ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ಆಗಸ್ಟ್ 02ರಂದು ಕುಟುಂಬ ಸಮೇತ ತೆಲಂಗಾಣದ ಖ್ಯಾತ ಜ್ಯೊತಿಷಿ ಮನೆಗೆ ಭೇಟಿ ನೀಡಿ ಗಮನ ಸೆಳೆದಿದ್ದಾರೆ.
ಎಚ್.ಡಿ.ರೇವಣ್ಣ ಹಾಗೂ ಕುಟುಂಬದ ಸದಸ್ಯರು ಇಂದು ತೆಲಂಗಾಣದ ಖ್ಯಾತ ಜ್ಯೊತಿಷಿ ವೇಣುಸ್ವಾಮಿ ಅವರನ್ನು ಭೇಟಿ ಆಗು ಆಶೀರ್ವಾದ ಪಡೆದರು.
ಇನ್ನು ಇದೇ ವೇಳೆ ರೇವಣ್ಣ ಅವರು ಜ್ಯೊತಿಷಿಗಳ ಸಮ್ಮುಖದಲ್ಲಿ ಪತ್ನಿ ಭವಾನಿ ರೇವಣ್ಣಗೆ ಹೂವಿನ ಹಾರ ಹಾಕಿ ಗಮನ ಸೆಳೆದರು.
ಎಚ್.ಡಿ.ರೇವಣ್ಣ, ಪತ್ನಿ ಭವಾನಿ ರೇವಣ್ಣ, ಪುತ್ರರಾದ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ವಿಧಾನಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ವೇಣುಸ್ವಾಮಿ ಅವರ ಆಶೀರ್ವಾದ ಪಡೆದಿದ್ದಾರೆ ಎಂದು ತಿಳಿದುಬಂದಿದೆ.