಗೆ ಮಾತ್ರ ಸಿಗಲಿಲ್ಲ. ಕತ್ತಲಾಗುತ್ತಿದ್ದ ಕಾರದಿಂದಾಗಿ ಭಾನುವಾರದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು.

ಈ ವೇಳೆ ಡಿಎಫ್ ಒ ಸೌರಭ್ ಕುಮಾರ್, ಎಸಿಎಫ್ (ಇಟಿಎಫ್ ) ಉಮಾಪತಿ, ಆರ್ ಎಫ್ ಒ ಯತೀಶ್, ಹಾಸನ,ಹೊಳೆನರಸೀಪುರ ಹಾಗೂ ಚನ್ನರಾಯಪಟ್ಟಣ ವಲಯಾರಣ್ಯಾಧಿಕಾರಿಗಳು, ಇಟಿಎಫ್ ಸಿಬ್ಬಂದಿಗಳು ಹಾಗೂ ಇನ್ನಿತರರು ಇದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *