ಸಕಲೇಶಪುರ – ವಿಶ್ವ ಹಿಂದೂ ಪರಿಷದ್ ಬಜರಂಗದಳ ಸಕಲೇಶಪುರ ಕಾರ್ಯಕರ್ತರಿಂದ ಹಿಂದುತ್ವ ಬೆಂಬಲಿಸುವ ಅಭ್ಯರ್ಥಿಗೆ ಮತ ನೀಡಿ ಎಂದು ಜನಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಇಂದು ಬೆಳಗ್ಗೆ ಸಕಲೇಶ್ವರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿ ಹಿಂದೂ ಪರ ಬೆಂಬಲ ಮತ್ತು ಹಿಂದುತ್ವದ ಉಳಿವಿಗಾಗಿ ಶ್ರಮಿಸುವ ಅಭ್ಯರ್ಥಿ ಗೆಲ್ಲಿಸುವ ಜಾಗೃತಿ ಆಗಬೇಕು ಎಂದು ಹೇಳಿದರು. ಸಕಲೇಶಪುರದ 146 ಬೂತ್ ಗಳಲ್ಲಿ ಇರುವ ಎಲ್ಲಾ ಮನೆ-ಮನೆಗಳಿಗೆ ಕಾರ್ಯಕರ್ತರು ಹೋಗಿ ಮತದಾನ ಜಾಗೃತಿ ಮಾಡಿ ಹಿಂದೂ ಸಮಾಜದ ಉಳಿವಿಗಾಗಿ ಜಾತಿ ಮತ ಬಿಟ್ಟು ಹಿದುತ್ವದ ಪರವಾಗಿ ನಿಲ್ಲುವ ಅಭ್ಯರ್ಥಿಗೆ ಮತ ಚಲಾಯಿಸಿ ಗೆಲ್ಲಿಸುವ ಕಾರ್ಯ ಆಗಬೇಕು ಎಂದು ಸಂಘಟನೆ ಕಾರ್ಯಕರ್ತರು ತಿಳಿಸಿದರು. ಅಭಿವೃದ್ಧಿ ಜೊತೆಗೆ ಹಿಂದುತ್ವ ಮುಖ್ಯ ಆದ್ದರಿಂದ ಹಿಂದೂ ಸಮಾಜ ಜಾಗೃತಿ ಆಗಬೇಕಿದೆ. ಈ ಸಂದರ್ಭದಲ್ಲಿ ವಿಹಿಂಪ ರಾಜ್ಯ ಮುಖಂಡ ರಘು ಸಕಲೇಶಪುರ ಸೇರಿದಂತೆ ಬಜರಂಗದಳ ಜಿಲ್ಲಾ ಸಹ ಸಂಯೋಜಕ ಕೌಶಿಕ್, ತಾಲ್ಲೂಕು ಕಾರ್ಯದರ್ಶಿ ಮಂಜುನಾಥ, ಶೇಖರ್ ಕಬ್ಬಿನಗದ್ದೆ, ದೀಪಕ್, ವೀಜಿತ್, ರವಿ, ಅಶೋಕ್, ಮಲ್ಲಿಕಾರ್ಜುನ್ ಬಾಳ್ಳುಪೇಟಿ ಇತರರು ಇದ್ದರು.