ಸಕಲೇಶಪುರ:- ಜನರಲ್ಲಿ ಆಧ್ಯಾತ್ಮಿಕ ಚಿಂತನೆಂತೆ ದೇಶಪ್ರೇಮವನ್ನು ಬಿತ್ತುವ ಕೆಲಸವನ್ನು ಮಠಗಳು ಮಾಡುತ್ತೀವೆ.ಇಂತಹ ಮಠ ಮಂದಿರಗಳಿಗೆ ಬರುವಾಗ ತಂದೆ ತಾಯಿಗಳು ಜೊತೆಯಲ್ಲಿ ಮಕ್ಕಳನ್ನು ಕರೆತರಬೇಕು. ಮಕ್ಕಳಲ್ಲಿ ಸಂಸ್ಕೃತಿ ಸಂಸ್ಕಾರವನ್ನು ಕಲಿಸಿ ಜೀವನ ಏನು ಎಂಬುದನ್ನು ಕಲಿಸಿಕೊಡುವುದರೊಂದಿಗೆ ಭಕ್ತಿ ಭಾವದ ರಾಷ್ಟ್ರಪ್ರೇಮವು ಬೆಳೆಸುತ್ತವೆ. ಎಂದು ಹೇಳಿದರು

ಸೋಮವಾರ ತಾಲ್ಲೂಕಿನ ಯಸಳೂರು ಹೋಬಳಿಯ ತೆಂಕಲಗೊಡು ಬೃಹನ್ಮಠದಲ್ಲಿ ಆಯೋಜಿಸಲಾಗಿದ್ದ ಪಂಚಮಹೋತ್ಸವ ಧಾರ್ಮಿಕ ಸಮ್ಮೇಳನ ಕಾರ್ಯಕ್ರಮದಲ್ಲಿ ಆರ್ಶೀವಚನ ನೀಡಿದರು.”ದೇಶಕ್ಕಾಗಿ ಹೋರಾಡಿದವರನ್ನು ನಾವು ದೇವರ ರೀತಿ ಪೂಜೆ ಮಾಡುವುದು ದೇಶದ ಸಂಸ್ಕೃತಿ. ದೇಶ ಉಳಿದರೆ ನಾವು ನಮ್ಮ ಮನೆ, ನಮ್ಮ ಮನೆಯವರು ಉಳಿದಂತೆ. ಧರ್ಮ ಯಾವುದೇ ಜಾತಿ ಪಂತಿಗೆ ಸೇರಿದ್ದಲ್ಲ. ಜಾತಿ ಪಂತಿಯನ್ನು ಮೀರಿದ್ದು ಧರ್ಮ. ಬಿದ್ದವನನ್ನ, ಬೀಳುತ್ತಿರುವವನನ್ನ, ಬೀಳಲಿರುವವನನ್ನ ಎತ್ತಿ ಹಿಡಿಯುವುದೇ ಧರ್ಮ. ಆಧ್ಯಾತ್ಮಿಕದಷ್ಟೇ ದೇಶಪ್ರೇಮವನ್ನು ಉಂಟುಮಾಡುವ ಕೆಲಸ ಮಠಗಳು ಮಾಡುತ್ತೀವೆ.

ಮಠದಲ್ಲಿ ಶಿವಾಚಾರ್ಯಗಳು ಎಷ್ಟು ವಿದ್ವಾಂಸರಾಗಿರುತ್ತಾರೋ ಅಷ್ಟು ದೊಡ್ಡ ಮಟ್ಟದಲ್ಲಿ ಧರ್ಮದ ಜಾಗರಣೆ ಮಠದಿಂದ ಆಗುತ್ತದೆ.ಭಕ್ತರ ಮನಸ್ಸಿನಲ್ಲಿ ಧರ್ಮದ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮನುಷ್ಯನ ಚಂಚಲ ಮನಸ್ಥಿತಿಗೆ ಕಡಿವಾಣ ಹಾಕಲು ಕೇವಲ ಆಧ್ಯಾತ್ಮದಿಂದ ಮಾತ್ರ ಸಾಧ್ಯ.ಭಾರತದ ಧರ್ಮ ಸನಾತನ ಧರ್ಮ. ಸನಾತನ ಧರ್ಮದಿಂದ ಬೇರೆ ಹೋಗಿದ್ದರು ಕೂಡ ಅವರ ಮೂಲ ಸನಾತನ ಧರ್ಮದಾಗಿದೆ. ಪ್ರಸ್ತುತ ಸನ್ನಿವೇಶದಲ್ಲಿ ಧರ್ಮ ರಕ್ಷಣೆ ಕಾರ್ಯ ಅತ್ಯಂತ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಮಠಗಳು ಕೆಲಸ ಮಾಡುತ್ತಿವೆ. ಮಠಗಳ ಈ ಕಾರ್ಯಕ್ಕೆ ಭಕ್ತರು ಸಹಕಾರ ನೀಡುವ ಮೂಲಕ ಸಮಾಜವನ್ನು ಸುಭದ್ರಗೊಳಿಸಲು ಕೈಜೋಡಿಸ ಬೇಕು.ಎಂದು ಹೇಳಿದರು.

ನುಗ್ಗೆಹಳ್ಳಿ ಹಿರೇಮಠದ ಶ್ರೀ ಡಾ.ಮಹೇಶ್ವರಶಿವಚಾರ್ಯ ಸ್ವಾಮಿಜಿ ಮಾತನಾಡಿ,ಮಠಗಳು ಸಂಸ್ಕೃತಿ ಸಂಸ್ಕಾರ ಕಲಿಸುತ್ತವೆ.ವೀರಶೈವ ಧರ್ಮವು ಮಗು ಜನಿಸುವ ಮುನ್ನ ಸಂಸ್ಕಾರ ನೀಡುವ ಧರ್ಮ.ಮಗು ಹುಟ್ಟುವ ಮುನ್ನವೇ ತಾಯಿಗೆ ಲಿಂಗಕಟ್ಟಲಾಗುತ್ತದೆ. ಹೀಗೆ ಕಟ್ಟುವ ಲಿಂಗಕ್ಕೆ ಲಿಂಗೋದ್ಬವ ಎನ್ನುತ್ತವೆ. ಹಸ್ತವನ್ನೆ ಪೀಠವನ್ನಾಗಿ ಇಟ್ಟು, ಅಂಗದ ಮೇಲೆ ಲಿಂಗವನ್ನು ಇಟ್ಟು ಪೂಜಿಸುವನೇ ಲಿಂಗಾಯಿತ. ಸದಾ ಲಿಂಗದಾರಿಗಳಾಗಿದ್ದರೆ ಮಾತ್ರ ಧರ್ಮಶ್ರೇಷ್ಠರಾಗಲು ಸಾಧ್ಯ. ತಮ್ಮ ಧರ್ಮವನ್ನು ಪ್ರದರ್ಶಿಸುವನಂಥವುಗಳನ್ನು ನಾವು ಅಂಜಿಕೆ ಇಲ್ಲದೆ ಧರಿಸ ಬೇಕು.ಪ್ರಸ್ತುತ ಸನ್ನಿವೇಶದಲ್ಲಿ ವಿಂಗಡಣೆಯಿಯಿಂದ ವಿನಾಶ ಒಗ್ಗಟ್ಟಿನಿಂದ ವಿಸ್ತರಣೆ ಎಂಬುದನ್ನು ಮನದಲ್ಲಿಟ್ಟುಕೊಳ್ಳುವುದು ಅಗತ್ಯ. ಇಂದು ಹಿಂದೂ ಧರ್ಮ ಹಲವು ದಾಳಿಗಳನ್ನು ಎದುರಿಸಿ ನಿಲ್ಲಬೇಕಾದ ಸಂಕಷ್ಟದ ಪರಿಸ್ಥಿತಿಯಲ್ಲಿದ್ದು ಜನರು ಜಾಗೃತರಾಗುವುದು ತೀರ ಅಗತ್ಯ ಎಂದರು.

ಶಾಸಕ ಸಿಮೆಂಟ್ ಮಂಜುನಾಥ್ ಮಾತನಾಡಿ,ನಾವು ಸಮಾಜದ ಒಳಿತಿಗಾಗಿ ಏನನ್ನು ಮಾಡುವ ಮನಸಿಲ್ಲದಿದ್ದರೂ ನಮ್ಮ ಕುಟುಂಬದವರಿಗೋಸ್ಕರ ಏನು ಬೇಕಾದರೂ ಮಾಡುತ್ತೇವೆ. ಈಡೀ ಸಮಾಜದ ಹಿತಗೋಸ್ಕರ ಕೆಲಸ ಮಾಡುವವರು ಮಠಾಧೀಶರು. ಬಡ ಮಕ್ಕಳಿಗೆ ಅನ್ನವನ್ನು ಕೊಡುವುದರ ಜೊತೆಗೆ ವಿದ್ಯೆಯನ್ನು ಕೊಡುತ್ತಾ ಒಂದು ಸರ್ಕಾರ ಮಾಡಬೇಕಾದ ಸಮಾಜಮುಖಿ ಕೆಲಸವನ್ನು ಇವರು ಮಾಡುತ್ತಿದ್ದಾರೆ. 500 ವರ್ಷಗಳ ಹೋರಾಟದ ಪ್ರತಿಫಲವಾದ ಶ್ರೀ ರಾಮಮಂದಿರವನ್ನು ಹಾಗೂ 144 ವರ್ಷಗಳಿಗೊಮ್ಮೆ ನಡೆಯುವ ಮಹಾ ಕುಂಭಮೇಳದ ದರ್ಶನವನ್ನು ಪಡೆಯುವ ಭಾಗ್ಯ ನಮ್ಮದಾಗಿದೆ.

ಪಕ್ಕದ ರಾಷ್ಟ್ರ ಪಾಕಿಸ್ತಾನ ನಮ್ಮ ದೇಶದ ಮೇಲೆ ಕಾಲು ಕೆರೆದು ಅನಾವಶ್ಯಕವಾಗಿ ಮುಗ್ಧ ಸಾರ್ವಜನಿಕರ ಜೀವನ ಬಲಿತಗೊಂಡಿದ್ದಕ್ಕೆ ಈ ದೇಶದ ಹೆಮ್ಮೆಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಕೊಟ್ಟ ಉತ್ತರ ಬೇರೆ ದೇಶದವರು ನಿಗ್ಬೆರರಾಗಿ ನೋಡುವಂತೆ ಮಾಡಿದೆ. ದೇಶ ಕಾಯುವ ಸೈನಿಕರಿಗೆ ಹಾಗೂ ದೇಶವನ್ನು ನಡೆಸುತ್ತಿರುವ ಪ್ರಧಾನಿಯವರಿಗೆ ಆ ಭಗವಂತ ಶಕ್ತಿಯನ್ನು ಕೊಡಲಿ. ಹಾಗೆ ಸದಾ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಾ ಬರುತ್ತಿರುವ ತೆಂಕಲಗೂಡು ಮಠದ ಶ್ರೀಗಳಿಂದ ಇನ್ನಷ್ಟು ಸಮಾಜಮುಖಿ ಕೆಲಸಗಳಾಗಲಿ ಎಂದರು.

ಬೇಲೂರು ಮಾಜಿ ಶಾಸಕ ಲಿಂಗೇಶ್ ಮಾತನಾಡಿ,ಹಿಂದೂಗಳು ಜಾತಿ ಆಧಾರದಲ್ಲಿ ವಿಭಜನೆ ಆಗಬಾರದು.ಒಗ್ಗಟ್ಟಿನಲ್ಲಿ ಶಕ್ತಿ ಇದೆ.ಅನ್ಯರು ಧರ್ಮದ ಹೆಸರಿನಲ್ಲಿ ಒಡೆಯುವ ಕೆಲಸ ಮಾಡುತ್ತಿದ್ದಾರೆ.ಇದಕ್ಕೆ ಉದಾಹರಣೆ ಪೆಹಲ್ಗಾಮ್‌ನಲ್ಲಿ ನಡೆದ ದಾಳಿ ಧರ್ಮ ಆಧಾರಿಸಿದ್ದೆ ಹೊರತು ಜಾತಿ ಆಧಾರಿಸಿಯಲ್ಲ. ಈ ನಿಟ್ಟಿನಲ್ಲಿ ಜನರು ಎಚ್ಚೇತ್ತುಕೊಳ್ಳ ಬೇಕು ಎಂದರು.

ಆದಾಯ ತೆರಿಗೆ ಇಲಾಖೆ ಭಾರತ ಸರ್ಕಾರ ಅಪರ ನಿರ್ದೇಶಕರಾದ ಸೌಮ್ಯ. ವಿ ಮಾತನಾಡಿ ಹಳ್ಳಿ ಭಾಗದ ಹೆಚ್ಚು ಮಹಿಳೆಯರು ಸರ್ಕಾರಿ ಸೇವೆಯಲ್ಲಿ ತೊಡಗಿಸಿಕೊಳ್ಳು ವಂತಾಗಬೇಕು, ಈ ನಿಟ್ಟಿನಲ್ಲಿ ವಿದ್ಯಾರ್ಥಿನಿಯರು ತಮ್ಮ ಗುರಿಯತ್ತ ಪ್ರತಿದಿನ ಅವಿರತ ಪ್ರಯತ್ನವನ್ನು ಮಾಡಬೇಕು. ಸತತ ಪ್ರಯತ್ನದಿಂದ ಇದು ಸಾಧ್ಯವಾಗುತ್ತದೆ. ಮಠಗಳು ಮಹಿಳೆಯರಿಗೂ ಸಂಸ್ಕೃತಿಯನ್ನು ಕಲಿಸಿ ಉಳಿಸಿ ಬೆಳೆಸಿಕೊಂಡು ಹೋಗುವ ನಿಟ್ಟಿನಲ್ಲಿ ಮಾರ್ಗದರ್ಶಕವಾಗಿವೆ. ಎಂದರುಈ ಸಂದರ್ಭದಲ್ಲಿ ‘ಶ್ರೀ ಸಿದ್ಧಾಂತ ಶಿಖಾಮಣಿ ಗ್ರಂಥ’ ಬಿಡುಗಡೆ ಮಾಡಲಾಯಿತು.

ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಯಸಳೂರು ಗ್ರಾಮದ ಮುಖ್ಯ ಬೀದಿಯಲ್ಲಿ ಕಾಶಿ ಜಗದ್ಗುರಗಳನ್ನು ನೂರಾರು ಮಹಿಳೆಯರ ಕುಂಭಮೇಳದೊಂದಿಗೆ ಅಡ್ಡಪಲ್ಲಕ್ಕಿ ಉತ್ಸವದೊಂದಿಗೆ ಕರೆತರಲಾಯಿತು. ದಾನಿಗಳಿಗೆ ಹಾಗೂ ವಿವಿಧ ರಂಗದಲ್ಲಿ ಸೇವೆ ಸಲ್ಲಿಸಿದವರಿಗೆ ಗುರುರಕ್ಷೆ ನೀಡಲಾಯಿತು.ವೇದಿಕೆಯಲ್ಲಿ ಮುದ್ದಿನಕಟ್ಟೆ ಮಠದ ಶ್ರೀ ಅಭಿನವ ಸಿದ್ದಲಿಂಗ ಸ್ವಾಮಿಜಿ, ಕಲ್ಲಮಠದ ಶ್ರೀ ಮಹಾಂತಸ್ವಾಮಿಜಿ, ಕಿರಿಕೊಡ್ಲಿಮಠದ ಸದಾಶಿವಸ್ವಾಮಿಜಿ, ಕೋಠಿಮಠದ ಶ್ರೀ ಚೇತನ ಮರಿದೇವಸ್ವಾಮಿಜಿ, ಕರಿಸಿದ್ದೇಶ್ವರಸ್ವಾಮಿ ಮಠದ ಶ್ರೀ ಶಿವಪ್ರಕಾಶ ಸ್ವಾಮಿಜಿ, ಹೆಗಡಹಳ್ಳಿ ಮಠದ ಶ್ರೀ ಷಡ್ಬಾವರಹಿತೇಶ್ವರ ಸ್ವಾಮಿಜಿ,ತೆಂಕಲಗೂಡು ಮಠದ ಶ್ರೀ ಚನ್ನಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಿವಮೊಗ್ಗ ಜಿಲ್ಲೆಯ ವಿಜಯವಾಣಿ ಸಹ ಸಂಪಾದಕರಾದ ರಘುರಾಮ್ ಹಾಗೂ ವಿರಶೈವ ಸಮಾಜದ ಮುಖಂಡರುಗಳು ಇನ್ನಿತರರು ಉಪಸ್ಥಿತರಿದ್ದರು.

By tv46 Kannada digital

ನೇರ, ನಿಷ್ಪಕ್ಷಪಾತ, ನಿಖರವಾದ ಸುದ್ದಿಗಳಿಗೆ ನಮ್ಮೊಂದಿಗೆ ಕೈಜೋಡಿಸಿ

Leave a Reply

Your email address will not be published. Required fields are marked *