ಸಕಲೇಶಪುರ : ಸಮಾಜದಲ್ಲಿ ಪತ್ರಿಕ ರಂಗವೂ ಸರ್ಕಾರದ 4ನೇ ಅಂಗವಾಗಿ ಕೆಲಸ ಮಾಡುತ್ತಿದ್ದು, ಪತ್ರಕರ್ತರಿಗೆ ಸರ್ಕಾರವು ಸ್ಪಂದಿಸುವ ಕೆಲಸವನ್ನು ಮಾಡಬೇಕು.
ಇಂದು ಲಯನ್ ಕ್ಲಬ್ ಸಕಲೇಶಪುರದಲ್ಲಿ ನೆಡೆದ ಮಾದ್ಯಮ ದಿನಾಚರಣೆ ಯಲ್ಲಿ ಮಾತಾಡಿದ ಜಿಲ್ಲಾ ಕಾರ್ಯನಿರತರ ಪತ್ರಕರ್ತ ಸಂಘದ ಅಧ್ಯಕ್ಷರಾದ ಬಾಳು ಗೋಪಾಲ್ ಮಾತನಾಡಿ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ಹತ್ತು ವರ್ಷಗಳಾದರೂ ಸ್ವಂತ ಪತ್ರಕರ್ತರ ಭವನವನ್ನು ನಿರ್ಮಿಸಿಕೊಳ್ಳಲು ಆಗುತ್ತಿಲ್ಲ.
ನೂತನ ಶಾಸಕರಾಗಿರುವ ಸಿಮೆಂಟ್ ಮಂಜಣ್ಣ ಅವರು ಈ ನಿಟ್ಟಿನಲ್ಲಿ ಗಮನಹರಿಸಿ, ಆದಷ್ಟು ಬೇಗ ತಾಲ್ಲೂಕಿನಲ್ಲಿ ಪತ್ರಕರ್ತರ ಭವನ ನಿರ್ಮಾಣಗೊಂಡು ಮುಂದಿನ ದಿನದಲ್ಲಿ ಪತ್ರಿಕಾ ದಿನಾಚರಣೆಯನ್ನು ಸ್ವಂತ ಕಟ್ಟಡದಲ್ಲಿ ಮಾಡುವಂತಾಗಲಿ.
ಜನಪ್ರತಿನಿಧಿಗಳು ಕೂಡ ಪತ್ರಿಕಾ ವರದಿಗಾರರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಯನ್ನು ಮಾಡಿಕೊಡುವ ಕೆಲಸಕ್ಕೆ ಒತ್ತಡ ಹೇರುವುದರೊಂದಿಗೆ, ಪತ್ರಿಕಾ ವರದಿಗಾರರಿಗೆ ಸ್ಪಂದಿಸುವಂತಹ ಸರ್ಕಾರ ಇರಬೇಕು ಇದರಿಂದ ಸ್ವಚ್ಛ ಸಮಾಜ ನಿರ್ಮಾಣವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ಪ್ರಾಸ್ತಾವಿಕ ನುಡಿ ಮಾತನಾಡಿದ ಅರುಣ್ ರಕ್ಷಿದಿಯವರು ಸರ್ಕಾರದಿಂದ ಬರುವ ಅನುದಾನದಲ್ಲಿ ಹೆಚ್ಚಿನ ಅನುದಾನ ಬರುವಂತೆ ಮಾನ್ಯ ನೂತನ ಶಾಸಕರು ಗಮನಹರಿಸಬೇಕು ಮುಂದಿನ ದಿನಗಳಲ್ಲಿ ಸ್ವಂತ ಕಟ್ಟಡದಲ್ಲಿ ಪತ್ರಿಕ ದಿನಾಚರಣೆಯನ್ನು ಆಚರಿಸುವ ಕನಸನ್ನು ಈ ಶಾಸಕರಿಂದ ಆಗಲಿ ಈ ನಿಟ್ಟಿನಲ್ಲಿ ಎಲ್ಲಾ ಪತ್ರಿಕೆ ವರದಿಗಾರರು ಶ್ರಮವಹಿಸಬೇಕು ಎಂದು ಕರೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಪತ್ರಿಕೆಗಳು ಓದುಗರ ಮೌಲ್ಯವನ್ನು ಉಳಿಸಿಕೊಳ್ಳುವಲ್ಲಿ ಎಡವುತ್ತಿದ್ದವೆ.ಮುಂದಿನ ದಿನಗಳಲ್ಲಿ ಒಳ್ಳೆಯ ಮೌಲ್ಯವನ್ನು ಉಳಿಸಿಕೊಳ್ಳುವ ಕೆಲಸವನ್ನು ಪತ್ರಿಕೆ ವರದಿಗಾರರು ಜೊತೆಗೆ ಹಾಸನದಲ್ಲಿ ಮಾಜಿ ಶಾಸಕರಾದ ಪ್ರೀತಮ್ ಗೌಡ ರವರು ತಮ್ಮ ಅಧಿಕಾರಾವಧಿಯಲ್ಲಿ ಮಾಡಿದ ಕೆಲಸವನ್ನು ಸಕಲೇಶಪುರದ ನೂತನ ಶಾಸಕರು ಮಾಡಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್ ಎಂ ಮಂಜುನಾಥ್, ಜಿಲ್ಲಾ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ವೇಣು ಕುಮಾರ್, ಲಯನ್ಸ್ ಅಧ್ಯಕ್ಷೆ ಬಬಿತ ವಿಶ್ವನಾಥ, ರೋಟರಿ ಸಂಸ್ಥೆಯ ಅಧ್ಯಕ್ಷ ಸದಾಶಿವ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹಾದೇವ, ತಾಲ್ಲೂಕು ಸಂಘದ ಪ್ರಧಾನ ಕಾರ್ಯದರ್ಶಿ ದಯಾನಂದ, ಸಾಮಾಜಿಕ ಹೋರಾಟಗಾರ ಯೆಡೇಹಳ್ಳಿ ಆರ್ ಮಂಜುನಾಥ್ , ಹಿಂದೂ ಮುಖಂಡ ರಘು ಸಕಲೇಶಪುರ, ಬಿಜೆಪಿ ಹಿರಿಯ ಮುಖಂಡ ಹೊಡಚ್ಚಹಳ್ಳಿ ರಾಮಚಂದ್ರೇಗೌಡ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಮಂಜುನಾಥ ಸಂಘ್ವಿ, ಕಸಾಪ ಅಧ್ಯಕ್ಷೆ ಶಾರದಾ ಗುರುಮೂರ್ತಿ, ಚಿಂತಕಿ ಮೀನಾಕ್ಷಿ ಖಾದರ್ , ರಂಗಕರ್ಮಿ ಪ್ರಸಾದ್ ರಕ್ಷಿದಿ, ಜೇನು ಪೋಷಕರ ಸಹಕಾರ ಸಂಘದ ಅಧ್ಯಕ್ಷ ಜೈಮಾರುತಿ ದೇವರಾಜ್, ಸಮಾಜ ಸೇವಕ ಎಸ್ ಎಸ್ ಅಸ್ಲಾಂ, ಸಮಾಜ ಸೇವಕಿಯರಾದ ಚನ್ನವೇಣಿ ಎಂ ಶೆಟ್ಟಿ, ಕೌಶಲ್ಯ ಲಕ್ಷಣ್ಣಗೌಡ, ನಿರ್ಮಲ ಪವಿತ್ರನ್, ಸುಂದ್ರಮ್ಮ, ಕಾಂಗ್ರೆಸ್ ತಾಲ್ಲೂಕು ಮಹಿಳಾ ಅಧ್ಯಕ್ಷೆ ಅನ್ನಪೂರ್ಣ, ಮಲೆನಾಡು ರಕ್ಷಣಾ ಸೇನೆ ರಾಜ್ಯ ಅಧ್ಯಕ್ಷ ಸಾಗರ್, ಕರಾವೇ ರಮೇಶ್ ಪೂಜಾರಿ, ವೀರಶೈವ ಯುವ ವೇದಿಕೆಯ ಸಂದೇಶ್ ಹೆಬ್ಬನಹಳ್ಳಿ, ಸವಿತಾ ಸಮಾಜದ ಅಧ್ಯಕ್ಷ ಸೋಮಶೇಖರ್, ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಭಾಸ್ಕರ್ ಹಾಗೂ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Mediea can do wonders if are 💯 professional ethics